Tuesday, 24th October 2017  

Vijayavani

1. ಕೊಳೆಯುತ್ತಿದೆ ಹಸಿವು ಮುಕ್ತ ರಾಜ್ಯದ ಕನಸು – ಹುಳು ಹಿಡಿದು ಪಡಿತರ ಹಾಳು – ರಾಜ್ಯದಲ್ಲಿ ಅನ್ನಭಾಗ್ಯದ ಬದಲು ಹುಳು ಭಾಗ್ಯ 2. 100 ಸಿಸಿ ಬೈಕ್‌ನಲ್ಲಿ ಡಬಲ್ ರೈಡಿಂಗ್ ನಿಷೇಧ ವಿಚಾರ – ವಿಷಯ ಗಮನಕ್ಕೆ ಬಂದಿಲ್ಲ ಎಂದ ಸಚಿವರು – ಅಧಿಕಾರಿಗಳಿಗೆ ಸೂಚಿಸುವುದಾಗಿ ರೇವಣ್ಣ ಸ್ಪಷ್ಟನೆ 3. ಹಂದಿ ತಿಂದು ಮಸೀದಿಗೆ ಹೋಗ್ಲಿ – ಸಿಎಂಗೆ ಸವಾಲೆಸೆದ ಸೊಗಡು ಶಿವಣ್ಣ – ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಮತ್ತಷ್ಟು ಸಿಡಿಮಿಡಿ 4. ಮತ್ತೆ ಭುಗಿಲೆದ್ದ ತಾಜ್‌ ಮಹಲ್‌ ಕಟ್ಟಡ ವಿವಾದ – ಯಾವಾಗ ಕೆಡವ್ತೀರ ಅಂತಾ ಪ್ರಕಾಶ್‌ ರಾಜ್ ವ್ಯಂಗ್ಯ – ಅತ್ತ ಸ್ಮಾರಕದ ಎದುರು ಶಿವಪೂಜೆ 5. ವಜ್ರ ಮಹೋತ್ಸವಕ್ಕೆ ಸಜ್ಜಾಗ್ತಿದೆ ವಿಧಾನಸೌಧ – ಶಕ್ತಿಕೇಂದ್ರಕ್ಕೆ ಬಣ್ಣಬಣ್ಣದ ಹೂಗಳ ಅಲಂಕಾರ – ಸಭಾಪತಿ, ಸಭಾಧ್ಯಕ್ಷರಿಂದ ಸಿದ್ಧತೆಗಳ ಪರಿಶೀಲನೆ
Breaking News :

ಚಿದಂಬರಂ- ಪುತ್ರ ಕಾರ್ತಿಕ್ ನಿವಾಸಗಳ ಮೇಲೆ ಸಿಬಿಐ ದಾಳಿ

Tuesday, 16.05.2017, 10:03 AM       No Comments

ಚೆನೈ: ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರುಗಳ ಮನೆ, ಕಚೇರಿ ಸೇರಿದಂತೆ 8 ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ.
ರೂ. 45 ಕೋಟಿ ವಿದೇಶಿ ವಿನಿಮಯ ಉಲ್ಲಂಘಿಸಿದ ಆರೋಪದಡಿ ಕಾರ್ತಿ ಅವರ ಐಎನ್​ಎಕ್ಸ್​ ಮೀಡಿಯಾ ಕಂಪನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ. ಚೆನೈನ ನುಂಗುಂಬಾಕಮ್​ ನಿವಾಸದ ಮೇಲೆ 10ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಚಿದಂಬರಂ, ನಾನು ಬೆಂಗಳೂರಿನಲ್ಲಿ ಇದ್ದೇನೆ. ಸಿಬಿಐ ದಾಳಿ ಬಗ್ಗೆ ತಿಳಿದುಬಂದಿದೆ. ಸಿಬಿಐ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸಲಿ ಬಿಡಿ ಎಂದು ಟ್ವೀಟ್ ಮಾಡಿದ್ದಾರೆ.
ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಸಂಬಂಧಿಸಿದಂತೆ ಈ ಹಿಂದೆ ಜಾರಿ ನಿರ್ದೇನಾಲಯ ಅಧಿಕಾರಿಗಳು ಕಾರ್ತಿ​ ಅವರಿಗೆ ನೋಟಿಸ್​ ಜಾರಿ ಮಾಡಿದ್ದರು ಎನ್ನಲಾಗಿದೆ.
2008ರಲ್ಲಿ ವಿದೇಶಿ ಹೂಡಿಕೆ ಪಡೆಯಲು ಮಾಧ್ಯಮ ಸಂಸ್ಥೆಗೆ ಕಾರ್ತಿಕ್​ ಅವರ ಸಂಸ್ಥೆ ಸಹಕರಿಸಿದ್ದು, ಇದಕ್ಕಾಗಿ ಲಂಚ ಪಡೆದಿತ್ತು ಎಂಬ ಆರೋಪ ಇದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top