Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

6 ಬಾರಿ ಮಧ್ವರಾಜ್ ಕುಟುಂಬ!

Monday, 02.04.2018, 3:03 AM       No Comments

ತಂದೆ, ತಾಯಿ, ಮಗ.. ಒಂದೇ ಕ್ಷೇತ್ರದಲ್ಲಿ ಶಾಸಕರಾಗಿದ್ದಾರೆ. ಇದು ಕೃಷ್ಣನ ನಾಡು ಉಡುಪಿ ಕ್ಷೇತ್ರದ ವಿಶೇಷ..!

ಕರಾವಳಿಯಲ್ಲಿ ಕುಟುಂಬ ರಾಜಕೀಯ ಕೊಂಚ ಕಡಿಮೆ. ಆದರೆ ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಎಂ.ಮಧ್ವರಾಜ್, ಅವರ ಪತ್ನಿ ಮನೋರಮಾ ಮಧ್ವರಾಜ್, ಪುತ್ರ ಪ್ರಮೋದ್ ಮಧ್ವರಾಜ್ ಹೀಗೆ ಒಂದೇ ಕುಟುಂಬದ ಸದಸ್ಯರು ಒಟ್ಟು ಆರು ಬಾರಿ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ. ಮನೋರಮಾ ಮಧ್ವರಾಜ್ ಮತ್ತು ಪ್ರಮೋದ್ ಮಧ್ವರಾಜ್ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

1962ರಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕ, ಉದ್ಯಮಿ ಎಂ.ಮಧ್ವರಾಜ್ ಅವರು ಪಿಎಸ್​ಪಿಯ ಉಪೇಂದ್ರ ನಾಯಕ್ ಅವರನ್ನು ಸೋಲಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದರು. 72ರಲ್ಲಿ ಮಧ್ವರಾಜ್ ಪತ್ನಿ ಮನೋರಮಾ ಮಧ್ವರಾಜ್ ರಾಜಕೀಯ ಪ್ರವೇಶಿಸಿ ಪ್ರಥಮ ಚುನಾವಣೆಯಲ್ಲೇ 15 ಸಾವಿರ ಮತಗಳ ಅಂತರದ ಜಯ ಸಾಧಿಸಿ ಶಾಸಕಿಯಾದರು. 78ರಲ್ಲಿ ಪುನರಾಯ್ಕೆಯಾದ ಅವರು ಗುಂಡೂರಾವ್ ಸರ್ಕಾರದಲ್ಲಿ ಸಚಿವೆಯಾಗಿದ್ದರು. 83ರ ಚುನಾವಣೆಯಲ್ಲಿ ಸೋಲು ಅನುಭವಿಸಿದ ಮನೋರಮಾ 85 ಹಾಗೂ 89ರ ಚುನಾವಣೆಯಲ್ಲಿ ಮತ್ತೆ ಪಾರಮ್ಯ ಮೆರೆದರು. 2013ರಲ್ಲಿ ಪ್ರಮೋದ್ ಮಧ್ವರಾಜ್ ಉಡುಪಿ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಅವರಿಗೆ ಸಚಿವರಾಗುವ ಭಾಗ್ಯವೂ ಲಭಿಸಿತು. ಸುದೀರ್ಘ ಕಾಲ ಕಾಂಗ್ರೆಸ್​ನಲ್ಲಿದ್ದ ಮನೋರಮಾ 2004ರಲ್ಲಿ ಬಿಜೆಪಿ ಸೇರಿ ಉಡುಪಿ ಕ್ಷೇತ್ರದ ಸಂಸದೆಯಾಗಿ ಚುನಾಯಿತರಾದರು.

Leave a Reply

Your email address will not be published. Required fields are marked *

Back To Top