Wednesday, 19th September 2018  

Vijayavani

ಹವಾಲಾ ಕೇಸ್​ನಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಡಿಕೆಶಿಗೆ ಮತ್ತೊಂದು ಕಡೆ ಅನಾರೋಗ್ಯ        ಬಂಧನದಿಂದ ತಪ್ಪಿಸಿಕೊಳ್ಳಲು‌ ಸಚಿವ ಡಿಕೆಶಿ ಶತಪ್ರಯತ್ನ; ವಕೀಲರೊಂದಿಗೆ ಸತತ ಚರ್ಚೆ        ಡಿಕೆಶಿ ವಿರುದ್ಧ ದಾಖಲಾಗಿರುವ ಪ್ರಕರಣದ ಮಾಹಿತಿ ಪಡೆದ ಸಿಎಂ ಎಚ್ಡಿಕೆ; ಅಧಿಕಾರಿಗಳೊಂದಿಗೆ ಚರ್ಚೆ        ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪದ ಬಗ್ಗೆ ಸಿಎಂ ಜತೆ ಚರ್ಚೆಯನ್ನೇ ನಡೆಸಿಲ್ಲ ಎಂದ ಸತೀಶ್​ ಜಾರಿಕಿಹೊಳಿ        ಜೆಡಿಎಸ್​ ಸೇರುವಂತೆ ಆಳಂದ ಬಿಜೆಪಿ ಶಾಸಕ ಸುಭಾಷ್​ ಗುತ್ತೇದಾರ್​ಗೆ ಎಚ್​ಡಿಕೆ ಆಹ್ವಾನ       
Breaking News

ಮುಂದುವರಿದ ವರುಣ ಅಬ್ಬರ: ಚಿಕ್ಕಮಗಳೂರು, ಹಾಸನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Monday, 11.06.2018, 9:43 AM       No Comments

ಚಿಕ್ಕಮಗಳೂರು/ಹಾಸನ: ರಾಜ್ಯದಲ್ಲಿ ಮುಂಗಾರು ಪ್ರವೇಶದ ಪರಿಣಾಮ ಹಲವೆಡೆ ಬಿರುಸಿನ ಮಳೆಯಾಗುತ್ತಿದ್ದು, ಯಾವುದೇ ಸಮಸ್ಯೆ ಉಂಟಾಗದ ರೀತಿ ಮುಂಜಾಗ್ರತ ಕ್ರಮವಾಗಿ ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಲ್ಕು ತಾಲೂಕಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೊಪ್ಪ, ಶೃಂಗೇರಿ, ಮೂಡಿಗೆರೆ ಹಾಗೂ ಎನ್.ಆರ್​. ಪುರ ತಾಲೂಕಿನಲ್ಲಿ ರಜೆ ಘೋಷಿಸಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಆದೇಶ ಹೊರಡಿಸಿದ್ದಾರೆ.

ಹಾಸನ ಜಿಲ್ಲೆಯಲ್ಲೂ ಮಳೆರಾಯನ ಅಬ್ಬರ ಮುಂದುವರಿದಿದ್ದು, ಸಕಲೇಶಪುರ, ಹಾಗೂ ಆಲೂರು ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಜಾಫರ್​ ಆದೇಶಿಸಿದ್ದಾರೆ.

ಧರೆಗುರುಳಿದ ಮರ
ಹಾಸನ ಜಿಲ್ಲೆಯಲ್ಲಿ ಅಬ್ಬರಿಸುತ್ತಿರುವ ವರುಣನಿಂದ ಸೋಮವಾರಪೇಟೆ-ಬೇಲೂರು ರಾಜ್ಯ ಹೆದ್ದಾರಿಯಲ್ಲಿ ಭಾರಿ ಮರವೊಂದು ಧರೆಗುರುಳಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಾಗೆ ಸಮೀಪ ಈ ಘಟನೆ ನಡೆದಿದೆ. ಇದರಿಂದ ಬೇಲೂರು-ಬಾಗೆ ನಡುವಿನ ವಾಹನ ಸಂಚಾರ ಸ್ಥಗಿತವಾಗಿದೆ. ಈ ಬಗ್ಗೆ ಮಾಹಿತಿ ನೀಡಿದರೂ ಅಧಿಕಾರಿಗಳಿನ್ನೂ ಸ್ಥಳಕ್ಕೆ ಬಂದಿಲ್ಲ. (ದಿಗ್ವಿಜಯ ನ್ಯೂಸ್​)

 

Leave a Reply

Your email address will not be published. Required fields are marked *

Back To Top