Thursday, 16th August 2018  

Vijayavani

ಅಜಾತಶತ್ರು ಅಸ್ತಂಗತ - ಅಟಲ್ ಬಿಹಾರಿ ವಾಜಪೇಯಿ ವಿಧಿವಶ - ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮಾಜಿ ಪ್ರಧಾನಿ ನಿಧನ        ಚತುಷ್ಪಥ ಹೆದ್ದಾರಿಯ ಹರಿಕಾರ - ನದಿಜೋಡಣೆಯ ಗುರಿಕಾರ - ಸಭ್ಯ, ಕವಿ ರಾಜಕಾರಣಿ ಅಟಲ್ ಅಜರಾಮರ        ದೆಹಲಿ ನಿವಾಸದಲ್ಲಿ ಪಾರ್ಥಿವ ಶರೀರ - ನಾಳೆ ಪಕ್ಷದ ಕಚೇರಿಯಲ್ಲಿ ದರ್ಶನ - ರಾಜ್​ಘಾಟ್​​ನಲ್ಲಿ ಸಂಜೆ 5ಕ್ಕೆ ಅಂತ್ಯಕ್ರಿಯೆ        ದೇಶಾದ್ಯಂತ 7 ದಿನಗಳ ಶೋಕಾಚರಣೆ - ಹಲವು ರಾಜ್ಯಗಳಲ್ಲಿ ಸರ್ಕಾರಿ ರಜೆ ಘೋಷಣೆ - ರಾಜ್ಯದಲ್ಲಿಯೂ ಸರ್ಕಾರಿ ರಜೆ        ದೇಶ ಮಹಾನ್ ನಾಯಕನ್ನ ಕಳೆದುಕೊಂಡಿದೆ - ನಿಶ್ಯಬ್ದ, ಶೂನ್ಯ ನನ್ನನ್ನ ಆವರಿಸಿದೆ - ಅಟಲ್​ ಅಗಲಿಕೆಗೆ ಮೋದಿ ಕಂಬನಿ        ವಾಜಪೇಯಿ​ ನಿಧನ ವಿಷಾದಕರ - ದೇಶ ಕಂಡ ಅತ್ಯಂತ ಮಹಾನ್ ವ್ಯಕ್ತಿ - ಅಟಲ್ ನಿಧನಕ್ಕೆ ಸ್ವಾಮೀಜಿಗಳ ಸಂತಾಪ        ಮಡಿಕೇರಿಯಲ್ಲಿ ಕುಸಿದ ಮನೆ - ವೈಮಾನಿಕ ಸಮೀಕ್ಷೆಗೆ ಬಿಜೆಪಿ ಮನವಿ - ಕೇರಳದಲ್ಲಿ ರಕ್ಕಸ ವರುಣಗೆ 88 ಮಂದಿ ಬಲಿ        ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ಕಂಪನ - ಭಾರಿ ಸ್ಫೋಟದ ಜತೆಗೆ ಕಂಪನದ ಅನುಭವ - ಇನ್ನೂ ಗೊತ್ತಾಗಿಲ್ಲ ಅಸಲಿ ಕಾರಣ...       
Breaking News

ಉಪ ನೋಂದಣಾಧಿಕಾರಿ ಕಚೇರಿ ಕಟ್ಟಡ ಶಿಥಿಲ

Wednesday, 08.08.2018, 5:00 AM       No Comments

ಚಾಮರಾಜನಗರ: ತಾಲೂಕಿನ ಕುದೇರು ಗ್ರಾಮದ ಉಪ ನೋಂದಣಾಧಿಕಾರಿ ಕಚೇರಿ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಜಮೀನು, ಮನೆ ಹಾಗೂ ವಿವಾಹ ನೋಂದಣಿಗೆ ಸಂಬಂಧಿಸಿದ ದಾಖಲೆಗಳಿಗೆ ಇಲ್ಲಿ ರಕ್ಷಣೆ ಇಲ್ಲದಾಗಿದೆ.

ತಾಲೂಕಿನ 60 ಗ್ರಾಮಗಳು ಈ ಕಚೇರಿ ವ್ಯಾಪ್ತಿಗೆ ಬರುತ್ತವೆ. ಸುಮಾರು 8 ದಶಕಕ್ಕೂ ಹಳೆಯದಾದ ಈ ಕಟ್ಟಡ ಶಿಥಿಲಗೊಂಡಿದೆ. ಜತೆಗೆ ಕಚೇರಿಯಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಸಿಬ್ಬಂದಿ ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಜನರು ತಮ್ಮ ಜಮೀನು, ಮನೆ ಹಾಗೂ ವಿವಾಹ ನೋಂದಣಿ ಮಾಡಿಸಲು ಕಚೇರಿಗೆ ಬರುತ್ತಾರೆ. ಇಲ್ಲಿ ಸೂಕ್ತ ಕುಡಿಯುವ ನೀರಿನ ಸೌಲಭ್ಯ, ಶೌಚಗೃಹ ವ್ಯವಸ್ಥೆ ಇಲ್ಲ. ಜತೆಗೆ ಚಿಕ್ಕದಾದ ಈ ಕಟ್ಟಡದಲ್ಲಿಯೆ ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಕೆಲಸ ನಿರ್ವಹಿಸಬೇಕಾಗಿದೆ.

1930ರಲ್ಲಿ ನಿರ್ಮಿತವಾದ ಕಟ್ಟಡದ ಛಾವಣಿ ಮಳೆ ಬಂದಾಗ ಸೋರುತ್ತದೆ. ಜತೆಗೆ ಕಟ್ಟಡದ ಕೆಲ ಭಾಗಗಳಲ್ಲಿ ಛಾವಣಿಯ ಗಾರೆ ಚಕ್ಕೆಯು ಉದುರುತ್ತದೆ. ಇದರಿಂದ ಸಿಬ್ಬಂದಿ ಯಾವಾಗ ಏನಾಗುತ್ತದೋ ಎಂಬ ಭಯದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಟ್ಟಡದಲ್ಲಿ ರೆಕಾರ್ಡ್ ರೂಂ, ಸಿಬ್ಬಂದಿ ಕೊಠಡಿ, ಉಪ ನೋಂದಣಾಧಿಕಾರಿ ಕಚೇರಿ ಕೊಠಡಿ ಮಾತ್ರ ಇದೆ. ಇದರಿಂದ 60 ಗ್ರಾಮಗಳಿಗೆ ಸಂಬಂಧಿಸಿದ ಜಮೀನು, ಮನೆ, ವಿವಾಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳಲು ಸ್ಥಳಾವಕಾಶದ ಸಮಸ್ಯೆ ಎದುರಾಗಿದೆ.

ಬೇರೆ ಕಟ್ಟಡಕ್ಕೆ ವರ್ಗ
ಕಚೇರಿಯನ್ನು ಸಮೀಪದಲ್ಲಿರುವ ಹಳೇ ಪೊಲೀಸ್ ಠಾಣೆ ಕಟ್ಟಡಕ್ಕೆ ವರ್ಗಾಯಿಸಿ ಅನುಕೂಲ ಕಲ್ಪಿಸಿಕೊಡುವಂತೆ ಇಲ್ಲಿನ ಅಧಿಕಾರಿಗಳು ಇಲಾಖೆಯ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಈತನಕ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಇದರಿಂದ ಅನಿವಾರ್ಯವಾಗಿ ಹಳೆಯ ಕಟ್ಟಡದಲ್ಲಿಯೇ ತಮ್ಮ ಕರ್ತವ್ಯವನ್ನು ಮುಂದುವರಿಸಿದ್ದಾರೆ.

ಇಲ್ಲಿನ ಕಟ್ಟಡದ ಹಿಂಭಾಗದಲ್ಲಿ ಎರಡು ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಆದರೆ ನೀರಿನ ಪೂರೈಕೆ ಇಲ್ಲದ ಕಾರಣ ಶೌಚಗೃಹಗಳನ್ನು ಮುಚ್ಚಲಾಗಿದೆ. ಈ ಕುರಿತು ಸಂಬಂಧಪಟ್ಟ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ದೂರದ ಊರುಗಳಿಂದ ಬರುವ ಮಹಿಳೆಯರಿಗೆ ಶೌಚಗೃಹದ ಸೌಲಭ್ಯ ಇಲ್ಲದಂತಾಗಿದೆ.

ಕಚೇರಿ ಕಟ್ಟಡದ ಸುತ್ತ ಇರುವ ಕಾಂಪೌಂಡ್ ಕೂಡ ಹಳೆಯದಾಗಿದ್ದು, ಅಲ್ಲಲ್ಲಿ ಕುಸಿದು ಬಿದ್ದಿದೆ. ಜತೆಗೆ ಕಚೇರಿ ಮುಂಭಾಗ ಸೂಕ್ತ ಗೇಟ್ ವ್ಯವಸ್ಥೆ ಇಲ್ಲದ ಕಾರಣ ಯಾರು ಯಾವಾಗ ಬೇಕಾದರೂ ಕಟ್ಟಡದ ಆವರಣಕ್ಕೆ ಹೋಗಬಹುದಾಗಿದೆ.

ಸಚಿವರಿಗೆ ಮನವಿ
ಇಲ್ಲಿನ ಕಚೇರಿಯನ್ನು ಬೇರೊಂದು ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಈ ಭಾಗದ 60 ಗ್ರಾಮಗಳ ಗ್ರಾಮಸ್ಥರು ಸಹಿ ಮಾಡಿ ಕ್ಷೇತ್ರದ ಶಾಸಕ ಹಾಗೂ ಸಚಿವ ಎನ್.ಮಹೇಶ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸಚಿವರು ಇನ್ನಾದರೂ ಉಪನೋಂದಣಾಧಿಕಾರಿ ಕಚೇರಿಯನ್ನು ಸೂಕ್ತ ಮೂಲ ಸೌಕರ್ಯಗಳಿರುವ ಕಟ್ಟಡಕ್ಕೆ ವರ್ಗಾಯಿಸುವ ಮೂಲಕ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕಿದೆ.

ಉಪನೋಂದಣಾಧಿಕಾರಿ ಕಚೇರಿ ಕಟ್ಟಡವು ಶಿಥಿಲಗೊಂಡಿದ್ದು, ಕೆಲಸ ನಿರ್ವಹಿಸಲು ತೊಂದರೆಯಾಗುತ್ತಿದೆ. ಈಗಾಗಲೇ ಖಾಲಿ ಇರುವ ಹಳೆಯ ಪೊಲೀಸ್ ಠಾಣೆ ಕಟ್ಟಡಕ್ಕೆ ನಮ್ಮ ಕಚೇರಿಯನ್ನು ಸ್ಥಳಾಂತರ ಮಾಡುವಂತೆ ಇಲಾಖೆಯ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಅವರಿಂದ ಯಾವುದೇ ಮಾಹಿತಿ ಬಂದಿಲ್ಲ.
ಮಹೇಶ್, ಪ್ರಭಾರ ಉಪನೋಂದಣಾಧಿಕಾರಿ.

Leave a Reply

Your email address will not be published. Required fields are marked *

Back To Top