Thursday, 20th September 2018  

Vijayavani

Breaking News

ಮಲ್ಯ ಗ್ರೇಟ್ ಎಸ್ಕೇಪ್​ ಕುರಿತು ಪ್ರಧಾನಿಗೂ ಗೊತ್ತಿತ್ತು: ರಾಹುಲ್​ ಆರೋಪ

Friday, 14.09.2018, 7:52 PM       No Comments

ನವದೆಹಲಿ: ಬ್ಯಾಂಕುಗಳಿಗೆ 9,600 ಕೋಟಿ ರೂ. ಸಾಲ ಮರುಪಾವತಿಸದ ವಿದೇಶಕ್ಕೆ ಪರಾರಿಯಾಗಲು ಉದ್ಯಮಿ ವಿಜಯ್​ ಮಲ್ಯಗೆ ಸಿಬಿಐ ನೆರವು ನೀಡಿತ್ತು. ಈ ವಿಷಯ ಪ್ರಧಾನಿ ನರೇಂದ್ರ ಮೋದಿಗೂ ಗೊತ್ತಿತ್ತು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮಲ್ಯ ವಿರುದ್ಧ 2015ರಲ್ಲಿ ‘ಲುಕ್ ಔಟ್’ ನೋಟಿಸ್ ಜಾರಿಯಾಗಿತ್ತು. ಇದರಿಂದ ಅವರು ದೇಶ ಬಿಟ್ಟು ಹೋಗುವುದಕ್ಕೆ ಅಡ್ಡಿಯಾಗಿತ್ತು. ಮಲ್ಯ ದೇಶ ತೊರೆಯುವ ಮುನ್ನ ಸಿಬಿಐ ನೋಟಿಸ್​ ಅನ್ನು ಮಾರ್ಪಾಟು ಮಾಡಿ ‘ಇನ್ಫಾರ್ಮ್ ನೋಟಿಸ್’ ಹೊರಡಿಸಿತ್ತು. ಪ್ರಧಾನ ಮಂತ್ರಿಗಳ ಗಮನಕ್ಕೆ ತರದೆ ನೋಟಿಸ್​ನಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ರಾಹುಲ್ ಟ್ವಿಟರ್​ನಲ್ಲಿ ಆಪಾದಿಸಿದ್ದಾರೆ.

ಆದರೆ, ರಾಹುಲ್​ ಗಾಂಧಿ ಆರೋಪವನ್ನು ಸಿಬಿಐ ತಳ್ಳಿಹಾಕಿದ್ದು, ಮಲ್ಯ ವಿಷಯದಲ್ಲಿ ಯಾವುದೇ ಸಡಿಲತೆ ತೋರಿಲ್ಲ ಎಂದು ಹೇಳಿದೆ. ಈ ಮಧ್ಯೆ, ಯುಪಿಎ ಆಡಳಿತಾವಧಿಯಲ್ಲಿ ಮಲ್ಯಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳಿಂದ ಸಾಲ ಮಂಜೂರಾತಿ ಆಗಿದ್ದರಲ್ಲಿ ಹಣಕಾಸು ಸಚಿವಾಲಯದ ಅಧಿಕಾರಗಳ ಪಾತ್ರ ಕುರಿತಂತೆ ಸಿಬಿಐ ಮರುತನಿಖೆ ಕೈಗೊಂಡಿದೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್)

 

 

Leave a Reply

Your email address will not be published. Required fields are marked *

Back To Top