Sunday, 24th June 2018  

Vijayavani

ಆಪ್ತರ ಜತೆ ಮಾಜಿ ಸಿಎಂ ಸಭೆ ಹಿನ್ನೆಲೆ - ಸಿದ್ದರಾಮಯ್ಯ ಭೇಟಿಗೆ ತೆರಳಿದ ಪರಂ - ರಾಜಕೀಯ ವಿಚಾರಗಳ ಬಗ್ಗೆ ನಾಯಕರ ಚರ್ಚೆ ಸಾಧ್ಯತೆ        ಪ್ರಕೃತಿ ಚಿಕಿತ್ಸಾಲಯದಿಂದ ಹೊರ ಬಂದ ಸಿದ್ದು - ಅಭಿಮಾನಿಗಳ ಜತೆ ಮಾಜಿ ಸಿಎಂ ಚರ್ಚೆ - ಕೈ ಕಾರ್ಯಕರ್ತರ ಜತೆ ಸೆಲ್ಫಿಗೆ ಫೋಸ್​​        ಶಿವಮೊಗ್ಗದಲ್ಲಿ ಮತ್ತೆ ಝಳಪಿಸಿದ ಮಾರಕಾಸ್ತ್ರ - ರೌಡಿ ಶೀಟರ್​​​ ಹಬೀಬ್​ ಬರ್ಬರ ಹತ್ಯೆ - ತುಂಗಾನಗರ ಠಾಣೆಯಲ್ಲಿ ಪ್ರಕರಣ        ಖಾತೆ ಹಂಚಿಕೆಯಾಯ್ತು, ಈಗ ಬಂಗಲೆ ಸರದಿ - ಒಂದೊಂದು ಬಂಗಲೆಗೆ ಮೂವರ ಪೈಪೋಟಿ - ಸಿಎಂ ಕುಮಾರಸ್ವಾಮಿಗೆ ಬಂಗಲೆ ಕೊಡೋದೇ ಚಿಂತೆ        ಹಿಟ್​​ಲಿಸ್ಟ್​​ನಲ್ಲಿದ್ದ 20 ಉಗ್ರರ ಪೈಕಿ ಇಬ್ಬರು ಫಿನಿಶ್ - ಕುಲ್ಗಾಮದಲ್ಲಿ ಇಬ್ಬರು ಎಲ್​​ಇಟಿ ಉಗ್ರರು ಉಡೀಸ್​ - ಶಸ್ತ್ರ ಸಹಿತ ಒಬ್ಬ ಟೆರರ್​ ಸರೆಂಡರ್        ಮನೆಗಾಗಿ ಕಣ್ಣೀರಿಟ್ಟ ವೃದ್ಧೆಗೆ ಶಾಸಕರ ಸಹಾಯ - 20 ಸಾವಿರ ಹಣ ನೀಡಿದ ಡಾ.ರಂಗನಾಥ - ದಿಗ್ವಿಜಯ ನ್ಯೂಸ್​ ವರದಿಗೆ ಸ್ಪಂದಿಸಿದ ಕುಣಿಗಲ್​ ಶಾಸಕ       
Breaking News

ದೇವಸ್ಥಾನಕ್ಕೆ ಹೋದಾಕ್ಷಣ ಪುಣ್ಯ ಸಿಗುತ್ತದೆ ಅಂತಲ್ಲ. ಒಳ್ಳೆಯ ಕೆಲಸ ಮಾಡಲು ಪ್ರೇರಣೆ ಸಿಗುತ್ತದೆ. ಅದೇ ನಮ್ಮ ಬದುಕಿನ ಮುನ್ನಡೆಗೆ ಸ್ಪೂರ್ತಿಯಾಗಲಿ.

ನಮ್ಮಂತೆಯೇ ಇತರರು ಎಂಬ ಮನಸ್ಥಿತಿಯನ್ನು ಗಂಭೀರವಾಗಿ ಬೆಳೆಸಿಕೊಂಡಾಗ ಯಾರನ್ನೂ ನೋಯಿಸುವ ಸಂದರ್ಭವೇ ಇರುವದಿಲ್ಲ. ಯಾರಿಗೂ ತೊಂದರೆ ನೀಡದ ನೀತಿ ನಮ್ಮದಾಗಲಿ.

ಈಗಲೇ ಅಂತಲ್ಲ ನಿಧಾನವಾಗಿಯಾದರೂ ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸವಿದ್ದವರ ಸಮೀಪ ಸೋಲು ಸುಳಿಯುವುದಿಲ್ಲ. ದೃಢವಾಗಿದ್ದುಕೊಂಡು ಸೋಲನ್ನು ಸೋಲಿಸೋಣ.

ಮನಸ್ಸಿಗೆ ಬೇಕೆನಿಸಿದ್ದನ್ನು ಕಷ್ಟಪಟ್ಟು ಪಡೆದಾಗ ಸಾರ್ಥಕ ಸಂತೋಷ ನಮ್ಮದಾಗುತ್ತದೆ. ಸಿಕ್ಕಿದ್ದನ್ನೇ ಇಷ್ಟಪಡುವುದೂ ಸರಿಯೇ. ಒಟ್ಟಿನಲ್ಲಿ ಸಂತೋಷ ನಮ್ಮೊಂದಿಗಿರಲಿ.

ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಸಬೇಕು. ಆದರೆ ಯೋಗ್ಯರನ್ನು ಮಾತ್ರ ನಂಬಬೇಕು. ಪ್ರೀತಿ ವಿಶ್ವಾಸಗಳೊಂದಿಗೆ ಯೋಗ್ಯರ ಸಂಬಂಧಗಳಿಸಿ ಉಳಿಸಿಕೊಳ್ಳಬೇಕು.

ಶಿಕ್ಷಣವೇ ಎಲ್ಲವೂ ಅಲ್ಲ. ಶಾಲೆಯ ಒಳಗೆ ಕಲಿಯುವುದಕ್ಕಿಂತ ಹೆಚ್ಚು ಹೊರಗೆ ಕಲಿಯಲು ಸಾಧ್ಯ. ಅನುಭವಗಳೇ ಪಾಠಗಳಾಗುವ ಇಡೀ ಜೀವನವೇ ಒಂದು ಶಿಕ್ಷಣ.

ಅಹಂಕಾರ ಕ್ಷಮೆಯನ್ನು ನಿರೀಕ್ಷಿಸುತ್ತದೆ. ವಿನಯ ಕ್ಷಮೆಯನ್ನು ನೀಡುತ್ತದೆ. ಅಹಂಕಾರದ ಸ್ಥಳವನ್ನು ವಿನಯ ಆವರಿಸುತ್ತ ಸಾಗುವ ದಿಕ್ಕಿನಲ್ಲಿ ನಮ್ಮ ಪ್ರಯತ್ನವಿರಲಿ.

ಯಾವಾಗಲೂ ನಗು ನಗುತ್ತಾ ಇರುವವರ ಹತ್ತಿರ ಎಲ್ಲವೂ ಇದೆ ಅಂತಲ್ಲ. ಇದ್ದುದರಲ್ಲಿಯೇ ಎಲ್ಲವನ್ನೂ ಕಂಡುಕೊಂಡು ಖುಷಿಪಡುವ ಅವರ ಜಾಯಮಾನವನ್ನು ಅನುಸರಿಸೋಣ.

ಭವಿಷ್ಯದ ಫಲ ನಿರ್ಣಯವಾಗುವುದು ನಮ್ಮ ಇಂದಿನ ಕೆಲಸದ ಯೋಗ್ಯತೆಯ ಮೇಲೆ. ಇಂದಿನ ನಮ್ಮ ಪ್ರತಿ ಕೆಲಸವೂ ಸಮರ್ಪಕವಾಗಿರಲಿ.

ಸುಂದರ ಸೂರ್ಯಾಸ್ತ ಮುಗಿದು ಹೋಯಿತೆಂದು ಚಿಂತಿಸುತ್ತ ಕೂರುವುದಲ್ಲ. ಅದು ನಾಳೆ ಬೆಳಗಿನ ಬೆಡಗಿಗೆ ಪೂರ್ವ ತಯಾರಿ. ಆ ಸಮಯಕ್ಕೆ ನಾವು ಹಾಜರಿದ್ದು ಖುಷಿ ಬಾಚಿಕೊಳ್ಳೋಣ.

Back To Top