Monday, 23rd July 2018  

Vijayavani

ಬಿಜೆಪಿ ಸಂಪರ್ಕ್ ಸಮರ್ಥನ್ ಅಭಿಯಾನ - ಕಿಚ್ಚ ಸುದೀಪ್ ಭೇಟಿಯಾದ ಶ್ರೀರಾಮುಲು- ಮೋದಿ ಸಾಧನೆ ಪುಸ್ತಕ  ವಿತರಣೆ        ದೆಹಲಿಯಲ್ಲಿ ರಾಹುಲ್-ಸಿದ್ದು ಭೇಟಿ - ದೋಸ್ತಿ ನಡೆಗೆ ಅಸಮಾಧಾನ ಹೊರಹಾಕಿದ್ರಾ ಸಿದ್ದು - ಕುತೂಹಲ ಕೆರಳಿಸಿದ ಕೈ ದಿಗ್ಗಜರ ಭೇಟಿ        ಮತ್ತೆ ವಾಸ್ತು ಮೊರೆ ಮೋದ ರೇವಣ್ಣ - ಸರ್ಕಾರಿ ಬಂಗಲೆ ನವೀಕರಣಕ್ಕೆ 2 ಕೋಟಿ ಖರ್ಚು - ಇದೇನಾ ದುಂದುವೆಚ್ಚಕ್ಕೆ ಕಡಿವಾಣ ?        ದರ್ಶನ್ ಮ್ಯಾನೇಜರ್​​ ಮಲ್ಲಿಕಾರ್ಜುನ್​ನಿಂದ ಮತ್ತೊಂದು ದೋಖಾ - ನಟ ಅರ್ಜುನ್ ಸರ್ಜಾಗೂ ಮಹಾ ಮೋಸ        ಶೀರೂರು ಶ್ರೀ ಸಾವಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಸ್ವಾಮೀಜಿ ಕೊನೆದಿನದ ಡಿವಿಆರ್ ನಾಪತ್ತೆ - ಪೊಲೀಸರಿಂದ ತೀವ್ರ ಶೋಧ       
Breaking News

ಕ್ಯಾಂಪಸ್​ ಸೆಲ್ಫಿ ಇದು ನಿಮ್ಮ ಕಾಲಂ

Thursday, 12.07.2018, 3:03 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳುಹಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ನಗೆಕಂಪು

‘ನಗುವ ನಗಿಸುವ ನಗಿಸಿ ನಗುತ ಬಾಳುವ.. ವರವ ಮಿಗೆ ಬೇಡಿಕೊಳೋ ಮಂಕುತಿಮ್ಮ’ ಎಂಬ ಡಿವಿಜಿ ಕಾವ್ಯೋಕ್ತಿಯಂತೆ ನಗುತ್ತ, ಕೆಲವರು ಆ ನಗೆಯಲ್ಲೂ ಗುಳಿಕೆನ್ನೆ ಪ್ರದರ್ಶಿಸುತ್ತ ಥ್ರಿಲ್ ಅನುಭವಿಸಿದ್ದಾರೆ ಕೆ.ಆರ್. ವೃತ್ತದ ಸರ್ಕಾರಿ ಕಲಾ ಕಾಲೇಜಿನ ದ್ವಿತೀಯ ಬಿಎ ತರಗತಿಯ ವಿದ್ಯಾರ್ಥಿಗಳು. ಚಿತ್ರ ರವಾನಿಸಿದವರು ಹೇಮಂತ್.

ಮರದಂಥ ಸ್ನೇಹ!

‘ಅದೋ.. ಹಿನ್ನೆಲೆಯಲ್ಲಿ ದೊಡ್ಡ ಮರ ಕಾಣಿಸುತ್ತದಲ್ಲ, ಅದರ ರೆಂಬೆ-ಕೊಂಬೆಗಳಂತೆ ನಮ್ಮ ಸ್ನೇಹದ ಕೊಂಡಿ ಗಟ್ಟಿಯಾಗಿ ಬೆಸೆದಿದೆ’ ಎಂಬ ಸಂದೇಶದೊಂದಿಗೆ ವೈಡ್ ಆಂಗಲ್​ನಲ್ಲಿ ಮಸ್ತ್ ಚಿತ್ರಕ್ಕೆ ಲುಕ್ ಕೊಟ್ಟಿದ್ದಾರೆ ಸದಾಶಿವನಗರದ ಎಚ್​ಕೆಇ ಸೊಸೈಟಿಯ ವೀರೇಂದ್ರ ಪಾಟೀಲ್ ಪದವಿ ಕಾಲೇಜಿನ ತೃತೀಯ ಬಿಕಾಂ ಸಹಪಾಠಿಗಳು. ಚಿತ್ರ ತೆಗೆದವರು ಹರೀಶ್.

 


ಕ್ಷಮಾಮಣಿಗಳು!

‘ನಾಳೆ ಸಾಂಪ್ರದಾಯಿಕ ವೇಷದಲ್ಲಿ ಬರೋಣ’ ಅಂತ ಮಾತು ಕೊಟ್ಟು, ಅದನ್ನು ಪಾಲಿಸುವ ನಿಷ್ಠೆ ತೋರದಿದ್ದರೂ ಅಂಥವರನ್ನು ಮನ್ನಿಸುವ ಧಾಟಿಯಲ್ಲಿ ಒಂದಾಗಿ ಪೋಸ್ ಕೊಟ್ಟಿದ್ದಾರೆ ಸೀರೆಯುಟ್ಟ ನೀರೆಯರು. ಚಿತ್ರ ಕಳುಹಿಸಿದವರು ಬಸವನಗುಡಿಯ ನ್ಯಾಷನಲ್ ಕಾಲೇಜಿನ ಬಿಸಿಎ 6ನೇ ಸೆಮ್ ಕೆ.ಎಸ್. ಶಿವಕುಮಾರ್.

 

Leave a Reply

Your email address will not be published. Required fields are marked *

Back To Top