Sunday, 23rd July 2017  

Vijayavani

1. ಕೊಪ್ಪಳದ ಖೋಟಾನೋಟು ಪ್ರಕರಣಕ್ಕೆ ಹೊಸ ಟ್ವಿಸ್ಟ್​- ಐವರಲ್ಲಿ ಮೂವರು ಆರೋಪಿಗಳು ಅರೆಸ್ಟ್- ವೈಯಕ್ತಿಕ ದ್ವೇಷಕ್ಕೆ ಬಲಿಯಾಗಿದ್ದ ಉಪನ್ಯಾಸಕ 2. ಮಳೆಗೆ ಹಾರಂಗಿ ಜಲಾಶಯ ಬಹುತೇಕ ಭರ್ತಿ- ಡ್ಯಾಂನಿಂದ 1,200 ಕ್ಯೂಸೆಕ್ ನೀರು ಬಿಡುಗಡೆ- ನದಿಪಾತ್ರದ ಜನರಿಗೆ ಎಚ್ಚರದಿಂದಿರಲು ಸೂಚನೆ 3. ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವಕರ್ಮ ಸಮಾವೇಶ- ಸಮುದಾಯದಿಂದ ಬಿಎಸ್​ವೈಗೆ ಸನ್ಮಾನ- ಬಿಜೆಪಿ ಹಲವು ಮುಖಂಡರು ಹಾಜರ್‌ 4. ಕಾಂಗ್ರೆಸ್​ ಕದ ತಟ್ಟಿದ ಜೆಡಿಎಸ್​ ರೆಬೆಲ್ಸ್​- ಇನ್ನೆರಡು ತಿಂಗಳಲ್ಲಿ ಸೇರ್ಪಡೆ ಖಚಿತ- ಇನ್ನೂ ಏಳು ಜನ ಬರ್ತಾರೆಂದು ಜಮೀರ್​ ಬಾಂಬ್​ 5. ವನಿತೆಯರ ವಿಶ್ವಕಪ್‌ನಲ್ಲಿ ಇಂಡೋ- ಇಂಗ್ಲೆಂಡ್‌ ಫೈಟ್- ಟಾಸ್‌ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ- ಟೀಂ ಇಂಡಿಯಾಗೆ ದೇಶ ಜನರಿಂದ ಆಲ್​ ದ ಬೆಸ್ಟ್​
Breaking News :

ಸಿಐಎಸ್​ಎಫ್ ಯೋಧನಿಂದ ಗುಂಡು ಹಾರಾಟ, 4 ಸಹೋದ್ಯೋಗಿ ಸಾವು

Thursday, 12.01.2017, 3:36 PM       No Comments

ಔರಂಗಾಬಾದ್ (ಬಿಹಾರ): ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್​ಎಫ್) ಯೋಧನೊಬ್ಬ ಬಿಹಾರಿನ ಔರಂಗಾಬಾದ್ ಜಿಲ್ಲೆಯಲ್ಲಿ ಗುರುವಾರ ಸಹೋದ್ಯೋಗಿಗಳ ಮೇಲೆ ನಡೆಸಿದ ಯದ್ವಾತದ್ವ ಗುಂಡು ಹಾರಾಟದಲ್ಲಿ 4 ಯೋಧರು ಸಾವನ್ನಪ್ಪಿದ್ದಾರೆ. ಘಟನಾಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದರೆ, ಗಾಯಗೊಂಡ ಇಬ್ಬರು ಬಳಿಕ ಅಸು ನೀಗಿದ್ದಾರೆ.

ಯೋಧ ತನ್ನ ಸೇವಾ ಶಸ್ತ್ರವನ್ನು ಬಳಸಿ ಈ ಗುಂಡು ಹಾರಾಟ ನಡೆಸಿದ್ದು, ಇಬ್ಬರು ಗುಂಡೇಟಿಗೆ ಬಲಿಯಾದರೆ, ಇಬ್ಬರು ತೀವ್ರ ಗುಂಡೇಟಿನ ಗಾಯಗಳಿಗೆ ಒಳಗಾಗಿ ಬಳಿಕ ಅಸುನೀಗಿದರು ಎಂದು ವರದಿಗಳು ಹೇಳಿವೆ.

ರಜೆ ಸಿಕ್ಕಿಲ್ಲ ಎಂಬ ಆಕ್ರೋಶದಿಂದ ಯೋಧ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಸಿಟ್ಟಿಗೆದ್ದಿದ್ದ ಯೋಧ ಮಧ್ಯಾಹ್ನ 12 ಗಂಟೆ ಸುಮಾರಿಗೆ ತನ್ನ ಶಸ್ತ್ರವನ್ನು ಹಿಡಿದುಕೊಂಡು ನಾಲ್ವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸತೊಡಗಿದ. ಇಬ್ಬರು ಯೋಧರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇಬ್ಬರು ಯೋಧರು ತೀವ್ರವಾಗಿ ಗಾಯಗೊಂಡರು. ಗಾಯಾಳು ಯೋಧರನ್ನು ನವೀನಗರ ಆಸ್ಪತ್ರೆಗೆ ಒಯ್ದರೂ ಪ್ರಯೋಜನವಾಗಲಿಲ್ಲ ಎಂದು ವರದಿಗಳು ತಿಳಿಸಿವೆ.

ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತ್ಯ ಪ್ರಕಾಶ್ ತಿಳಿಸಿದರು. ಸುದ್ದಿ ತಿಳಿಯುತ್ತಿದ್ದಂತೆಯೇ ಸಿಐಎಸ್​ಎಫ್ ಡಿಜಿ ಮತ್ತು ಐಜಿ ಔರಂಗಾಬಾದಿಗೆ ಧಾವಿಸಿದರು.

– ಏಜೆನ್ಸೀಸ್.

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *

ten + 12 =

Back To Top