Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ವಿರೋಧದ ಮಧ್ಯೆಯೂ HN ವ್ಯಾಲಿಗೆ ಸಿಎಂ ಸಿದ್ದು ಶಂಕುಸ್ಥಾಪನೆ

Monday, 18.09.2017, 9:00 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಸೋಮವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ:

1. ದೇವರ ನಾಡು ಕೇರಳದಲ್ಲಿ ವರುಣನ ಅಬ್ಬರ- ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ನದಿಗಳು- ವಿರಾಜಪೇಟೆಯಲ್ಲೂ ಭಾರಿ ಮಳೆ, ಶಾಲಾ ಕಾಲೇಜಿಗೆ ರಜೆ

2. ಎಕ್ಸಾಂ ಬರೆದ್ರೂ ಬರಲೇಇಲ್ಲ ರಿಸಲ್ಟ್‌- ಫಲಿತಾಂಶ ಕೇಳಿದ್ರೆ ಬೇಜವಾಬ್ದಾರಿ ಉತ್ತರ- ಕೆಇಎ ಎಡವಟ್ಟಿಗೆ ತುಮಕೂರು ವಿದ್ಯಾರ್ಥಿನಿ ಕಂಗಾಲು

3. ದೆಹಲಿಯಲ್ಲಿ ವೀರಾ ಸೇನಾನಿಯ ಅಂತಿಮ ಯಾತ್ರೆ- ಮಧ್ಯಾಹ್ನ ಅರ್ಜನ್‌ಸಿಂಗ್‌ ಅಂತ್ಯ ಸಂಸ್ಕಾರ- ಪಾಕ್‌ ಯುದ್ಧದ ಹೀರೋಗೆ ಗಣ್ಯರ ಸೆಲ್ಯೂಟ್‌

4. ವಿಷ್ಣು ಜನುಮದಿನ ಆಚರಿಸುತ್ತಿರುವ ಫ್ಯಾನ್ಸ್​- ರಾತ್ರಿಯೇ ಬರ್ತ್​ಡೇ ಆಚರಿಸಿಕೊಂಡ ಉಪ್ಪಿ- ಕರ್ಪೂರದ ಗೊಂಬೆಗೂ ಹುಟ್ಟುಹಬ್ಬದ ಸಂಭ್ರಮ


5. ವಿರೋಧದ ಮಧ್ಯೆಯೂ ಸಿಎಂರಿಂದ HN ವ್ಯಾಲಿಗೆ ಶಂಕುಸ್ಥಾಪನೆ

ಚಿಕ್ಕಬಳ್ಳಾಪುರ: HN ವ್ಯಾಲಿ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಸಿಎಂ ಸಿದ್ದರಾಮಯ್ಯ ಇಂದು ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಹಿನ್ನಲೆ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.

HN ವ್ಯಾಲಿ ಯೋಜನೆ ವಿರೋಧಿಸಿ ಇಂದು ಚಿಕ್ಕಬಳ್ಳಾಪುರ ಬಂದ್​ಗೆ ಶಾಶ್ವತ ನೀರಾರವರಿ ಹೋರಾಟಗಾರರು ಕರೆ ನೀಡದ್ದರು. HN ವ್ಯಾಲಿ ಕಾರ್ಯಕ್ರಮದ ಉದ್ಘಾಟನೆ ವೇಳೆ ಹೋರಾಟಗಾರರು ಪ್ರತಿಭಟನೆ ಮಾಡುವ ಶಂಕೆ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಹೋರಾಟಗಾರರನ್ನು ಪೊಲೀಸರು ಬಂಧಿಸಿ ಅಜ್ಞಾತ ಸ್ಥಳದಲ್ಲಿರಿಸಿದ್ದಾರೆ.

ಪ್ರತಿಭಟನೆಯಿಂದ ಸಿಎಂ ಸಿದ್ದರಾಮಯ್ಯರಿಗೆ ಆಗುವ ಮುಜುಗರವನ್ನು ತಪ್ಪಿಸಲು ಮುಂಚಿತವಾಗಿ ಬಂಧನ ಮಾಡಲಾಗಿದೆ. ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ, ಯುವ ಮುಖಂಡ ವಿಜಯ್ ಭಾವಾರೆಡ್ಡಿ ಹಾಗೂ ರೈತ ಸಂಘಟನೆಯ ನಾರಾಯಣಸ್ವಾಮಿ ಎಂಬುವವರನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top