Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಚಲುವರಾಯಸ್ವಾಮಿಗೆ ಕಮಲ ಗಾಳ ?

Friday, 13.07.2018, 5:00 AM       No Comments

ಮಂಡ್ಯ: ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ನಿರ್ಲಕ್ಷೃಕ್ಕೊಳಗಾಗಿರುವ ಮಾಜಿ ಸಚಿವ ಚಲುವರಾಯಸ್ವಾಮಿ ಹಾಗೂ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡರನ್ನು ತನ್ನತ್ತ ಸೆಳೆಯಲು ಕಮಲ ಗಾಳ ಹಾಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಜೆಡಿಎಸ್ ವರಿಷ್ಠರ ವಿರುದ್ಧ ಬೇಸತ್ತು ಕಾಂಗ್ರೆಸ್ ಸೇರಿದ್ದ ಚಲುವರಾಯಸ್ವಾಮಿ ಹಾಗೂ ರಮೇಶ್‌ಬಂಡಿಸಿದ್ದೇಗೌಡ ಕಾಂಗ್ರೆಸ್ ಸೇರಿದ್ದರು. ಫಲಿತಾಂಶ ಏರುಪೇರಾದ ಹಿನ್ನೆಲೆಯಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಮಾಡಿಕೊಂಡವು. ಚಲುವರಾಯಸ್ವಾಮಿಗೆ ಸಾಥ್ ನೀಡಿದ್ದ ಜಮೀರ ಅಹಮದ್ ಖಾನ್ ಕೂಡ ಕುಮಾರಸ್ವಾಮಿ ಜತೆ ಈಗ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಆದರೆ, ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಿದೆ. ಸಮ್ಮಿಶ್ರ ಸರ್ಕಾರ ರಚನೆಯಾದ ಮಾತ್ರಕ್ಕೆ ಆ ಕಂದಕ ಮುಚ್ಚಿಲ್ಲ. ಪ್ರಮುಖವಾಗಿ ನಾಗಮಂಗಲ, ಶ್ರಿರಂಗಪಟ್ಟಣದಲ್ಲಿ ಕಾರ್ಯಕರ್ತರಿಗಿರಲಿ ಮುಖಂಡರು ಕೂಡ ಒಬ್ಬರನ್ನೊಬ್ಬರು ನೋಡುವಷ್ಟು ಪರಿಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ.

ಚಲುವರಾಯಸ್ವಾಮಿ ಹಾಗೂ ರಮೇಶ್‌ಬಂಡಿಸಿದ್ದೇಗೌಡರ ಹೀನಾಯ ಸೋಲಿಗೆ ಕಾರಣ ಮಾಜಿ ಸಿ.ಎಂ.ಸಿದ್ದರಾಮಯ್ಯ ಒಕ್ಕಲಿಗರ ವಿರೋಧಿ ಅಲೆ ಹಾಗೂ ಕುಮಾರಸ್ವಾಮಿ ಅವರ ರೈತರ ಸಂಪೂರ್ಣ ಸಾಲ ಮನ್ನಾ ಭರವಸೆ. ಆದರೆ, ಭರವಸೆ ಈಡೇರದ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಜೆಡಿಎಸ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯಡಿಯೂರಪ್ಪ ಸಿಎಂ ಆಗಿದ್ದರೆ ಕನಿಷ್ಠ 1 ಲಕ್ಷ ರೂ. ಸಾಲ ಮನ್ನಾ ಆಗುತ್ತಿತ್ತು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಸಂದರ್ಭವನ್ನು ಬಳಸಿಕೊಂಡರಷ್ಟೇ ಜಿಲ್ಲೆಯಲ್ಲಿ ಕಮಲಕ್ಕೆ ಕನಿಷ್ಠ ನೆಲೆ ಸಿಗಲು ಸಾಧ್ಯ. ಹಾಗಂತ ಯಾರನ್ನೋ ತಂದು ಅಭ್ಯರ್ಥಿ ಮಾಡಿದರೆ ಪ್ರಯೋಜನವಾಗದು. ಸದ್ಯ ಜಿಲ್ಲೆಯಲ್ಲಿ ಪ್ರಭಾವಿ ಆಗಿರುವ ಚಲುವರಾಯಸ್ವಾಮಿ ಮತ್ತವರ ಬಣ ಬಂದಲ್ಲಿ ಪಕ್ಷಕ್ಕೆ ದೊಡ್ಡ ಶಕ್ತಿ ಸಿಗಲಿದೆ ಎಂಬ ಲೆಕ್ಕಾಚಾರ ಬಿಜೆಪಿ ವಲಯದಲ್ಲಿ ನಡೆಯುತ್ತಿದೆ.

ಆ ಕಾರಣದಿಂದ ಕಾಂಗ್ರೆಸ್ ಜತೆ ಅಂತರ ಕಾಯ್ದುಕೊಳ್ಳುತ್ತಿರುವ ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡರನ್ನು ಪಕ್ಷಕ್ಕೆ ಕರೆತರಲು ವರಿಷ್ಠರು ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇಬ್ಬರೂ ಪಕ್ಷಕ್ಕೆ ಬಂದಲ್ಲಿ ಲೋಕಸಭೆ ಚುನಾವಣೆಗೆ ಚಲುವರಾಯಸ್ವಾಮಿ ಅಭ್ಯರ್ಥಿ ಮಾಡುವುದು, ರಮೇಶ್ ಬಂಡಿಸಿದ್ದೇಗೌಡ ರನ್ನು ಎಂ.ಎಲ್.ಸಿ. ಪದವಿ ಕಲ್ಪಿಸುವ ಬಗ್ಗೆ ಪಕ್ಷ ಚಿಂತನೆ ನಡೆಸಿದೆ. ಈ ಸಂಬಂಧ ಕಮಲದ ನಾಯಕರು ಚಲುವರಾಯಸ್ವಾಮಿ ಹಾಗೂ ರಮೇಶ್ ಬಂಡಿಸಿದ್ದೇಗೌಡರ ಜತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.

ಒಪ್ಪುವರೇ ಚಲುವರಾಯಸ್ವಾಮಿ: ವಿಧಾನಸಭೆ ಚುನಾವಣೆಯ ಸೋಲಿನ ಹತಾಶೆಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ತಮಗೆ ರಾಜಕೀಯ ಮಾಡಲು ಯೋಗ್ಯತೆಯಿಲ್ಲ ಎಂದು ಹೇಳಿರುವ ಚಲುವರಾಯಸ್ವಾಮಿ ಬಿಜೆಪಿಗೆ ಸೇರ್ಪಡೆ ಆಗುವರೇ ಎಂಬುದನ್ನು ಹೇಳಲಾಗುತ್ತಿಲ್ಲ .

ಆದರೆ, ಅವರ ಬೆಂಬಲಿಗರು, ಕಾಂಗ್ರೆಸ್‌ನಲ್ಲಿದ್ದರೆ ಯಾವುದೇ ಕಾರಣಕ್ಕೂ ಭವಿಷ್ಯವಿಲ್ಲ. ಜಿಲ್ಲೆಯ ಜನತೆ ಈಗ ಮೋದಿ ಅವರ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಕಮಲಕ್ಕೆ ಹೋದಲ್ಲಿ ಉತ್ತಮ ಭವಿಷ್ಯ ಇದೆ ಎನ್ನುತ್ತಿದ್ದಾರೆ. ಹಾಗಾಗಿ ಚಲುವರಾಯಸ್ವಾಮಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

 

Leave a Reply

Your email address will not be published. Required fields are marked *

Back To Top