Sunday, 23rd September 2018  

Vijayavani

ಯಾರಿಂದಲೂ ದಬ್ಬಿಸಿಕೊಂಡು ಹೋಗಲ್ಲ - ಕೆಲಸ ಮಾಡದಿದ್ರೆ ಗೌರಯುತ ನಿರ್ಗಮನ - ಎಚ್‌ಡಿಕೆಯಿಂದ ರಾಜಕೀಯ ನಿವೃತ್ತಿ ಮಾತು        ಅಕ್ಟೋಬರ್‌ 10 ರೊಳಗೆ ಸಂಪುಟ ವಿಸ್ತರಣೆ - ಅತೃಪ್ತಿ ಶಮನಕ್ಕೆ ಶೀಘ್ರ ಕ್ರಮ - ಬ್ಲ್ಯಾಕ್‌ಮೇಲರ್‌ಗಳಿಗೆ ವೇಣುಗೋಪಾಲ್‌ ವಾರ್ನಿಂಗ್‌        ದುನಿಯಾ ವಿಜಿ ದಾದಾಗಿರಿ - ವಿಕ್ರಂ ಆಸ್ಪತ್ರೆಗೆ ಸಿಸಿಬಿ ಪೊಲೀಸರ ಭೇಟಿ - ಮಾರುತಿ ಬಳಿ ಹೇಳಿಕೆ ಪಡೆಯದೆ ಪೊಲೀಸರು ವಾಪಸ್‌        ಜಿಮ್ ಟ್ರೈನರ್ ಮೇಲೆ ಹಲ್ಲೆ, ಕಿಡ್ನಾಪ್ ಕೇಸ್ - ಫಿಲಂ ಚೇಂಬರ್​ನಿಂದ ನಾಳೆ ಮೀಟಿಂಗ್ - ದುನಿಯಾ ವಿಜಿ ವಿರುದ್ಧ ಕ್ರಮ ಸಾಧ್ಯತೆ        ಆಯುಷ್ಮಾನ್ ಭಾರತ್ ಯೋಜನೆ ಜಾರಿ - 50 ಕೋಟಿ ಜನರಿಗೆ ಲಾಭ, 5 ಲಕ್ಷವರೆಗೆ ವಿಮೆ - ರಾಂಚಿಯಲ್ಲಿ ಪ್ರಧಾನಿಯಿಂದ ಚಾಲನೆ        ಆಂಧ್ರದಲ್ಲಿ ಹಾಡಹಗಲೇ ನಕ್ಸಲರ ಅಟ್ಟಹಾಸ - ಶಾಸಕ, ಮಾಜಿ ಶಾಸಕನ ಭೀಕರ ಹತ್ಯೆ - 50ಕ್ಕೂ ಹೆಚ್ಚು ನಕ್ಸಲರಿಂದ ರಕ್ತದೋಕುಳಿ       
Breaking News

ಬುರಾರಿ ಪ್ರಕರಣ: ಪೂಜೆ ಪುನಸ್ಕಾರಕ್ಕೆ ಮೊರೆ ಹೋದ ಸ್ಥಳೀಯರು, ಆಸ್ತಿ ಮೌಲ್ಯ ಕುಸಿತ

Thursday, 12.07.2018, 7:47 PM       No Comments

ನವದೆಹಲಿ: ಬುರಾರಿಯ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಸಂಬಂಧ ಸುಳ್ಳು ಸುದ್ದಿಗಳು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸಂತ ನಗರದಲ್ಲಿ ಪ್ರಾಪರ್ಟಿ ಡೀಲರ್ಸ್‌ಗೆ ಸಂಕಷ್ಟ ಎದುರಾಗಿದ್ದು, ಆಸ್ತಿ ಖರೀದಿಗೆ ಯಾರೂ ಮುಂದೆ ಬರುತ್ತಿಲ್ಲ ಎನ್ನಲಾಗಿದೆ.

ಆಸ್ತಿ ವಿತರಕರ ಪ್ರಕಾರ, ಪ್ಲ್ಯಾಟ್‌ ಮತ್ತು ನಿವೇಶನಗಳ ಖರೀದಿಗೆ ಖರೀದಿದಾರರು ಹಿಂದೇಟು ಹಾಕುತ್ತಿದ್ದು, ಬೆಲೆಯೂ ಇಳಿಕೆಯಾಗುತ್ತಿದೆ. ಸ್ಥಳೀಯ ಸುದ್ದಿ ಚಾನಲ್‌ಗಳಲ್ಲಿ ವದಂತಿಗಳು ಮತ್ತು ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ.
ಈ ಸಂಬಂಧ ಆಸ್ತಿ ವ್ಯಾಪಾರಿ ಪವನ್‌ ಕುಮಾರ್‌ ತ್ಯಾಗಿ, ಬುರಾರಿ ಪ್ರದೇಶದಲ್ಲಿರುವ ಪ್ಲ್ಯಾಟ್‌ಗಳಲ್ಲಿ ಪೂಜೆಯನ್ನು ಏರ್ಪಡಿಸಲು ತೀರ್ಮಾನಿಸಿದ್ದಾರೆ.

ನನ್ನ ಮಗಳು ಭೀತಿಯಲ್ಲಿ

ಜುಲೈ 1ರಂದು ಒಂದೇ ಕುಟುಂಬದಲ್ಲಿ 11 ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯ ಹಿಂಬದಿಯಲ್ಲಿಯೇ ಅಪಾರ್ಟ್‌ಮೆಂಟ್‌ ಇದ್ದು ಆಘಾತಕ್ಕೊಳಗಾಗಿದ್ದೇನೆ. ನಾನು ಮೂಢನಂಬಿಕೆಯನ್ನು ಒಪ್ಪುವುದಿಲ್ಲ. ಆದರೆ ಮನೆಯನ್ನು ಶುದ್ಧೀಕರಿಸುವುದು ಅಗತ್ಯ. ಕಾಲೇಜಿಗೆ ಹೋಗುತ್ತಿರುವ ನನ್ನ ಮಗಳು ಕೂಡ ಭಯಗೊಂಡಿದ್ದು, ಪೂಜೆಯಿಂದಾಗಿ ಅವಳಲ್ಲಿ ಧೈರ್ಯ ಮೂಡುತ್ತದೆ ಎಂದು ತಿಳಿಸಿದ್ದಾರೆ.

ಘಟನೆಯ ನಂತರ ದೆವ್ವ ಮತ್ತು ಅಲೌಕಿಕ ಶಕ್ತಿಗಳು ಇಲ್ಲಿವೆ ಎಂದು ಬಿಂಬಿಸಲಾಗುತ್ತಿರುವುದರಿಂದ ಭಾಟಿಯಾ ಕುಟುಂಬದ ಮನೆಯಿಂದ ಸುತ್ತಲಿನ ನಿವೇಶನ ಮತ್ತು ಕಟ್ಟಡಗಳ ಮೇಲೆ ಪರಿಣಾಮ ಬೀರಿದೆ. ಇತರೆ ಪ್ರದೇಶಗಳಲ್ಲಿಯೂ ಪರಿಣಾಮ ಬೀರದಿರಲಿ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

ನಾರಾಯಣಿ ದೇವಿ ಮರಣೋತ್ತರ ಪರೀಕ್ಷೆ ವರದಿ

ಭಾಟಿಯಾ ಕುಟುಂಬದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ 11 ಜನರಲ್ಲಿ ಹಿರಿಯರಾಗಿದ್ದ ನಾರಾಯಣ ದೇವಿ ಅವರ ಮರಣೋತ್ತರ ಪರೀಕ್ಷೆಯ ವರದಿಯನ್ನು ದೆಹಲಿ ಪೊಲೀಸರು ಸ್ವೀಕರಿಸಿದ್ದು, ವರದಿಯಲ್ಲಿ ನಾರಾಯಣಿ ದೇವಿ ಅವರದ್ದು ಕೊಲೆ ಆಗಿರುವ ಕುರಿತು ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ. ಅವರು ಕೂಡ ನೇಣು ಬಿಗಿದುಕೊಂಡೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಪೋಲಿಸರು ಈಗಾಗಲೇ ಇತರ 10 ಜನರ ಮರಣೋತ್ತರ ಪರೀಕ್ಷೆ ವರದಿಗಳನ್ನು ಸ್ವೀಕರಿಸಿದ್ದು, ಎಲ್ಲ 11 ಜನರ ಒಳಾಂಗಗಳ ಸಂರಕ್ಷಿಸಿ ವಿಷ ಸೇವಿಸಿರುವ ಕುರಿತು ಪರೀಕ್ಷಿಸಲು ನಿರ್ಧರಿಸಿದ್ದಾರೆ. ಮುಂದಿನ ಕೆಲವು ವಾರಗಳಲ್ಲಿ ವರದಿ ಬಂದ ನಂತರ ಸಾವಿಗೆ ಅಂತಿಮ ಕಾರಣ ತಿಳಿಯಬಹುದು ಎನ್ನಲಾಗಿದೆ.

Leave a Reply

Your email address will not be published. Required fields are marked *

Back To Top