Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

ಉಡುಪು ಖರೀದಿಸಿದವರಿಗೆ ಸಿಕ್ಕಿತು ಕಾರ್!

Wednesday, 14.02.2018, 3:03 AM       No Comments

ಹುಬ್ಬಳ್ಳಿ: ಓದುಗರಿಗೆ ಸದಾ ಹೊಸತನವನ್ನೇ ನೀಡುತ್ತ ಬಂದಿರುವ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ 247 ನ್ಯೂಸ್’ ವತಿಯಿಂದ ದಸರಾ ಹಾಗೂ ದೀಪಾವಳಿ ನಿಮಿತ್ತ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಭಾಗಿಯಾಗಿ, ಉಡುಪು ಖರೀದಿಸಿದವರಿಗೆ ಲಕ್ಕಿ ಡ್ರಾದಲ್ಲಿ ಕಾರು ಸಿಕ್ಕರೆ, ಹಬ್ಬಕ್ಕೆ ಸಿಹಿ ತಿನಿಸು ಖರೀದಿಸಿದವರಿಗೆ ಬೈಕ್ ಸಿಕ್ಕಿದೆ.

ವಿಜಯೋತ್ಸವದ ಬಹುಮಾನಪತ್ರ ಕೈಗೆ ಬಂದಾಗ ವಿಜೇತರ ಹಿಗ್ಗು ನೂರ್ಮಡಿಯಾಗಿತ್ತು. ಮಹಾಶಿವರಾತ್ರಿ ದಿನವಾದ ಮಂಗಳವಾರ ನಗರದ ‘ವಿಜಯವಾಣಿ’ ಕಚೇರಿಯಲ್ಲಿ ಏರ್ಪಡಿಸಿದ್ದ ಹುಬ್ಬಳ್ಳಿ ಆವೃತ್ತಿ ವ್ಯಾಪ್ತಿಯ ಸಮಾರಂಭದಲ್ಲಿ, ವೀರೇಂದ್ರ ಡ್ರೆಸ್ ಲ್ಯಾಂಡ್ ಗ್ರಾಹಕ ಧಾರವಾಡದ ವೆಂಕಟೇಶ ಹೊಸಮನಿ ಕಾರನ್ನು ಬಹುಮಾನ ಪಡೆದಾಗ ಎಲ್ಲಿಲ್ಲದ ಸಂತಸ.

ಬಿಗ್ ಮಿಶ್ರಾ ಪೇಢಾ ಗ್ರಾಹಕ ಖಾನಾಪುರದ ಶಂಕರಗೌಡ ಪಾಟೀಲ ಅವರಿಗೆ ಬೈಕ್, ಉಳಿದ ಅದೃಷ್ಟವಂತರಿಗೆ ಎಲ್​ಇಡಿ ಟಿವಿ, ರೆಫ್ರಿಜರೇಟರ್ ಸೇರಿ ನಾನಾ ಬಹುಮಾನಗಳನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಂಗಡಿ ಮಾಲೀಕರು ಹಾಗೂ ಗ್ರಾಹಕರ ಮಧ್ಯೆ ಬಾಂಧವ್ಯ ಹೆಚ್ಚಿಸುವ ನಿಟ್ಟಿನಲ್ಲಿ ವಿಆರ್​ಎಲ್ ಮೀಡಿಯಾ ಸಂಸ್ಥೆ 6 ವರ್ಷಗಳಿಂದ ‘ವಿಜಯೋತ್ಸವ’ ಹಮ್ಮಿಕೊಳ್ಳುತ್ತ ಬಂದಿದೆ. ಈ ಬಾರಿ 2017 ಬಹುಮಾನಗಳನ್ನು ರಾಜ್ಯಾದ್ಯಂತ ವಿತರಿಸುವ ಯೋಜನೆ ಹಮ್ಮಿಕೊಂಡಿದ್ದೆವು. 6 ಲಕ್ಷಕ್ಕೂ ಹೆಚ್ಚು ಕೂಪನ್​ಗಳು ಬಂದಿದ್ದವು. ವಿಜಯವಾಣಿಯ 10 ಬ್ಯೂರೋ ಕಚೇರಿಗಳಲ್ಲಿ ಬಹುಮಾನ ವಿತರಿಸಲಾಗುತ್ತಿದೆ. 9 ಕಾರು, 10 ಬೈಕ್, 10 ಫ್ರಿಜ್, 10 ವಾಷಿಂಗ್ ಮಷಿನ್, ಬಂಗಾರದ ನಾಣ್ಯಗಳನ್ನು ಲಕ್ಕಿಡಿಪ್​ನಲ್ಲಿ ವಿಜೇತರಿಗೆ ವಿತರಿಸಲಾಗುತ್ತಿದೆ ಎಂದರು. ವಿಜಯೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಭರ್ಜರಿ ಯಶಸ್ವಿಗೆ ಕಾರಣರಾದ ಮಳಿಗೆದಾರರು ಮತ್ತು ಗ್ರಾಹಕರನ್ನು ಆನಂದ ಸಂಕೇಶ್ವರ ಅಭಿನಂದಿಸಿದರು.

ಸಾರ್ವಜನಿಕರಿಗೆ ಪ್ರಯೋಜನವಾಗುವ ರೀತಿಯಲ್ಲಿ ಎಜುಕೇಷನ್ ಎಕ್ಸ್​ಪೋ, ಪ್ರಾಪರ್ಟಿ ಎಕ್ಸ್​ಪೋ ಸಹ ನಡೆಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪಾಸಾದವರಿಗೆ ಮುಂದಿನ ಕರಿಯರ್ ಬಗ್ಗೆ ಶಿಕ್ಷಣ ತಜ್ಞರಿಂದ ಮಾಹಿತಿ ಕೊಡಿಸುವ ಕಾರ್ಯಕ್ರಮ ನಡೆಸುತ್ತ ಬರಲಾಗಿದೆ. ಕಳೆದ ವರ್ಷ ಶ್ರೀರಾಮ ನವಮಿಯಂದು ದಿಗ್ವಿಜಯ 247 ಸುದ್ದಿವಾಹಿನಿ ಆರಂಭವಾಗಿದೆ. ದಕ್ಷಿಣ ಭಾರತದಲ್ಲಿಯೇ ಅತಿದೊಡ್ಡ 3ಡಿ ತಂತ್ರಜ್ಞಾನ ಆಧರಿತ ಸ್ಟುಡಿಯೋವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ ಎಂದು ವಿವರಿಸಿದರು. ಜಾಹೀರಾತು ವಿಭಾಗದ ಪ್ರಧಾನ ವ್ಯವಸ್ಥಾಪಕ ಶಿವಾಜಿ ಭಿಸೆ ಸ್ವಾಗತಿಸಿದರು. ಮುಖ್ಯ ವರದಿಗಾರ ಜಿ.ಟಿ. ಹೆಗಡೆ ನಿರೂಪಿಸಿದರು. ಜಾಹೀರಾತು ವ್ಯವಸ್ಥಾಪಕ ವಿನಾಯಕ ಗುರ್ಲ ಹೊಸೂರ ವಂದಿಸಿದರು.

‘ವಿಜಯವಾಣಿ’ಗೆ 64.82 ಲಕ್ಷ ಓದುಗರು

ಕನ್ನಡದ ನಂ.1 ಪತ್ರಿಕೆಯಾಗಿ ಹೊರಹೊಮ್ಮಿರುವ ‘ವಿಜಯವಾಣಿ’ ಆರು ವರ್ಷದೊಳಗೆ 64.82 ಲಕ್ಷ ಓದುಗರನ್ನು ಹೊಂದಿದೆ. ಅದರಲ್ಲೂ ಮಕ್ಕಳು ಮತ್ತು ಯುವಜನರು ಹೆಚ್ಚು ಓದುವ ಪತ್ರಿಕೆಯಾಗಿದೆ ಎನ್ನುವುದು ಇಂಡಿಯನ್ ರೀಡರ್​ಶಿಪ್ ಸರ್ವೆಯಲ್ಲಿ ವ್ಯಕ್ತವಾಗಿದೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ತಿಳಿಸಿದರು.

ಬಹುಮಾನ ವಿಜೇತರು

# ವೀರೇಂದ್ರ ಡ್ರೆಸ್ ಲ್ಯಾಂಡ್ ಗ್ರಾಹಕ ವೆಂಕಟೇಶ ಹೊಸಮನಿ (ಕೂಪನ್ ಸಂಖ್ಯೆ 145846) ಅವರಿಗೆ ಕಾರು.

# ಬಿಗ್ ಮಿಶ್ರಾ ಪೇಢಾ ಗ್ರಾಹಕ ಶಂಕರಗೌಡ ಪಾಟೀಲ (132365) ಅವರಿಗೆ ಬೈಕ್.

# ಗಂಗಾವತಿ ಸಿಲ್ಕ್ ಪ್ಯಾಲೇಸ್ ಗ್ರಾಹಕ ಬಿ.ಜಿ. ಸಜ್ಜನ (305520) ಅವರಿಗೆ ಎಲ್​ಇಡಿ ಟಿವಿ.

# ಮಹಾದೇವಿ ಸಿಲ್ಕ್ ಆಂಡ್ ಸಾರೀಸ್​ನಲ್ಲಿ ಬಟ್ಟೆ ಖರೀದಿಸಿದ ಸುಜಾತಾ (665137) ಅವರಿಗೆ ರೆಫ್ರಿಜರೇಟರ್.

# ಪಿಎಸ್​ಆರ್ ಸಿಲ್ಕ್ಸ್ ಆಂಡ್ ಸಾರೀಸ್ ಗ್ರಾಹಕ ರಿಷಬ್ ಕಮದೋಡ್ (458854) ಅವರಿಗೆ ವಾಷಿಂಗ್ ಮಷಿನ್.

# ವೀರೇಂದ್ರ ಡ್ರೆಸ್​ಲ್ಯಾಂಡ್ ಗ್ರಾಹಕ ಸಂಜಯ ಭಂಡಾರಕರ (552233) ಅವರಿಗೆ ಸೇಫ್ ಲಾಕರ್.

# ಮರಧರ ಎಲೆಕ್ಟ್ರಾನಿಕ್ಸ್ ಗ್ರಾಹಕ ಎ.ಎಚ್. ಗಡದ (110373) ಅವರಿಗೆ ಬೈಸಿಕಲ್.

# ಆದರ್ಶ ಸೆಲೆಕ್ಷನ್ಸ್​ನಲ್ಲಿ ಖರೀದಿಸಿದ ಯಾಸ್ಮಿನ್ (454422) ಅವರಿಗೆ ಡೈನಿಂಗ್ ಟೇಬಲ್.

ಅಂಗಡಿಯವರಿಗೆ ಬಂಗಾರ

ಹುಬ್ಬಳ್ಳಿಯ ಮಾಡರ್ನ್ ಏಜೆನ್ಸೀಸ್ ಹಾಗೂ ಧಾರವಾಡದ ರಾಶಿ ಫಾಮರ್್​ಗೆ ಜಾಹೀರಾತುದಾರರ ವಿಭಾಗದಲ್ಲಿ ತಲಾ 5 ಗ್ರಾಂ. ಬಂಗಾರ ಲಭಿಸಿದೆ.

ನಮ್ಮ ತಂದೆ ನನ್ನ ಮದುವೆಗಾಗಿ ಹುಬ್ಬಳ್ಳಿಯ ಗಂಗಾವತಿ ಸಿಲ್ಕ್​ನಲ್ಲಿ ಜವಳಿ ಖರೀದಿಸಿದ್ದರು. ಅಂಗಡಿಯವರು ವಿಜಯವಾಣಿಯ 3 ಕೂಪನ್ ನೀಡಿದ್ದರು. ಅದರಲ್ಲಿ ನಮಗೆ ಎಲ್​ಇಡಿ ಟಿವಿ ಬಹುಮಾನ ಬಂದಿದೆ. ನಿಜಕ್ಕೂ ಇದು ನಮ್ಮ ಮದುವೆಗೆ ವಿಜಯವಾಣಿ ಕೊಟ್ಟ ಉಡುಗೊರೆ.

| ಡಾ. ದಯಾನಂದ ಸಜ್ಜನ್ ಬಾಗಲಕೋಟೆ, ಎಲ್​ಇಡಿ ಟಿವಿ ವಿಜೇತರು

ವಿಆರ್​ಎಲ್ ಎಂದರೆ ನಮಗೆ ಮೊದಲಿನಿಂದಲೂ ಅಭಿಮಾನ. ವಿಜಯವಾಣಿ, ದಿಗ್ವಿಜಯ ನಮ್ಮ ಹೆಮ್ಮೆಯ ಮಾಧ್ಯಮಗಳು. ಅಭಿಮಾನದ ವಿಆರ್​ಎಲ್ ಸಮೂಹದಿಂದ ಬಹುಮಾನ ಪಡೆಯುತ್ತಿರುವುದು ಸಂತಸ ತಂದಿದೆ.

| ಅನ್ನಪೂರ್ಣ ಗಡಾದ ಗದಗ ಬೈಸಿಕಲ್ ವಿಜೇತರು

ದೀಪಾವಳಿ ವೇಳೆ ಹುಬ್ಬಳ್ಳಿಯ ಮಹಾದೇವಿ ಸಿಲ್ಕ್ ಮಳಿಗೆಯಲ್ಲಿ ಮಗಳಿಗೆ ಡ್ರೆಸ್ ಖರೀದಿಸಿದ್ದೆ. ಅಂಗಡಿಯವರು ವಿಜಯವಾಣಿ ಕೂಪನ್ ಕೊಟ್ಟರು. ಬಹುಮಾನ ಬರುತ್ತದೆ ಎಂದುಕೊಂಡಿರಲಿಲ್ಲ. ಸುಮ್ಮನೆ ಮಗಳ ಕೈಯಿಂದ ಬಾಕ್ಸ್​ನಲ್ಲಿ ಕೂಪನ್ ಹಾಕಿಸಿದ್ದೆ. ಲಕ್ಕಿಡಿಪ್​ನಲ್ಲಿ ರೆಫ್ರಿಜರೇಟರ್ ಬಹುಮಾನ ಬಂದಿದೆ ಎಂದು ವಿಜಯವಾಣಿ ಸಿಬ್ಬಂದಿ ಕರೆ ಮಾಡಿದಾಗ ಆಶ್ಚರ್ಯವಾಯಿತು. ತುಂಬಾ ಖುಷಿಯಾಗಿದೆ.

| ಸುಜಾತಾ ಶಿವಪ್ರಸಾದ ಹುಕ್ಕೇರಿ

ರೆಫ್ರಿಜರೇಟರ್ ವಿಜೇತರು

ಸ್ವೀಟ್ ಖರೀದಿಯಿಂದಾಗಿ ಬೈಕ್ ಬಹುಮಾನ ಬಂದಿರುವುದು ಸಂತಸ ಮೂಡಿಸಿದೆ. ಮೊದಲಿನಿಂದಲೂ ವಿಜಯವಾಣಿ ಓದುಗರಾಗಿರುವ ನಮಗೆ ಈ ಬಹುಮಾನದಿಂದ ಇನ್ನಷ್ಟು ಖುಷಿಯಾಗಿದೆ.

Leave a Reply

Your email address will not be published. Required fields are marked *

Back To Top