Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಯೋಗ್ಯ ಸಂಬಂಧಕ್ಕೆ ಸುಂದರ ಮುಖ ಇಂಪಾದ ಧ್ವನಿಗಳೇ ಆಗಬೇಕೆಂದೇನಿಲ್ಲ. ಹೃದಯ ಸೌಂದರ್ಯ ಹಾಗೂ ಮುರಿಯಲಾಗದ ನಂಬಿಕೆಗಳ ಮೂಲಕ ಸಂಬಂಧ ಉಳಿಸಿಕೊಳ್ಳಬೇಕು.

ಸದ್ವರ್ತನೆಯ ಮೂಲಕ ಗಳಿಸಿಕೊಂಡ ಮುಖದ ಮೇಲಿನ ನಗುವನ್ನು ಕಣ್ಣೀರು ಅಳಿಸಿ ಹಾಕಲು ಅವಕಾಶವಿಲ್ಲದಂತ ಎಚ್ಚರದ ನಡೆ ನಮ್ಮದಾಗಬೇಕು.

ಸಿಕ್ಕಾಗ ಇನ್ನಷ್ಟು, ಇನ್ನಷ್ಟು ಸಿಕ್ಕಾಗ ಮತ್ತಷ್ಟು ಎಂಬುದಕ್ಕೆ ಕೊನೆಯಿಲ್ಲ. ಕಳೆದುಕೊಂಡಾಗ ಸ್ವಲ್ಪವೇ ಸಾಕಾಗಿತ್ತು ಎಂಬ ಹಳಹಳಿಕೆಗೆ ಅವಕಾಶವಾಗದಂತೆ ವರ್ತಿಸೋಣ.

ಪರಸ್ಪರ ಪ್ರೀತಿಯಿಂದ ಬೆಸೆಯುವ ಕೈಗಳು, ಆಲಿಸುವ ಕಿವಿಗಳು, ಅರ್ಥ ಮಾಡಿಕೊಳ್ಳುವ ಹೃದಯ ಇವೆಲ್ಲ ನಮಗೆ ದಕ್ಕಿದರೆ ಅದೊಂದು ಭಾಗ್ಯ

ಕಷ್ಟಗಳಿಗೆ ಕೃತಜ್ಞತೆ ಅರ್ಪಿಸಬೇಕು. ಅವುಗಳಿಂದಲೇ ನಮ್ಮ ಇಂದಿನ ಸುಖದ ಸ್ಥಿತಿ ನಿರ್ವಣವಾಗಿದ್ದು. ಕಹಿಯನ್ನು ನೆನಪಿಸಿಕೊಳ್ಳುತ್ತಲೇ ಸಿಹಿ ಸವಿಯೋಣ.

ಆಯ್ಕೆ ತಪ್ಪಿದ್ದಾಗಲೂ ಗುರಿ ತಲುಪಿದ್ದೇವಲ್ಲ ಅಂದುಕೊಂಡಿರುತ್ತೇವೆ. ತಪ್ಪಿದ್ದು ಆಯ್ಕೆಯಲ್ಲ ಆ ಕುರಿತು ನಮ್ಮ ತಿಳುವಳಿಕೆ ತಪ್ಪಾಗಿತ್ತು ಎಂಬುದನ್ನು ಅರಿಯೋಣ.

ಒಂಟಿಯಾಗಿರುವಾಗ ನಮ್ಮ ಯೋಚನೆಗಳನ್ನೂ ಜನರೊಟ್ಟಿಗಿರುವಾಗ ನಮ್ಮ ಮಾತುಗಳನ್ನೂ ನಿಯಂತ್ರಿಸುವ ಕಲೆ ರೂಢಿಸಿಕೊಂಡಾಗ ಅನವಶ್ಯಕ ಸಂಗತಿಗಳು ಘಟಿಸುವುದಿಲ್ಲ.

ಹಾದಿ ಬದಲಿಸುವ ಸಂದರ್ಭ ಬಂದರೂ ಬರಲಿ, ಆದರೆ ಗುರಿಯಲ್ಲಿ ವ್ಯತ್ಯಾಸ ಬೇಡ. ನಮ್ಮ ಆಶಯಗಳನ್ನು ಜೀವಂತವಾಗಿರಿಸಿಕೊಂಡೇ ಎಲ್ಲವನ್ನೂ ನಿಭಾಯಿಸೋಣ.

ಪ್ರತಿ ಮುಂಜಾನೆಯೂ ನಮ್ಮ ಬೊಗಸೆಗೆ ಇಪ್ಪತ್ನಾಲ್ಕು ಗಂಟೆಗಳು ಬಂದು ಬೀಳುತ್ತವೆ. ಅವುಗಳ ಸದ್ವಿನಿಯೋಗಕ್ಕೆ ನಮ್ಮ ದಿನಚರಿಯನ್ನು ಅಣಿಗೊಳಿಸೋಣ.

ಮುರಿದ ವಿಶ್ವಾಸವೆಂದರೆ ಕರಗಿದ ಚಾಕಲೇಟಿದ್ದಂತೆ. ಎಷ್ಟು ಪ್ರಯತ್ನಿಸಿದರೂ ಆಕಾರ ರುಚಿಗಳೆರಡೂ ಮೊದಲಿನಂತಿರುವುದಿಲ್ಲ. ವಿಶ್ವಾಸವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳೋಣ.

Back To Top