Monday, 22nd January 2018  

Vijayavani

ಸರಹದ್ದು ಮೀರಿ ವರ್ತಿಸ್ತಿದೆ ಪಾಪಿ ಪಾಕ್​- ಐದು ದಿನಗಳಿಂದ ಗುಂಡಿನ ದಾಳಿಗೆ ಪರಿಸ್ಥಿತಿ ಉಲ್ಭಣ- ಗಡಿಯಲ್ಲಿ ಯುದ್ಧ ಸ್ಥಿತಿ ನಿರ್ಮಾಣ        ದಾವೋಸ್​ನಲ್ಲಿ 48ನೇ ವಿಶ್ವ ಆರ್ಥಿಕ ವೇದಿಕೆ ಸಮಾವೇಶ- ಸ್ವಿಸ್​ಗೆ ಹಾರಿದ ಪ್ರಧಾನಿ ಮೋದಿ- ವಿದೇಶಿ ಬಂಡವಾಳ ಸೆಳೆಯುವತ್ತ ಹಲವುಸೂತ್ರ        ಗ್ಯಾಸ್​ ರೀಫಿಲ್ಲಿಂಗ್ ವೇಳೆ ಲೀಕ್​ಆಗಿ ಹೊತ್ತಿಕೊಂಡ ಬೆಂಕಿ- ಆರು ಜನರಿಗೆ ಗಂಭೀರ ಗಾಯ- ಬೆಂಗಳೂರಿನಲ್ಲಿ ತಪ್ಪಿದ ಭಾರಿ ದುರಂತ        ಬೀದರ್​ನಲ್ಲಿ ವೀರಭದ್ರನ ಪಲ್ಲಕ್ಕಿ ಉತ್ಸವ- ಶಸ್ತ್ರಧಾರಣೆ ಮೂಲಕ ಭಕ್ತಿಯ ಪರಾಕಷ್ಠೆ- ಅತ್ತ ಮಂಗಳೂರಿನಲ್ಲಿ ಕಲವರದ ಪುತ್ತೂರು ಕಂಬಳ        ರಿಲೀಸ್​ ಡೇಟ್ ಫಿಕ್ಸ್​ ಆದ್ರೂ ಪದ್ಮಾವತ್​​ಗೆ ಸಂಕಷ್ಟ- 25ಕ್ಕೆ ಬಿಡುಗಡೆಯಾದ್ರೆ ದೇಶಾದ್ಯಂತ ಬಂದ್​- ಕರ್ಣಿಸೇನಾ ರಕ್ತಪಾತದ ಡೈಲಾಗ್​ಗೆ ಬೆವರಿದ ಬನ್ಸಾಲಿ       
Breaking News :

9 ವರ್ಷಗಳ ಬಳಿಕ ಅಭಿಮಾನಿಗಳನ್ನು ಭೇಟಿ ಮಾಡಿದ ತಲೈವಾ

Monday, 15.05.2017, 10:23 AM       No Comments

ಚೆನೈ: ಸೂಪರ್ ಸ್ಟಾರ್​ ರಜನಿಕಾಂತ್ 9 ವರ್ಷಗಳ ಬಳಿಕ ತಮ್ಮ ಅಭಿಮಾನಿಗಳನ್ನು ಚೆನೈನಲ್ಲಿರುವ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಸೋಮವಾರ ಬೆಳಗ್ಗೆಯೇ ಭೇಟಿ ಮಾಡಿದರು.

ಈ ವೇಳೆ ಮಾತನಾಡಿದ ರಜನಿ, ನಾನು ಯಾವ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ. ಆದ್ರೆ ಭವಿಷ್ಯದಲ್ಲಿ ಏನಾಗಲಿದೆಯೋ ಗೊತ್ತಿಲ್ಲ ಅನ್ನುವ ಮೂಲಕ ಕುತೂಹಲ ಮೂಡಿಸಿದರು. ಇಂದಿನಿಂದ 5 ದಿನಗಳ ಕಾಲ ನಿರಂತರವಾಗಿ ರಜನಿಕಾಂತ್ ತಮ್ಮ ಅಭಿಮಾನಿಗಳೊಂದಿಗೆ ಕಾಲಕಳೆಯಲಿದ್ದಾರೆ. ಇದರಿಂದ ರಜನಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ತಮಿಳುನಾಡಿನ 17 ಜಿಲ್ಲೆಗಳಲ್ಲಿ ಪ್ರವಾಸ ಹಮ್ಮಿಕೊಂಡಿದ್ದು, ಪ್ರತಿದಿನ 3ರಿಂದ 4 ಜಿಲ್ಲೆಗಳಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ಪ್ರತಿ ಭೇಟಿಯಲ್ಲೂ ಸುಮಾರು 2,000 ಅಭಿಮಾನಿಗಳೊಂದಿಗೆ ಮಾತನಾಡಿ, ವೈಯಕ್ತಿಕ ಫೋಟೋಗಳನ್ನು ತೆಗೆಯಲು ಅವಕಾಶ ಕಲ್ಪಿಸಲಿದ್ದಾರೆ. ಅಭಿಮಾನಿಗಳ ಸಂಭ್ರಮಕ್ಕೆ ರಜನಿಕಾಂತ್ ತುಂಬ ಸಂತೋಷ ವ್ಯಕ್ತಪಡಿಸಿದ್ದು, ಇದು ತಮ್ಮ ಅವಿಸ್ಮರಣೀಯ ಕ್ಷಣ ಎಂದು ಹೇಳಿದ್ದಾರೆ. ರಜನಿಕಾಂತ್ ಕಳೆದ 2008ರಲ್ಲಿ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ್ದರು.

ನಿರ್ದೇಶಕ ಶಂಕರ್ ಅವರ ನಿರ್ದೇಶನದ 2.0 ಚಿತ್ರದಲ್ಲಿ ರಜನಿಕಾಂತ್ ಅಭಿನಯಿಸಿದ್ದು, ಜನವರಿ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top