Monday, 11th December 2017  

Vijayavani

1. ಜೈಲಿನ ಆಸ್ಪತ್ರೆಯಲ್ಲಿ ಬೆಳಗೆರೆಗೆ ಚಿಕಿತ್ಸೆ – ಚೇತರಿಸಿಕೊಂಡ್ರೆ ಬ್ಯಾರಕ್‌ಗೆ ರವಾನೆ – ನೆಲದ ಮೇಲೆ ಕೂರಲು ರವಿ ಪರದಾಟ 2. ಕೊತ ಕೊತ ಕುದಿಯುತ್ತಿದೆ ಕುಮಟಾ – ಉಗ್ರ ಸ್ವರೂಪ ಪಡೆದ ಹಿಂದೂ ಸಂಘಟನೆಗಳ ಪ್ರತಿಭಟನೆ – ಆಕ್ರೋಶಕ್ಕೆ ಹೊತ್ತಿ ಉರಿದ ಐಜಿಪಿ ಕಾರು 3. ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ – ಪ್ರತಿಸ್ಪರ್ಧಿ ಇಲ್ಲದ್ದಕ್ಕೆ ಯುವರಾಜನಿಗೆ ಸಾರಥ್ಯ – ದೆಹಲಿಯಲ್ಲಿ ಕಾರ್ಯಕರ್ತರ ಸಂಭ್ರಾಮಾಚರಣೆ 4. ಮಂಡ್ಯದ ಸಂತೆಬಾಚಹಳ್ಳಿ ಕ್ರಾಸ್‌ ಬಳಿ ಭೀಕರ ಅಪಘಾತ – ಟ್ಯಾಂಕರ್ ಹರಿದು ಬೈಕ್ ಸವಾರರು ಸಾವು – ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪ್ರಕರಣ 5. ಸ್ಟೀಲ್‌ ಬ್ರಿಡ್ಜ್ ಹೋಯ್ತು ಮೆಟ್ರೋ ಬಂತು – ಏರ್‌ಪೋರ್ಟ್‌ಗೆ ರೈಲು ಬಿಡಲು ಸರ್ಕಾರದ ಒಪ್ಪಿಗೆ – ಮಹತ್ವದ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಅಸ್ತು
Breaking News :

ಪ್ರಧಾನಿ ಹೆಸರಲ್ಲಿ ವಂಚನೆ: ಹೌಸಿಂಗ್​ ಸೊಸೈಟಿ ವಿರುದ್ಧ ಸಿಬಿಐ ಎಫ್​ಐಆರ್​

Sunday, 13.08.2017, 9:08 AM       No Comments

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಬಳಕೆ ಮಾಡಿಕೊಂಡು ಹಲವು ಉತ್ತಮ ಕೆಲಸ ನಡೆಯುತ್ತಿವೆ. ಅದರ ಹರಿಯಾಣದ ಸಂಸ್ಥೆಯೊಂದು ಪ್ರಧಾನಿ ಅವರ ಹೆಸರಿನಲ್ಲಿ ಅಕ್ರಮವಾಗಿ ದೇಣಿಗೆ ಸಂಗ್ರಹಿಸಿ ನಾಗರಿಕರಿಗೆ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.

‘ನರೇಂದ್ರ ಮೋದಿ ವಿಚಾರ ಮಂಚ್‌’ ಎಂಬ ಸಂಸ್ಥೆ ಅಕ್ರಮವಾಗಿ ದೇಣಿಗೆ ಸಂಗ್ರಹಿಸುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಂಸ್ಥೆಯ ವಿರುದ್ಧ ಸಿಬಿಐ ಎಫ್​ಐಆರ್​ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಿದೆ. ಈ ಸಂಸ್ಥೆ ಗೃಹ ನಿರ್ಮಾಣ ಉದ್ದೇಶದ ಸಂಸ್ಥೆಯಾಗಿದ್ದು, ಹರಿಯಾಣದ ಸೊಸೈಟಿಗಳ ನೋಂದಣಿ ಮತ್ತು ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಫರೀದಾಬಾದ್‌ನಲ್ಲಿ ಸ್ಥಾಪನೆಗೊಂಡಿದೆ. ಇದಕ್ಕೂ ಪ್ರಧಾನಿಗೂ ಯಾವುದೇ ಸಂಬಂಧ ಇಲ್ಲ ಎಂದು ಸಿಬಿಐ ಹೇಳಿದೆ.

ಕರ್ನಾಟಕ ಸೇರಿದಂತೆ ದೇಶದ 15 ರಾಜ್ಯಗಳಲ್ಲಿ ‘ನರೇಂದ್ರ ಮೋದಿ ವಿಚಾರ ಮಂಚ್‌’ ಶಾಖೆಗಳನ್ನು ಹೊಂದಿದೆ. ಸಂಸ್ಥೆಯ ಅಧ್ಯಕ್ಷ ಜೆ.ಪಿ. ಸಿಂಗ್‌ ಇತರರೊಂದಿಗೆ ಸೇರಿ ಅಕ್ರಮವಾಗಿ ದೇಣಿಗೆ ಸಂಗ್ರಹಿಸಿ ಮೋದಿ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ’. ಹಾಗಾಗಿ ಜೆ.ಪಿ. ಸಿಂಗ್‌ ಹಾಗೂ ಇತರ ಅಪರಿಚಿತರ ವಿರುದ್ಧ ಕ್ರಿಮಿನಲ್‌ ಒಳಸಂಚು ಮತ್ತು ವಂಚನೆ ನಡೆಸಿರುವ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.

ಇನ್ನು, www.nmvmindia.org ವಿಳಾಸದ ವೆಬ್‌ಸೈಟ್‌ ಅನ್ನು ಸಂಸ್ಥೆ ಹೊಂದಿದ್ದು, ಅದರಲ್ಲಿ ಮೋದಿ ಅವರ ಚಿತ್ರಗಳನ್ನು ಪ್ರದರ್ಶಿಸಲಾಗಿದ್ದು, ಅವರ ಟ್ವೀಟ್​ಗಳನ್ನು ಶೇರ್​ ಮಾಡಲಾಗಿದೆ. ಸಂಸ್ಥೆಯ ಅಧ್ಯಕ್ಷ ಜೆ.ಪಿ. ಸಿಂಗ್ ಹಾಗೂ ಇತರ ಸದಸ್ಯರ ಭಾವಚಿತ್ರಗಳೂ ವೆಬ್‌ಸೈಟ್‌ನಲ್ಲಿವೆ’ ಎಂದು ಸಿಬಿಐ ಎಫ್​ಐಆರ್​ನಲ್ಲಿ ತಿಳಿಸಿದೆ. (ಏಜೆನ್ಸೀಸ್​)

 

Leave a Reply

Your email address will not be published. Required fields are marked *

Back To Top