Wednesday, 24th October 2018  

Vijayavani

ರಂಗೇರಿದ ಉಪ ಚುನಾವಣಾ ಕಣ-ಜಮಖಂಡಿಯಲ್ಲಿಂದು ಬಿಎಸ್ ವೈ ಮತಬೇಟೆ-ಸಕ್ಕರೆ ನಾಡು ಮಂಡ್ಯದಲ್ಲಿಂದು ಸಿದ್ದರಾಮಯ್ಯ ಪ್ರಚಾರ        ದೀಪಾವಳಿಯಿಂದ ಲೋಡ್​ ಶೆಡ್ಡಿಂಗ್-ಇಂಧನ ಇಲಾಖೆ ಅಧಿಕಾರಿಗಳ ಜತೆ ಸಿಎಂ ಸಭೆ-ಕತ್ತಲಲ್ಲಿ ಮುಳುಗುತ್ತಾ ಕರ್ನಾಟಕ..?        ಸಾಲಮನ್ನಾವೂ ಇಲ್ಲ, ಬೆಲೆಯೂ ಇಲ್ಲ-ಬೆವರು ಸುರಿಸಿ ಬೆಳೆದ ಬೆಳೆ ಕೇಳೋರೂ ಇಲ್ಲ-ಅನ್ನದಾತನಿಗೆ ಕಣ್ಣೀರು ತರಿಸುತ್ತಿದೆ ಈರುಳ್ಳಿ        ಬೆಂಗಳೂರಲ್ಲಿ ಅನಧಿಕೃತ ಬಿಟ್ ಕಾಯಿನ್ ATM-ಆರೋಪಿ ಹರೀಶ್ ಬಂಧನ-ಕೆಂಪ್ ಫೋರ್ಟ್​ನಲ್ಲಿದ್ದ ಎಟಿಎಂ ಪೊಲೀಸರ ವಶಕ್ಕೆ        ಕೊಳ್ಳೆಗಾಲದಲ್ಲಿ 17 ವರ್ಷಗಳಿಂದ ಕಾಮಗಾರಿ ಅಪೂರ್ಣ-ಇನ್ನೂ ಆಗಿಲ್ಲ ವಾಲ್ಮೀಕಿ ಭವನ ನಿರ್ಮಾಣ-ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ        ವಿಜಯಪುರದಲ್ಲಿ ಗಂಗಾಕಲ್ಯಾಣ ಗೋಲ್ಮಾಲ್-ಫಲಾನುಭವಿಗಳಿಗೆ ಸಿಗದ ಬೋರ್ ವೇಲ್ ಸೌಲಭ್ಯ-ಯಾರದ್ದೋ ಹೆಸರಲ್ಲಿ ಅನುದಾನ ನೀಡಿದ ಅಧಿಕಾರಿಗಳು       
Breaking News

ರೈಲ್ವೆ ಟಿಕೆಟ್​ ಬುಕ್ಕಿಂಗ್​ ಸಾಫ್ಟ್​ವೇರ್​ಗೆ ಕನ್ನ: ಸಿಬಿಐ ಟೆಕ್ಕಿ ಬಂಧನ

Thursday, 28.12.2017, 4:23 PM       No Comments

<< ಸಿಬಿಐನಲ್ಲೇ ಕಾರ್ಯ ನಿರ್ವಹಿಸುತ್ತ ತಂತ್ರಾಂಶ ಬರೆದು ಮಾರಾಟ ಮಾಡಿದ್ದ >>

ನವದೆಹಲಿ: ಐಆರ್​ಸಿಟಿಸಿ ಟಿಕೆಟ್​ ಬುಕಿಂಗ್​ ಸಾಫ್ಟ್​ವೇರ್​ಗೆ ಕನ್ನ ಹಾಕಿ ಟ್ರಾವೆಲ್​ ಏಜೆಂಟರು ಸಿಂಗಲ್ ಕ್ಲಿಕ್​ನಲ್ಲಿ ನೂರಾರು ತತ್ಕಾಲ್​ ಟಿಕೆಟ್​ ಬುಕ್​ ಮಾಡಲು ತಂತ್ರಾಂಶ ಅಭಿವೃದ್ಧಿಪಡಿಸಿದ್ದ ಟೆಕ್ಕಿಯನ್ನು ಸಿಬಿಐ ಬಂಧಿಸಿದೆ.

ಸಿಬಿಐನಲ್ಲೇ ಸಹಾಯಕ ಪ್ರೊಗ್ರಾಮರ್​ ಅಗಿ ಕಾರ್ಯ ನಿರ್ವಹಿಸುತ್ತಿದ್ದ ಅಜಯ್​ ಗರ್ಗ್​ ಮತ್ತು ಆತನ ಸಹಚರ ಅನಿಲ್​ ಗುಪ್ತಾನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಅಜಯ್​ ಗರ್ಗ್​ ನೂರಾರು ತತ್ಕಾಲ್​ ಟಿಕೆಟ್​ಗಳನ್ನು ಬುಕ್​ ಮಾಡಲು ಅನುಕೂಲವಾಗುವಂತಹ ಸಾಫ್ಟ್​ವೇರ್​ ಸಿದ್ಧಪಡಿಸಿದ್ದ. ಈ ಸಾಫ್ಟ್​ವೇರ್​ ಅನ್ನು ಆರೋಪಿಗಳು ಟಿಕೆಟ್​ ಬುಕಿಂಗ್​ ಏಜೆಂಟ್​ಗಳಿಗೆ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದರು ಎಂದು ಸಿಬಿಐ ವಕ್ತಾರ ಅಭಿಷೇಕ್​ ದಯಾಲ್​ ತಿಳಿಸಿದ್ದಾರೆ.

ಅಜಯ್​ ಗರ್ಗ್​ನೊಂದಿಗೆ ಆತನ ಕುಟುಂಬಸ್ಥರು ಸೇರಿ ಒಟ್ಟು 13 ಜನರು ಭಾಗಿಯಾಗಿದ್ದು, ಅವರ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಿದೆ. ಗರ್ಗ್​ ನೀಡಿದ ಸಾಫ್ಟ್​ವೇರ್​ ಮೂಲಕ ಬುಕ್​ ಮಾಡಲಾದ ಟಿಕೆಟ್​ಗೆ ಈತ ಕಮಿಷನ್​ ಪಡೆಯುತ್ತಿದ್ದ. ಈತ ಏಜೆಂಟರಿಂದ ಕಮಿಷನ್​ ಹಣವನ್ನು ಬಿಟ್​ ಕಾಯಿನ್​ ರೂಪದಲ್ಲಿ ಮತ್ತು ಹವಾಲಾ ಜಾಲದ ಮೂಲಕ ಪಡೆಯುತ್ತಿದ್ದ.

ಸಾಮಾನ್ಯವಾಗಿ ತತ್ಕಾಲ್​ ಟಿಕೆಟ್​ ಬುಕಿಂಗ್​ ಆರಂಭವಾದ ಕೆಲವೇ ನಿಮಿಷಗಳಲ್ಲಿ ಎಲ್ಲಾ ಟಿಕೆಟ್​ಗಳು ಬುಕ್​ ಆಗುತ್ತಿದ್ದವು. ಸಾಮಾನ್ಯ ಜನರು ತಮ್ಮ ಕಂಪ್ಯೂಟರ್​ ಮೂಲಕ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್​ ಬುಕ್​ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಏಜೆಂಟರು ತಾವು ಬುಕ್​ ಮಾಡಿದ ಟಿಕೆಟ್​ಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರು ಎಂಬ ದೂರು ಸಾಮಾನ್ಯವಾಗಿ ಕೇಳಿ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆಯನ್ನು ಪ್ರಾರಂಭಿಸಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top