Wednesday, 28th June 2017  

Vijayavani

1. ಜಿಎಸ್​​ಟಿ ಜಾರಿಗೆ ಸಜ್ಜಾಗ್ತಿದೆ ಕೇಂದ್ರ ಸರ್ಕಾರ- ಜೂನ್​ 30ರ ಮಧ್ಯರಾತ್ರಿ ಅಧಿವೇಶನಕ್ಕೆ ಇಂದು ರಿಹರ್ಸಲ್​- ಸಂದೇಹ ನಿವಾರಣೆಗೆ ವಾರ್​ ರೂಂ 2. ಜಗತ್ತಿನಾದ್ಯಂತ ಮತ್ತೆ ಸೈಬರ್ ದಾಳಿ- ಪೆಟ್ಯಾ ರಾನ್ಸೋಮ್ವೇರ್​ಗೆ ಯುರೋಪ್ ತತ್ತರ- ಭಾರತದ ಐಟಿ ಕಂಪನಿಗಳಿಗೂ ಶುರುವಾಯ್ತು ಭೀತಿ 3. ಆರ್​ಜೆಡಿ ನಾಯಕರ ವಿರುದ್ಧ ಹೆಚ್ಚಿದ ಭ್ರಷ್ಟಾಚಾರ ಆರೋಪ- ಲಾಲು ಮೇಲೆ ನಿತೀಶ್ ಕುಮಾರ್​ ಮುನಿಸು- ಮುರಿದು ಬೀಳುತ್ತಾ ಮಹಾಘಟಬಂಧನ 4. ತೀವ್ರ ಕುತೂಹಲ ಕೆರಳಿಸಿದ ಸಂಪುಟ ವಿಸ್ತರಣೆ- ಇಂದು ಹೈ ಕಮಾಂಡ್​ ಜತೆ ಸಿಎಂ ಮಾತುಕತೆ- ಯಾರಿಗೆ ಒಲಿಯುತ್ತೆ ಗೃಹಖಾತೆ 5. ಅವನು ಅಪ್ಪಾನಾ ಇಲ್ಲಾ ಇವನು ಅಪ್ಪಾನಾ- ತಂದೆಯ ಅವಳಿ ಸೋದರನ ಕಂಡು ಮಗು ಕನ್ಪ್ಯೂಸ್- ಕಂದನ ವಿಡಿಯೋ ಸಖತ್ ವೈರಲ್
Breaking News :

ಸಿಬಿಐ ನಿಗಾದಲ್ಲಿದ್ದೂ ಲಂಡನ್​ಗೆ ಹಾರಿದ ಕಾರ್ತಿ ಚಿದು!

Friday, 19.05.2017, 11:48 AM       No Comments

ಚೆನ್ನೈ: ಪ್ರಸ್ತುತ ಸಿಬಿಐ ತನಿಖೆ ಎದುರಿಸುತ್ತಿರುವ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಲಂಡನ್​ಗೆ ಪ್ರಯಾಣ ಮಾಡಿದ್ದಾರೆ. ಈ ಮಧ್ಯೆ, ವಿಜಯ್ ಮಲ್ಯ ಮಾದರಿಯಲ್ಲಿ ಕಾರ್ತಿ ಚಿದಂಬರಂ ಸಹ ಲಂಡನ್​ಗೆ ಹಾರಿದರಾ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ದಿಗ್ವಿಜಯ ನ್ಯೂಸ್ ಯೂಟ್ಯೂಬ್​ನಲ್ಲಿ ವೀಕ್ಷಿಸಿ  

ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಈಡಾಗಿರುವ ಕಾರ್ತಿ ಚಿದಂಬರಂ ಪೂರ್ವ ನಿರ್ಧಾರಿತ ಕಾರ್ಯಕ್ರಮದಂತೆ ಲಂಡನ್​ಗೆ ತೆರಳಿದ್ದಾರೆ. ಆದರೆ ಅವರು ಹೆಚ್ಚು ದಿನ ಅಲ್ಲಿ ಉಳಿಯುವುದಿಲ್ಲ. ಶೀಘ್ರವೇ ವಾಪಸಾಗಲಿದ್ದಾರೆ ಎಂದು ಕಾರ್ತಿ ತಂದೆ ಪಿ ಚಿದಂಬರಂ ಅವರು ತಮ್ಮ ಪುತ್ರನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ವಿದೇಶಿ ಬಂಡವಾಳ ಹೂಡಿಕೆ ಉತ್ತೇಜನ ಮಂಡಳಿ (FIPB) ವತಿಯಿಂದ ಐಎನ್ಎಕ್ಸ್ ಮಿಡಿಯಾ ಸಂಸ್ಥೆಗೆ ಅನುಕೂಲವಾಗುವಂತೆ ಅಂದಿನ ಸರಕಾರದ ವತಿಯಿಂದ ಕೆಲವೊಂದು ನಿರ್ಧಾರಗಳನ್ನು ಕೈಗೊಂಡಿದ್ದರು ಎಂದು ಆರೋಪಿಸಿ, ಅಪ್ಪ ಮತ್ತು ಮಗನ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದೆ.

ಈ ಸಂಬಂಧ ಇತ್ತೀಚೆಗೆ ಇಬ್ಬರಿಗೂ ಸೇರಿದ ನಿವಾಸಗಳು ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಅನೇಕ ಮಹತ್ವದ ದಾಖಲೆಗಳನ್ನು ಸಿಬಿಐ ಸಂಸ್ಥೆ ಕಲೆ ಹಾಕಿದೆ. ಅಂದಹಾಗೆ, ಐಎನ್ಎಕ್ಸ್ ಮಿಡಿಯಾ ಪೀಟರ್​ ಮುಖರ್ಜಿ ಮತ್ತು ಇಂದ್ರಾಣಿ ಮಾಲೀಕತ್ವದ ಕಂಪನಿಯಾಗಿದೆ.

Leave a Reply

Your email address will not be published. Required fields are marked *

14 + two =

Back To Top