Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಸಮಯ ಹಾಳಾಯಿತು ಅನ್ನುವುದಕ್ಕೆ ಅರ್ಥವೇ ಇಲ್ಲ, ಉಪಯೋಗಿಸಿಕೊಳ್ಳುವಲ್ಲಿ ಸೋತರೆ ಅದು ನಮಗಾದ ನಷ್ಟ. ಸಮಯದ ಸದ್ವಿನಿಯೋಗಕ್ಕೆ ಯತ್ನಿಸೋಣ!

ಸಂತೋಷದಿಂದ ನಗು, ನಗುತ್ತ ಇರುವವರಲ್ಲಿ ಎಲ್ಲ ಇದೆ ಅಂತಲ್ಲ, ಇದ್ದುದ್ದರಲ್ಲಿ ಸಂತೋಷ ಕಂಡುಕೊಂಡ ಅನೇಕರು ನಮಗೆ ಆದರ್ಶವಾಗಲಿ!

ಭಯವೆಂದರೇ ಹಾಗೆ, ಹೆದರಿ ದೂರ ಹೋದಷ್ಟೂ ಹತ್ತಿರ ಬರುತ್ತದೆ. ಹೆದರಿಸಿದಷ್ಟೂ ದೂರ ಓಡುತ್ತದೆ. ಭಯಮುಕ್ತರಾಗಿ ನಿಶ್ಚಿಂತೆ ಅನುಭವಿಸೋಣ!

ಅವಶ್ಯವಿರುವ ಸಂಗತಿಗಳ ಯಾದಿಯನ್ನು ತಯಾರಿಸಿಕೊಂಡು ಸಾಧ್ಯವಾದುದನ್ನು ಆದ್ಯತೆಯ ಮೇರೆಗೆ ಶ್ರದ್ಧೆಯಿಂದ ಮಾಡುತ್ತ ಸಾಗಿದಾಗ ಅಸಾಧ್ಯವಾದುದು ಉಳಿಯುವುದೇ ಇಲ್ಲ

ಅಗತ್ಯಕ್ಕಿಂತ ಹೆಚ್ಚು ಆಸೆ ಪಡುವುದೇ ದುಃಖಕ್ಕೆ ಮುಖ್ಯ ಕಾರಣ. ಇದ್ದುದರಲ್ಲಿಯೇ ತೃಪ್ತಿಪಡುವುದನ್ನು ರೂಢಿಸಿಕೊಂಡಾಗ ಸಂತೋಷ ಹೆಚ್ಚುತ್ತದೆ!

ಖುಷಿಯ ಕಾರಣಗಳನ್ನು ನಿರ್ದಿಷ್ಟ ಸೂತ್ರದಲ್ಲಿ ಹಿಡಿದಿಡಲಾಗದು. ಇನ್ನೊಬ್ಬರ ದುಃಖಕ್ಕೆ ಕಾರಣವಾಗದಂತಹ ಆನಂದವನ್ನು ನಾವೇ ಸೃಷ್ಟಿಸಿಕೊಂಡು ಸಾಗೋಣ!

ಅಸಾಧ್ಯವೆಂಬ ವೈರಿ, ಅಪಾಯವೆಂಬ ಆಟ, ಸಾಧ್ಯ ಎನ್ನುವ ಭರವಸೆ, ಸವಾಲುಗಳ ಸರಮಾಲೆ, ಇತ್ಯಾದಿಗಳೇ ಯಶಸ್ಸಿನ ಸರಕುಗಳು!

 

ಇನ್ನೊಬ್ಬರ ಸಂತೋಷದಲ್ಲಿ ಪಾಲ್ಗೊಳ್ಳುವುದು ಸರಿ. ಅದಕ್ಕೆ ಕಾರಣ ನಾವೇ ಆಗಿದ್ದರೆ ಇನ್ನೂ ಖುಷಿ. ಯಾರಿಗೂ ನಮ್ಮಿಂದ ದುಃಖವಾಗದಿರಲಿ!

ನಮಸ್ಕರಿಸುವ ಎರಡು ಕೈಗಳಿಗಿಂತ ನೀಡುವ ಒಂದು ಕೈ ಶ್ರೇಷ್ಠ. ನೀಡುವ ಒಂದು ಕೈಯನ್ನು ಬಲಪಡಿಸುವಂತೆ ಎರಡೂ ಕೈಗಳಿಂದ ಪ್ರಾರ್ಥಿಸೋಣ!

ಹಣ , ಹೆಸರುಗಳಿಗಾಗಿ ಗುದ್ದಾಡುವ ಬದಲು ಮಾಡುವ ಕೆಲಸವನ್ನು ಶ್ರದ್ಧೆ ಪ್ರಾಮಾಣಿಕತೆಗಳಿಂದ ಮಾಡಿದರೆ ಅವು ತಾನಾಗಿ ಲಭಿಸುತ್ತವೆ.

Back To Top