Tuesday, 16th October 2018  

Vijayavani

ಉಪಚುನಾವಣಾ ಕದನಕ್ಕೆ ನಾಮಿನೇಷನ್​ ಫೈಲ್​- ಬಳ್ಳಾರಿಯಲ್ಲಿ ಶಾಂತಾ, ಉಗ್ರಪ್ಪ ಅಧಿಕೃತ ಅಖಾಡಕ್ಕೆ        ರಂಗೇರಿದ ಅಖಾಡದಲ್ಲಿ ಅಭ್ಯರ್ಥಿಗಳ ಶಕ್ತಿ ಪ್ರದರ್ಶನ - ರೋಡ್​​ಶೋ ನಡೆಸಿ ಎದುರಾಳಿಗೆ ಟಕ್ಕರ್​ - ನಾಳೆಯಿಂದ ಪ್ರಚಾರ ಶುರು        ಲೋನ್​ಗಾಗಿ ರೂಂಗೆ ಕರೆದ ಮ್ಯಾನೇಜರ್ - ಸಂಚು ಅರಿತು ಪ್ರತಿತಂತ್ರ ಹೆಣೆದ ನಾರಿ -ದಾವಣಗೆರೆ ಬೀದಿಯಲ್ಲೇ ಭರ್ಜರಿ ಸೇವೆ        ಯಾದಗಿರಿಯಲ್ಬಲಿ ಡವರಿಗೆ ಎರಡು ತಿಂಗಳಿನಿಂದ ಸಿಕ್ಕಿಲ್ಲ ಪಡಿತರ ಧಾನ್ಯ - ವಿತರಕನಿಂದಲೇ ಕಾಳಸಂತೆಯಲ್ಲಿ ಮಾರಾಟ        ಏಳನೇ ದಿನ ಚಾಮುಂಡಿ ದರ್ಶನಕ್ಕೆ ಜನಸಾಗರ - ಫ್ಲವರ್​ ಶೋನಲ್ಲಿ ಮುದುಡಿದ ಕಮಲಕ್ಕೆ ಹೊಸ ಮೆರಗು       
Breaking News

ಕ್ರಿಸ್​ ಗೇಲ್​ ಕ್ಯಾಚ್​ ಹಿಡಿದ ಪರಿಗೆ ಕ್ರೀಡಾಭಿಮಾನಿಗಳು ಫಿದಾ: ವಿಡಿಯೋ!

Wednesday, 18.07.2018, 7:01 AM       No Comments

ನವದೆಹಲಿ: ಬ್ಯಾಟ್​ ಹಿಡಿದು ಮೈದಾನಕ್ಕೆ ಇಳಿದರೆ ಎದುರಾಳಿ ಬೌಲರ್​ಗೆ ನಡುಕ ಹುಟ್ಟಿಸುವಂತಹ ದೈತ್ಯ ಪ್ರತಿಭೆ ಕ್ರಿಸ್​ ಗೇಲ್ ಅವರದ್ದು​, ಯೂನಿವರ್ಸಲ್​ ಬಾಸ್ ಎಂದೇ ಕರೆಯಲ್ಪಡುವ ಗೇಲ್​ ತಮ್ಮ ಆಲ್​ ರೌಂಡರ್​ ಪ್ರದರ್ಶನದಿಂದ ಎಲ್ಲರ ಮನಗೆದಿದ್ದಾರೆ.

ಹೀಗ್ಯಾಕೆ ಗೇಲ್​ ವಿಚಾರ ಅಂತಿರಾ… ವಿಷಯ ಏನೆಂದರೆ ಗೇಲ್​ ಅವರು ಹಿಡಿದಿರುವ ಅದ್ಭುತ ಕ್ಯಾಚ್​ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. 2018ರ ಗ್ಲೋಬಲ್​ ಟಿ20 ಕೆನಡಾ ಟೂರ್ನಿಯಲ್ಲಿ ವ್ಯಾಂಕೋವರ್ ನೈಟ್ಸ್ ವಿರುದ್ಧದ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ಬಿ ಪರ ಆಡಿದ ಗೇಲ್​ ಕೊವೆಮ್​ ಹೋಡ್ಜ್​ ಹೊಡೆತದ ಚೆಂಡನ್ನು ಹಿಡಿದ ಪರಿಯನ್ನು ನೋಡಿ ಕ್ರೀಡಾಭಿಮಾನಿಗಳು ಗೇಲ್​ಗೆ ಫಿದಾ ಆಗಿದ್ದಾರೆ.

ಸ್ಲಿಪ್​ ವಿಭಾಗದಲ್ಲಿ ನಿಂತಿದ್ದ ಗೇಲ್​ ಅವರತ್ತ ಬಂದ ಚೆಂಡನ್ನು ಮೊದಲ ಪ್ರಯತ್ನದಲ್ಲಿ ಎಡಗೈಯಲ್ಲಿ ಹಿಡಿಯವಲ್ಲಿ ವಿಫಲವಾದರೂ ಕೂಡ ಎರಡನೇ ಪ್ರಯತ್ನದಲ್ಲಿ ಡೈ ಹೊಡೆದು ಬಲಗೈನಲ್ಲಿ ಹಿಡಿಯುವಲ್ಲಿ ಸಫಲರಾದರು. ಈ ಸಂಬಂಧ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್​ ಆಗಿದ್ದು, ಗೇಲ್​ ಅವರ ಸಾಹಸಮಯ ಕ್ಯಾಚ್​ಗೆ ಲಕ್ಷಾಂತರ ಲೈಕ್ಸ್​ ಹಾಗೂ ಕಾಮೆಂಟ್​ಗಳು ಹರಿದು ಬರುತ್ತಿದೆ.

ಅಂದಹಾಗೆ ಈ ಪಂದ್ಯದಲ್ಲಿ ವ್ಯಾಂಕೋವರ್ ನೈಟ್ಸ್ ಗೆಲುವು ಸಾಧಿಸಿದೆ. ವೆಸ್ಟ್​ ಇಂಡೀಸ್​ ತಂಡ ನೀಡಿದ್ದ 145 ರನ್​ಗಳ ಗುರಿಯನ್ನು ಸುಲಭವಾಗಿ ಗುರಿ ಮುಟ್ಟಿದೆ. ಪಂದ್ಯ ಸೋತರು ಕೂಡ ಗೇಲ್​ ಅವರ ಅದ್ಭುತ್​ ಕ್ಯಾಚ್​ ಮನೆ ಮಾತಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top