Monday, 23rd July 2018  

Vijayavani

ಬಿಜೆಪಿ ಸಂಪರ್ಕ್ ಸಮರ್ಥನ್ ಅಭಿಯಾನ - ಕಿಚ್ಚ ಸುದೀಪ್ ಭೇಟಿಯಾದ ಶ್ರೀರಾಮುಲು- ಮೋದಿ ಸಾಧನೆ ಪುಸ್ತಕ  ವಿತರಣೆ        ದೆಹಲಿಯಲ್ಲಿ ರಾಹುಲ್-ಸಿದ್ದು ಭೇಟಿ - ದೋಸ್ತಿ ನಡೆಗೆ ಅಸಮಾಧಾನ ಹೊರಹಾಕಿದ್ರಾ ಸಿದ್ದು - ಕುತೂಹಲ ಕೆರಳಿಸಿದ ಕೈ ದಿಗ್ಗಜರ ಭೇಟಿ        ಮತ್ತೆ ವಾಸ್ತು ಮೊರೆ ಮೋದ ರೇವಣ್ಣ - ಸರ್ಕಾರಿ ಬಂಗಲೆ ನವೀಕರಣಕ್ಕೆ 2 ಕೋಟಿ ಖರ್ಚು - ಇದೇನಾ ದುಂದುವೆಚ್ಚಕ್ಕೆ ಕಡಿವಾಣ ?        ದರ್ಶನ್ ಮ್ಯಾನೇಜರ್​​ ಮಲ್ಲಿಕಾರ್ಜುನ್​ನಿಂದ ಮತ್ತೊಂದು ದೋಖಾ - ನಟ ಅರ್ಜುನ್ ಸರ್ಜಾಗೂ ಮಹಾ ಮೋಸ        ಶೀರೂರು ಶ್ರೀ ಸಾವಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಸ್ವಾಮೀಜಿ ಕೊನೆದಿನದ ಡಿವಿಆರ್ ನಾಪತ್ತೆ - ಪೊಲೀಸರಿಂದ ತೀವ್ರ ಶೋಧ       
Breaking News

ಸೆಂಚುರಿ ಸ್ಟಾರ್​ಗೆ ಇಂದು 56ನೇ ಹುಟ್ಟು ಹಬ್ಬದ ಸಂಭ್ರಮ

Thursday, 12.07.2018, 10:23 AM       No Comments

ಬೆಂಗಳೂರು: ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್​​ ಇಂದು 56ನೇ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ತಮ್ಮ ನಿವಾಸದಲ್ಲಿ ತಡರಾತ್ರಿ ಪತ್ನಿ ಗೀತಾ ಶಿವರಾಜಕುಮಾರ್, ಕುಟುಂಬಸ್ಥರು, ಹಾಗೂ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಶಿವಣ್ಣ ಹುಟ್ಟುಹಬ್ಬದ ಪ್ರಯುಕ್ತ ಈ ವರ್ಷವೂ ಅನ್ನದಾನ, ರಕ್ತದಾನ, ಸಿಹಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ಹುಟ್ಟುಹಬ್ಬಕ್ಕೆಂದೇ ದಿ ವಿಲನ್ ಚಿತ್ರದ ಪೋಸ್ಟರ್, ಯೋಗ್ ರಾಜ್ ಭಟ್ ನಿರ್ದೇಶನದ ಪ್ರೊಡಕ್ಷನ್ ನಂ.1 ಪೋಸ್ಟರ್ ಮತ್ತು ರಥಾವರ ಬಂಡಿಯಪ್ಪ ನಿರ್ದೇಶನದ ವೈರಮುಡಿ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ.

ನೆಚ್ಚಿನ ನಟನಿಗೆ ಶುಭಕೋರಲು ನಾನಾ ಜಿಲ್ಲೆಗಳಿಂದ ಅಭಿಮಾನಿಗಳು ಶಿವಣ್ಣನ ನಾಗವಾರದ ನಿವಾಸಕ್ಕೆ ಆಗಮಿಸಿದ್ದರು. ಇನ್ನೂ ಇದೇ ವೇಳೆ ಮಾತಾನಾಡಿದ ಶಿವಣ್ಣ, ನಿಜಕ್ಕೂ ಸಂತೋಷ ಆಗುತ್ತೆ.‌ ಅಭಿಮಾನಿಗಳ ಈ ಸಂಭ್ರಮ ಅಭಿಮಾನ ನೋಡಿದರೆ ಇನ್ನೂ ಖುಷಿಯಾಗುತ್ತದೆ. ಟಗರುವಿನಂತಹ ವಿಭಿನ್ನ ಚಿತ್ರಗಳನ್ನು ಮಾಡಿ ಯಶಸ್ಸು ಕಂಡಿರೋದು ತುಂಬಾ ಖುಷಿ ಇದೆ. ಚಿತ್ರದ ಹೆಸರಷ್ಟೇ ಅಲ್ಲದೇ ಪಾತ್ರದ ಹೆಸರುಗಳಿಂದ ವಿಶಿಷ್ಟ ಸಿನೆಮಾ ಅದು. ಮುಂದೆ ವಿಲನ್ ನಂತರ ಕವಚ, ರುಸ್ತುಂ ಸಿನಿಮಾಗಳಲ್ಲಿ ಅಭಿನಯಿಸುತಿದ್ದೇನೆ. ಪ್ರತಿ ಹುಟ್ಟು ಹಬ್ಬ ಹೊಸತು.. ಅಲ್ಲದೆ ಹೊಸ ಹುಮ್ಮಸ್ಸಿಗೂ ಅದು ಕಾರಣವಾಗತ್ತೆ ಎಂದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top