Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ತರಳಬಾಳು ಶ್ರೀಗಳ ಚಿತ್ರ ಸಂಹಿತೆ

Tuesday, 03.04.2018, 3:02 AM       No Comments

ದೇವಾಲಯ, ಧಾರ್ವಿುಕ ಕೇಂದ್ರಗಳು, ಮಠ, ಮಾನ್ಯಗಳಿಗೆ ಭೇಟಿ ಕೊಡುವ ನಿಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್ ಮೊದಲಾದ ರಾಜಕೀಯ ಪಕ್ಷಗಳ ನಡುವೆ ಪೈಪೋಟಿ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ದೇಶದ ಪ್ರಸಿದ್ಧ ಮಠಗಳಲ್ಲಿ ಒಂದಾದ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಮಠದ ಶ್ರೀಗಳು ಹಿಂದಿನ ಸಂಸತ್ ಚುನಾವಣೆ ವೇಳೆಯಲ್ಲಿ ವಿಧಿಸಿದ್ದ ಚಿತ್ರ ಸಂಹಿತೆ ನೆನಪಾಗುತ್ತದೆ. ಮಠಗಳಿಗೆ ಬಂದು ಆಶೀರ್ವಾದ ಪಡೆಯಿರಿ. ಆದರೆ, ತಮ್ಮ ಜತೆ ಇರುವ ಚಿತ್ರ ತೆಗೆದುಕೊಳ್ಳಬೇಡಿ ಎಂದು ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರಿಗೆ ಕಳೆದ ಲೋಕಸಭಾ ಚುನಾವಣೆ ವೇಳೆ ತಾಕೀತು ಮಾಡಿದ್ದರು.

ನಾನಾ ಅಭ್ಯರ್ಥಿಗಳು ಮಠಗಳಿಗೆ ಬಂದು ಶ್ರೀಗಳ ಆಶೀರ್ವಾದ ಪಡೆದ ಬಳಿಕ ಫೋಟೊಗಳನ್ನು ಪತ್ರಿಕೆ, ಅಂತರ್ಜಾಲದಲ್ಲಿ ಪ್ರಕಟಿಸಿಕೊಂಡು ಶ್ರೀಗಳು ತಮ್ಮನ್ನೇ ಬೆಂಬಲಿಸಿದ್ದಾರೆಂಬರ್ಥದಲ್ಲಿ ನಡೆಸುವ ಬಹುದಾದ ಪ್ರಚಾರಕ್ಕೆ ಬ್ರೇಕ್ ಹಾಕಲು ಶ್ರೀಗಳು ಉಪಾಯ ಮಾಡಿದ್ದರು. ಚುನಾವಣಾ ಸುಧಾರಣೆಗೆ ನಿರಂತರ ಪ್ರಯತ್ನಗಳನ್ನು ಮಾಡುತ್ತಿರುವ ಶ್ರೀಗಳು, ಅಂದು ವಿಧಿಸಿದ್ದ ಫೋಟೊ ಸಂಹಿತೆಯಿಂದಾಗಿ ಅಂದಿನ ಚುನಾವಣೆ ಸಂದರ್ಭದಲ್ಲಿ ಹಲವು ರಾಜಕೀಯ ಪ್ರಮುಖರಿಗೆ ನಿರಾಶೆ ಆಗಿದ್ದಂತೂ ನಿಜ.

 

Leave a Reply

Your email address will not be published. Required fields are marked *

Back To Top