Wednesday, 19th September 2018  

Vijayavani

ಸಂಪುಟಕ್ಕೆ ಸತೀಶ್​​​​​.. ಲೋಕಸಭೆಗೆ ರಮೇಶ್​​ - ಬೆಳಗಾವಿ ಕದನಕ್ಕೆ ತೆರೆ ಎಳೆಯಲು ಸಿದ್ದು ಪ್ಲಾನ್​​        ಹೈಕಮಾಂಡ್​​ ಅಂಗಳಕ್ಕೆ ಅತೃಪ್ತರ ಪುರಾಣ - ರಾಹುಲ್​​ ಜತೆ ಇಂದು ಸಿದ್ದರಾಮಯ್ಯ ಚರ್ಚೆ        ರಣೋತ್ಸಾಹದಲ್ಲಿ ಕಮಲ ಪಾಳಯ - ಇಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​​ನಲ್ಲಿ ಶಾಸಕಾಂಗ ಸಭೆ        ಸಚಿವ ಡಿಕೆಶಿಗೆ ಫುಡ್​​ ಪಾಯ್ಸನ್​ - ಅಪೋಲೋ ಆಸ್ಪತ್ರೆಯಲ್ಲಿ ಸಚಿವರಿಗೆ ಟ್ರೀಟ್​ಮೆಂಟ್​ - ಸಂಜೆ ಡಿಸ್ಚಾರ್ಜ್ ಸಾಧ್ಯತೆ        ರಾಮಚಂದ್ರಾಪುರ ಮಠದ ಕೈತಪ್ಪಿದ ಗೋಕರ್ಣ ದೇಗುಲ - ಶ್ರೀ ಮಹಾಬಲೇಶ್ವರ ದೇವಸ್ಥಾನ ಸರ್ಕಾರದ ಸುಪರ್ದಿಗೆ        ದುಬೈ ಅಂಗಳದಲ್ಲಿಂದು ಭಾರತ- ಪಾಕ್​​ ಕಾಳಗ - ರೋಹಿತ್​​​​ ಪಡೆ ವಿರುದ್ಧ ಸರ್ಫರಾಜ್​ ಟೀಮ್​​ ತಂತ್ರ       
Breaking News

ನಗುತ್ತಿರಬೇಕು ನಿಜ. ಆದರೆ ಯಾರನ್ನೋ ನೋಡಿ ನಗುವುದಕ್ಕಿಂತ ಎಲ್ಲರೊಡನೆ ಬೆರೆತು ನಗುತ್ತ ನಗಿಸುವ ಸುಖ ಹೆಚ್ಚಿನದು.

 

ಯಾರನ್ನೇ ಆಗಲಿ ಸೋಲಿಸಲು ಪ್ರಯತ್ನಿಸುವುದಕ್ಕಿಂತ ಎಲ್ಲರ ಹೃದಯ ಗೆಲ್ಲಲು ಯತ್ನಿಸಬೇಕು. ಸೋಲಿಸುವ ಸುಖಕ್ಕಿಂತ ಗೆಲ್ಲುವ ಖುಷಿ ದೊಡ್ಡದು!

ನಮ್ಮ ಹವ್ಯಾಸ, ಆದ್ಯತೆಗಳನ್ನು ಬದಲಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಆ ಮೂಲಕ ಭವಿಷ್ಯವನ್ನು ನಮಗೆ ಬೇಕಾದಂತೆ ಬದಲಿಸಿಕೊಳ್ಳಬಹುದು!

 

ಕ್ಷಮಿಸುವುದು ಬೇರೆಯವರನ್ನು ಮಾತ್ರ ಅಂದುಕೊಳ್ಳುತ್ತೇವೆ. ನಮ್ಮ ತಪ್ಪುಗಳನ್ನು ಕೂಡ ಒಪ್ಪಿಕೊಂಡು ಕ್ಷಮಿಸಿಕೊಳ್ಳುತ್ತ ಕ್ರಮಿಸುವುದು ಸರಿಯಾದ ಕ್ರಮ.

ಬದುಕು ಬದಲಾಯಿಸಿಕೊಳ್ಳಲು ಸಹಾಯಕವಾಗುವ ಪ್ರತಿ ಚಿಂತನೆಯೂ ಒಂದು ಪ್ರಾರ್ಥನೆಯೇ. ಎಲ್ಲರ ಒಳಿತಿಗಾಗಿ ನಮ್ಮ ಪ್ರಾರ್ಥನೆ ಜಾರಿಯಲ್ಲಿರಲಿ!

ಹೊಟ್ಟೆ ತುಂಬಿಸಿಕೊಳ್ಳುವುದಕ್ಕಷ್ಟೇ ನಮ್ಮ ಬಹುಪಾಲು ಕೆಲಸಗಳು ಸೀಮಿತಗೊಂಡಿರುತ್ತವೆ. ಜೊತೆಗೆ ಹೃದಯಗಳನ್ನು ಗಳಿಸುವತ್ತಲೂ ನಮ್ಮ ಗಮನವಿರಲಿ!

ಬೇರೆಯವರಿಗೆ ನಮ್ಮನ್ನು ಹೋಲಿಸಿಕೊಳ್ಳುವುದು ನಮಗೆ ನಾವೇ ಮಾಡಿಕೊಳ್ಳುವ ಅಪಮಾನ. ನಮ್ಮದೇ ವ್ಯಕ್ತಿತ್ವ ರೂಪಿಸಿಕೊಂಡು ಇತರರಿಗೆ ಪ್ರೇರಣೆಯಾಗಲು ಯತ್ನಿಸಬೇಕು!

ಮಂದಿರ, ಮಸೀದಿಗಳಲ್ಲಿ ಮಾಡುವ ಗಟ್ಟಿ ಪ್ರಾರ್ಥನೆಗಳು ಸುತ್ತಲಿನ ಜನರನ್ನು ತಲುಪಬಹುದಷ್ಟೇ. ಹೃದಯದಿಂದ ಹೊರಟ ಮೌನ ಅಹವಾಲು ದೇವರನ್ನು ಮುಟ್ಟುತ್ತದೆ!

ಮಾತನಾಡುವುದೆಂದರೆ ನಮಗೆ ಗೊತ್ತಿರುವುದನ್ನೇ ಪುನಃ ಹೇಳಿದಂತೆ. ಮಾತನ್ನು ಸರಿಯಾಗಿ ಕೇಳಿಸಿಕೊಳ್ಳುವುದರಿಂದ ನಮಗೆ ತಿಳಿಯದ ಅನೇಕ ವಿಚಾರಗಳು ದೊರಕುತ್ತವೆ!

ಸ್ವಲ್ಪ ಬಾಗಿದರೂ ತೊಂದರೆಯಿಲ್ಲ ಸಂಬಂಧಗಳನ್ನು ಉಳಿಸಿಕೊಳ್ಳಬೇಕು, ತುಂಡಾಗಿ ನಿರುಪಯುಕ್ತವಾಗುವವರೆಗೂ ಎಳೆದಾಡಬಾರದು!

Back To Top