Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಮಲ್ಯ ಎಸ್ಕೇಪ್‌ ಆಗಿದ್ದು ಮೋದಿಯ ನೆಚ್ಚಿನ ಅಧಿಕಾರಿಯಿಂದ ಎಂದಿರುವ ರಾಹುಲ್‌ ಆರೋಪದಲ್ಲಿ ಹುರುಳಿಲ್ಲ

Sunday, 16.09.2018, 8:03 PM       No Comments

ನವದೆಹಲಿ: ಸಿಬಿಐನ ಜಂಟಿ ನಿರ್ದೇಶಕ ಎ.ಕೆ.ಶರ್ಮಾ ಅವರು ಲುಕ್‌ ಔಟ್‌ ನೋಟಿಸ್‌ನ್ನು ದುರ್ಬಲಗೊಳಿಸಿದ್ದರು ಮತ್ತು ಮಲ್ಯ ಅವರು ವಿದೇಶಕ್ಕೆ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದ್ದರು ಎಂದಿದ್ದ ರಾಹುಲ್‌ ಗಾಂಧಿ ಅವರನ್ನು ಸಿಬಿಐ ತರಾಟೆಗೆ ತೆಗೆದುಕೊಂಡಿದೆ.

ಸಿಬಿಐ ವಕ್ತಾರ ಮಾತನಾಡಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮಾಡಿರುವ ಆರೋಪಗಳು ಆಧಾರರಹಿತ. ಸಿಬಿಐನ ಹಿರಿಯ ಅಧಿಕಾರಿಯ ವಿರುದ್ಧ ಕೆಲವು ವ್ಯಕ್ತಿಗಳು ಆಧಾರವಿಲ್ಲದ ಆರೋಪಗಳನ್ನು ಮಾಡಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಿಬಿಐ, ವಿಜಯ್‌ ಮಲ್ಯಾರನ್ನು ವಶಕ್ಕೆ ಪಡೆಯಲು ಮತ್ತು ಬಂಧಿಸಲು ಆ ಸಮಯದಲ್ಲಿ ಅವರ ವಿರುದ್ಧ ಸಿಬಿಐ ಬಳಿ ಸೂಕ್ತವಾದ ಆಧಾರಗಳಿಲ್ಲದ ಕಾರಣದಿಂದಾಗಿ ಅವರ ವಿರುದ್ಧದ ಎಲ್‌ಒಸಿಯನ್ನು ಬದಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಮಲ್ಯ ಕುರಿತಾದ ನಿರ್ಧಾರವು ಸಿಬಿಐ ತೆಗೆದುಕೊಂಡಿರುವ ಉನ್ನತ ಮಟ್ಟದ ತೀರ್ಮಾನವಾಗಿದ್ದು, ಇದು ಕೇವಲ ಶರ್ಮಾರೊಬ್ಬರ ತೀರ್ಮಾನವಲ್ಲ ಎಂದು ಹೇಳಿದೆ.

ಇಂದು ಮುಂಜಾನೆ ಟ್ವೀಟ್‌ ಮಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನವರಾದ ಗುಜರಾತ್ ಕೆಡರ್‌ನ ಸಿಬಿಐ ಅಧಿಕಾರಿ ಎ. ಕೆ. ಶರ್ಮಾ ಅವರು ಮಲ್ಯ ವಿರುದ್ಧ ಹೊರಡಿಸಿದ್ದ ಲುಕ್‌ ಔಟ್‌ ನೋಟಿಸ್‌ನ್ನು ದುರ್ಬಲಗೊಳಿಸಿ ಮಲ್ಯ ದೇಶ ಬಿಟ್ಟು ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದ್ದರು. ಅಲ್ಲದೆ ಅದೇ ಅಧಿಕಾರಿ ವಜ್ರದ ಆಭರಣ ಉದ್ಯಮಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಸಹ ವಿದೇಶಕ್ಕೆ ಪರಾರಿಯಾಗುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದರು. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top