Monday, 22nd October 2018  

Vijayavani

₹9 ಲಕ್ಷ ಅಡ್ವಾನ್ಸ್ ಪಡೆದಿದ್ದು ನಿಜ - ಸರ್ಜಾ ವಿರುದ್ಧ ಮೀ ಟೂ ಬಳಸಿಕೊಂಡಿಲ್ಲ - ದಿಗ್ವಿಜಯ ನ್ಯೂಸ್​ಗೆ ಚೇತನ್ ಹೇಳಿಕೆ        ಸರ್ಜಾ ವಿರುದ್ಧ ಮೀಟೂ ಆರೋಪ - ಕಿತ್ತಾಟ ಪರಿಹರಿಸಲು ಸಂಧಾನಕಾರರಾಗ್ತಾರಾ ಅಂಬಿ..?        ಅರ್ಜುನ್ ಸರ್ಜಾ ಮೀ ಟೂ ಕೇಸ್​​ಗೆ ಬಿಗ್ ಟ್ವಿಸ್ಟ್ - ಪ್ರೇಮಬರಹದಲ್ಲಿ ಚಾನ್ಸ್​ ಸಿಗದ್ದಕ್ಕೆ ರೀವೆಂಜ್ ಆರೋಪ        ಶ್ರುತಿ ವಿರುದ್ಧ ಚೇಂಬರ್​ಗೆ ದೂರು - ನಟಿ ಆರೋಪಕ್ಕೆ ಮತ್ತೆ ಗುಡುಗಿದ ನಟ ರಾಜೇಶ್        ಬೈಎಲೆಕ್ಷನ್​​ ಆಂತರಿಕ ಸಮೀಕ್ಷೆಯಲ್ಲಿ ಸೋಲಿನ ಸುಳಿವು - ಎಲ್ಲ ಕಾರ್ಯಕ್ರಮ ರದ್ದುಗೊಳಿಸಿ ಸಿಎಂ ತಂತ್ರಗಾರಿಕೆ        ಕರ್ತವ್ಯ ಬಹಿಷ್ಕರಿಸಿ ಸಿಬ್ಬಂದಿ ಪ್ರತಿಭಟನೆ - ಬೆಂಗಳೂರಿನ ಪೆನೇಷಿಯಾ ಆಸ್ಪತ್ರೆ ವಿರುದ್ಧ ಸಿಬ್ಬಂದಿ ಆಕ್ರೋಶ       
Breaking News

ನಮ್ಮ ಆತಿಥ್ಯದ ಖರ್ಚಿನ ಲೆಕ್ಕ ಕೊಡಿ

Saturday, 11.08.2018, 3:05 AM       No Comments

ಬೆಂಗಳೂರು: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾಘಟಬಂಧನ ಶಕ್ತಿ ಪ್ರದರ್ಶಿಸಿದ್ದ ವಿವಿಧ ರಾಜ್ಯಗಳ ಸಿಎಂಗಳು, ತಾವು ಮಾಡಿದ್ದಾರೆ ಎನ್ನಲಾಗುತ್ತಿರುವ ಖರ್ಚಿಗೆ ಆಧಾರ ಕೇಳಿದ್ದಾರೆ. ಸೇವಿಸದೆ ಇರುವ ಅನೇಕ ಆಹಾರ, ಪಾನೀಯಗಳನ್ನು ಪಟ್ಟಿಯಲ್ಲಿ ಸೇರಿಸಿರುವುದರ ಜತೆಗೆ 3-4 ಗಂಟೆಗೇ ಈ ಪ್ರಮಾಣದ ಬಿಲ್ ಹಾಕಿರುವುದರ ಕುರಿತು ವಿಚಾರಣೆ ನಡೆಸುವಂತೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಕೋರಿದ್ದಾರೆ.

ಚಂದ್ರಬಾಬು ನಾಯ್ಡು ಕಚೇರಿ ದೂರವಾಣಿ ಮೂಲಕ ರಾಜ್ಯ ಸರ್ಕಾರವನ್ನು ಸಂರ್ಪಸಿದ್ದು, 3-4 ಗಂಟೆಯಷ್ಟೆ ಬೆಂಗಳೂರಿನಲ್ಲಿದ್ದೆವು. ಆದರೆ 8.72 ಲಕ್ಷ ರೂ. ಬಿಲ್ ಮಾಡಲಾಗಿದೆ. ಒಟ್ಟಾರೆ ಖರ್ಚಿನ ಬದಲಿಗೆ ಪ್ರತಿ ವಸ್ತುವನ್ನು ಉಲ್ಲೇಖಿಸಿ ಬಿಲ್ ನೀಡಿ. ನಮ್ಮ ಜತೆಗೆ ಕೆಲ ಸಚಿವರು, ಅಧಿಕಾರಿಗಳೂ ಇದ್ದರು. ಅವರೇನಾದರೂ ಈ ಬಿಲ್​ಗೆ ಕಾರಣವಿರಬಹುದೇ ಎಂಬುದನ್ನೂ ಪತ್ತೆ ಹಚ್ಚಬೇಕಿದೆ. ಮಾಹಿತಿ ಜತೆಗೆ ಕೂಲಂಕಷ ವಿಚಾರಣೆ ನಡೆಸಿ ಎಂದು ಕೋರಿದ್ದಾರೆ.

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹಾಲು- ಹಣ್ಣು ಮಾತ್ರ ಸೇವಿಸಿದರು, ಮಧ್ಯಾಹ್ನ ಊಟ ಸಹ ಮಾಡಿಲ್ಲ. ಭದ್ರತೆ ದೃಷ್ಟಿಯಿಂದ ಹೋಟೆಲ್​ನಲ್ಲಿ ಉಳಿದರು. ಇದು ಪಕ್ಷದ ಕಾರ್ಯಕ್ರಮವಾದ್ದರಿಂದ ಸರ್ಕಾರ ಬಿಲ್ ಪಾವತಿಸಬಾರ ದೆಂದು ಆಮ್​ದಿ್ಮ ಪಾರ್ಟಿ ಕರ್ನಾಟಕ ಸಂಚಾಲಕ ಪೃಥ್ವಿ ರೆಡ್ಡಿ ಹೇಳುತ್ತಾರೆ.

ಸಿಪಿಐಎಂ ನಾಯಕ ಸೀತಾರಾಂ ಯೆಚೂರಿ ಕೂಡ ದುಬಾರಿ ವೆಚ್ಚಕ್ಕೆ ಕಾರಣ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅನೇಕ ಸಿಎಂಗಳು ಬಿಲ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಲೆ, ಈ ಬಗ್ಗೆ ವಿವರ ನೀಡಿ ಎಂದು ಶಿಷ್ಟಾಚಾರ ಇಲಾಖೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸೂಚನೆ ನೀಡಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

Back To Top