Monday, 23rd July 2018  

Vijayavani

ಬಿಜೆಪಿ ಸಂಪರ್ಕ್ ಸಮರ್ಥನ್ ಅಭಿಯಾನ - ಕಿಚ್ಚ ಸುದೀಪ್ ಭೇಟಿಯಾದ ಶ್ರೀರಾಮುಲು- ಮೋದಿ ಸಾಧನೆ ಪುಸ್ತಕ  ವಿತರಣೆ        ದೆಹಲಿಯಲ್ಲಿ ರಾಹುಲ್-ಸಿದ್ದು ಭೇಟಿ - ದೋಸ್ತಿ ನಡೆಗೆ ಅಸಮಾಧಾನ ಹೊರಹಾಕಿದ್ರಾ ಸಿದ್ದು - ಕುತೂಹಲ ಕೆರಳಿಸಿದ ಕೈ ದಿಗ್ಗಜರ ಭೇಟಿ        ಮತ್ತೆ ವಾಸ್ತು ಮೊರೆ ಮೋದ ರೇವಣ್ಣ - ಸರ್ಕಾರಿ ಬಂಗಲೆ ನವೀಕರಣಕ್ಕೆ 2 ಕೋಟಿ ಖರ್ಚು - ಇದೇನಾ ದುಂದುವೆಚ್ಚಕ್ಕೆ ಕಡಿವಾಣ ?        ದರ್ಶನ್ ಮ್ಯಾನೇಜರ್​​ ಮಲ್ಲಿಕಾರ್ಜುನ್​ನಿಂದ ಮತ್ತೊಂದು ದೋಖಾ - ನಟ ಅರ್ಜುನ್ ಸರ್ಜಾಗೂ ಮಹಾ ಮೋಸ        ಶೀರೂರು ಶ್ರೀ ಸಾವಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಸ್ವಾಮೀಜಿ ಕೊನೆದಿನದ ಡಿವಿಆರ್ ನಾಪತ್ತೆ - ಪೊಲೀಸರಿಂದ ತೀವ್ರ ಶೋಧ       
Breaking News

ಕ್ಯಾಂಪಸ್​ ಸೆಲ್ಫಿ ಇದು ನಿಮ್ಮ ಕಾಲಂ

Tuesday, 10.07.2018, 3:03 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳುಹಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ನಂದನವನದತ್ತ…

ಕಷ್ಟಪಟ್ಟು ಪದವಿವರೆಗೆ ವಿದ್ಯಾಭ್ಯಾಸ ಮಾಡಿದ ಬಳಿಕ, ಇಷ್ಟದ ಉದ್ಯೋಗ ಸಿಕ್ಕರೆ ಭವಿಷ್ಯ ನಂದನವನವೇ ಸರಿ! ‘ನಮ್ಮ ಜೀವನವೂ ಹಾಗೇ ಇರುತ್ತೆ’ ಎನ್ನುವ ಆತ್ಮವಿಶ್ವಾಸದಲ್ಲಿ ಗೌನ್​ಸಹಿತ ಪೋಸ್ ಕೊಟ್ಟಿದ್ದಾರೆ ರಾಜರಾಜೇಶ್ವರಿನಗರದ ಗ್ಲೋಬಲ್ ಅಕಾಡೆಮಿ ಸಹಪಾಠಿಗಳು. ಪ್ರವೀಣ್ ರವಾನಿಸಿದ ಚಿತ್ರವಿದು.

ಎಚ್​ಎನ್ ಸ್ಪೂರ್ತಿ

ಬಸವನಗುಡಿ ನ್ಯಾಷನಲ್ ಕಾಲೇಜಿನ ಹಾಸ್ಟೆಲ್​ನಲ್ಲಿರುವ ಡಾ.ಎಚ್. ನರಸಿಂಹಯ್ಯ ಅವರಿದ್ದ ಕೋಣೆಯಲ್ಲೊಮ್ಮೆ ಹೋಗಿ, ಅವರು ಉಪಯೋಗಿಸುತ್ತಿದ್ದ ವಸ್ತುಗಳನ್ನು ರ್ಸ³ಸಿದರೆ ಮೈಮನದಲ್ಲಿ ಪುಳಕ ಉಂಟಾಗಿ, ಬದುಕು ಮತ್ತು ಸಾಧನೆ ಹೇಗಿರಬೇಕೆಂಬುದರ ಮರ್ಮ ಅರ್ಥವಾಗಿಬಿಡುತ್ತದೆ. ಹಾಗೆ ಅರ್ಥ ಮಾಡಿಕೊಂಡಾಗಿನ ಮುಖಭಾವದೊಂದಿಗೆ ಗ್ರೂಪ್ ಸೆಲ್ಪಿ ತೆಗೆದಿದ್ದಾರೆ ನ್ಯಾಷನಲ್ ಕಾಲೇಜಿನ ಬಿಎಸ್​ಸಿ ವಿದ್ಯಾರ್ಥಿಗಳು. ಚಿತ್ರ ಕಳುಹಿಸಿದವರು ಎಂ. ಕುಮಾರ್.

ಸ್ನೇಹದ ಮಾಂತ್ರಿಕ ಸ್ಪರ್ಶ

ಕೋರ್ಸ್​ಗೆ ಸೇರಿದ ಆರಂಭದ ದಿನಗಳಲ್ಲಿ ಮನಸ್ಸು ಮತ್ತು ಮುಖಗಳೊಂದಿಗೆ ಹೊಂದಾಣಿಕೆಯೇ ಆಗುವುದಿಲ್ಲ. ಬರುಬರುತ್ತ ಗುಣ-ಸ್ವಭಾವಗಳ ಅರಿವಾಗುತ್ತಲೇ ಸ್ನೇಹದ ಮಾಂತ್ರಿಕ ಸ್ಪರ್ಶ ಎಲ್ಲವನ್ನೂ ‘ಮ್ಯಾಚಿಂಗ್’ ಮಾಡಿಬಿಡುತ್ತೆ. ಅಂಥ ಮ್ಯಾಚಿಂಗ್- ಪಂಚಿಂಗ್ ನಗೆಯೊಂದಿಗೆ ಒಂದಾಗಿದ್ದಾರೆ ಬೆಂಗಳೂರು ವಿವಿ ಜ್ಞಾನಭಾರತಿ ಆವರಣದ ದ್ವಿತೀಯ ವರ್ಷದ ಅರ್ಥಶಾಸ್ತ್ರ ವಿಭಾಗದ ಸಹಪಾಠಿಗಳು. ಚಿತ್ರ ಕಳುಹಿಸಿದ್ದು ಯಾರಬ್ ಬಾಬಾ.

Leave a Reply

Your email address will not be published. Required fields are marked *

Back To Top