Sunday, 21st October 2018  

Vijayavani

ಚಡಚಣ ಸೋದರರ ಹತ್ಯೆ ಪ್ರಕರಣ-ಸಿಪಿಐ ಅಸೋದೆ 10 ದಿನ ಕಸ್ಟಡಿಗೆ-ಸಂಬಂಧಿಕರ ಮೇಲೂ ದೂರು ದಾಖಲು        ಸಿಸಿಬಿಯಿಂದ ಮುತ್ತಪ್ಪ ರೈಗೆ 8 ಗಂಟೆ ಡ್ರಿಲ್​-ಸೂಕ್ತ ದಾಖಲೆಗಳಿಂದ ಮಾಜಿ ಡಾನ್​​ ಬಚಾವ್​-ಇಂದು ಪೊಲೀಸರಿಂದ ಗನ್​​ಮ್ಯಾನ್​​ಗಳ ವಿಚಾರಣೆ        ಆ್ಯಕ್ಷನ್​​​ಕಿಂಗ್​​​ ವಿರುದ್ಧ ಶೃತಿ ಹರಿಹರನ್​ ಮೀಟು ಏಟು-ನಟಿ ವಿರುದ್ಧ ಸರ್ಜಾ ಫ್ಯಾಮಿಲಿ ಟಾಕ್​​ಫೈಟ್​​-ಆರೋಪಕ್ಕೆ ಸ್ಪಷ್ಟನೆ ನೀಡಲು ಇಂದು ಪ್ರೆಸ್​​ಮೀಟ್​​​        ಸಂಸದರ ನಿಧಿ ಹೊಡೆಯಲು ಮೆಗಾ ಪ್ಲಾನ್​-ನಕಲಿ ಲೆಟರ್​​​​​ಹೆಡ್​​​ ಮೂಲಕ ಲಕ್ಷ ಲಕ್ಷ ಗುಳುಂ-26 ಲಕ್ಷ ನುಂಗಿದ ಭೂಪ ಪೊಲೀಸರ ವಶಕ್ಕೆ        ರಂಗೇರಿತು ಉಪಚುನಾವಣೆ ಅಖಾಡ-ಇಂದು ಪಂಚ ಕ್ಷೇತ್ರಗಳಲ್ಲೂ ನಾಯಕರ ಪ್ರಚಾರ-ದೋಸ್ತಿಗೆ ಹುರುಪು ತಂದ ಗುರು-ಶಿಷ್ಯರ ಮಿಲನ        ಮಡಿಕೇರಿ ಸಂತ್ರಸ್ತರಿಗೆ ಮಾದರಿ ಮನೆಗಳ ನಿರ್ಮಾಣ-5 ರಿಂದ 10 ಲಕ್ಷದೊಳಗೆ ಮೂರು ರೀತಿಯ ಮನೆ-ಜನರು ಕೇಳಿದ ಮನೆ ಎರಡು ತಿಂಗಳೊಳಗೆ ರೆಡಿ       
Breaking News

ಜೈ ಜಪಾನ್ – ಜೈ ಭಾರತ್​ ಎಂದರು ಜಪಾನ್​ ಪ್ರಧಾನಿ ಅಬೆ

Thursday, 14.09.2017, 11:22 AM       No Comments

ನವದೆಹಲಿ: ಎರಡು ದಿನಗಳ ಕಾಲ ಭಾರತ ಪ್ರವಾಸದಲ್ಲಿರುವ ಜಪಾನ್​ ಪ್ರಧಾನಿ ಶಿಂಜೋ ಅಬೆ ಉಭಯ ರಾಷ್ರಗಳ ಅಭಿವೃದ್ಧಿಯ ಮೊದಲನೇ ಮೆಟ್ಟಿಲಾಗಿ ಇಂದು ಐತಿಹಾಸಿಕ ಬುಲೆಟ್ ಟ್ರೈನ್​ಗೆ ಶಂಕುಸ್ಥಾಪನೆ ನೆರವೇರಿಸಿದರು. ​

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೇರಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಬುಲೆಟ್​ ಟ್ರೈನ್​​ಗೆ ಶಿಲಾನ್ಯಾಸ ನೆರವೇರಿಸಿದರು. ನಂತರ ಉಭಯ ರಾಷ್ಟ್ರಗಳ ಅಭಿವೃದ್ಧಿಯನ್ನು ಉದ್ದೇಶಿಸಿ ಜಪಾನ್​ ಪ್ರಧಾನಿ ಶಿಂಜೋ ಅಬೆ ಮಾತನಾಡಿದರು.

ಶಿಂಜೋ ಅಬೆ ಭಾಷಣದ ಪ್ರಮುಖಾಂಶಗಳು:
# ನಮಸ್ಕಾರ ಎಂದು ಹಿಂದಿಯಲ್ಲಿ ಭಾಷಣ ಆರಂಭಿಸಿದ ಜಪಾನ್​ ಪ್ರಧಾನಿ ಶಿಂಜೋ ಅಬೆ
# ಈ ಯೋಜನೆ ಉಭಯ ರಾಷ್ಟ್ರಗಳ ಬಾಂಧವ್ಯ ಸೂಚಿಸಲಿದೆ. ನಮ್ಮ ಬಾಂಧವ್ಯಕ್ಕೆ ಹೊಸ ಅಧ್ಯಾಯವಾಗಲಿದೆ. ಜಪಾನ್‌ನಿಂದ 100 ಇಂಜಿನಿಯರ್‌ಗಳು ಬುಲೆಟ್ ಟ್ರೈನ್ ಕಾಮಗಾರಿಗಾಗಿ ಭಾರತಕ್ಕೆ ಬಂದಿದ್ದಾರೆ ಎಂದರು.
# ಪ್ರಧಾನಿ ಮೋದಿ ದೂರದೃಷ್ಟಿಯುಳ್ಳ ನಾಯಕರಾಗಿದ್ದಾರೆ. ಮೇಕ್ ಇನ್ ಇಂಡಿಯಾಗೆ ನಾವು ಕೈ ಜೋಡಿಸುತ್ತೇವೆ. ಇಂದು ಭಾರತ-ಜಪಾನ್‌ಗೆ ಐತಿಹಾಸಿಕ ದಿನ ಎಂದು ಭರವಸೆ ನೀಡಿದರು.
# ಮೋದಿ ಜಾಗತಿಕ, ದೂರದೃಷ್ಟಿಯುಳ್ಳ ನಾಯಕ. ಮೋದಿ ನವಭಾರತ ನಿರ್ಮಾಣದಲ್ಲಿ ತೊಡಗಿದ್ದಾರೆ ಎಂದು ಮೋದಿಯನ್ನು ಕೊಂಡಾಡಿದರು.
# ಭಯೋತ್ಪಾದನೆ ನಿಗ್ರಹಕ್ಕೆ ಭಾರತದ ಜತೆ ಜಪಾನ್ ಕೈ ಜೋಡಿಸಲಿದೆ. ಉಭಯ ರಾಷ್ಟ್ರಗಳ ಅಭಿವೃದ್ಧಿಗೆ ಪರಸ್ಪರ ಸಹಕಾರ ಸಿಗಲಿದೆ ಎಂದ ಅವರು, ಭವಿಷ್ಯದಲ್ಲಿ ಭಾರತದಾದ್ಯಂತ ಬುಲೆಟ್ ಟ್ರೈನ್ ಸಂಚಾರ ಮಾಡಲಿದೆ ಎಂದು ಹೇಳು ಮೂಲಕ ಭಾರತದ ಮುಂದಿನ ಚಿತ್ರಣವನ್ನು ವಿವರಿಸಿದರು.
# ವಿವಾದಗಳನ್ನ ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ರಾಷ್ಟ್ರಗಳು ಭಾರತ-ಜಪಾನ್. ಏಷ್ಯಾದಲ್ಲೇ ಬಲಪ್ರಯೋಗದ ಮೂಲಕ ಅಲ್ಲದೇ ಶಾಂತಿ ಮಾರ್ಗ ಹಿಡಿದ ರಾಷ್ಟ್ರಗಳು ಎಂದು ಹೇಳುವ ಮೂಲಕ ಚೀನಾಗೆ ಪರೋಕ್ಷ ಟಾಂಗ್‌ ನೀಡಿದ ಜಪಾನ್ ಪ್ರಧಾನಿ ಶಿಂಜೋ ಅಬೆ
# ಭಾಷಣದ ಕೊನೆಯಲ್ಲಿ ಜೈ ಜಪಾನ್ ಜೈ ಭಾರತ ಎಂದ ಜಪಾನ್​ ಪ್ರಧಾನಿ ಶಿಂಜೋ ಅಬೆ

ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು:
# ಬುಲೆಟ್ ಟ್ರೈನ್ ಯೋಜನೆ ಶ್ರೀಮಂತರ ಪರವಾಗಿಲ್ಲ. ದೇಶದ ಸಾಮಾನ್ಯ ನಾಗರಿಕನಿಗೂ ತಂತ್ರಜ್ಞಾನ ತಲುಪಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
# ಬುಲೆಟ್ ಟ್ರೈನ್​ನಿಂದ ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗಲಿದೆ. ಮೋದಿ
ನವಭಾರತ ಕನಸಿಗೂ ಪೂರಕವಾಗಲಿದೆ ಎಂದರು.
# ದೇಶದ ಅಭಿವೃದ್ಧಿಗೆ ಸಾರಿಗೆ ಪ್ರಮುಖ ಪಾತ್ರವಹಿಸಲಿದೆ. ಜಲ, ವಾಯು, ಭೂಸಾರಿಗೆ ಬಹಳ ಮುಖ್ಯವಾಗಿವೆ ಎಂದು ತಿಳಿಸಿದರು.
# 1964ರಲ್ಲಿ ಜಪಾನ್‌ನಲ್ಲಿ ಬುಲೆಟ್ ಟ್ರೈನ್ ಸಂಚಾರ ಆರಂಭಿಸಿತ್ತು. ಜಗತ್ತಿನಲ್ಲೇ ಜಪಾನ್ ಬದಲಾವಣೆಗೆ ನಾಂದಿ ಹಾಡಿತು. 25 ವರ್ಷಗಳಿಂದ ತಂತ್ರಜ್ಞಾನ ಬದಲಾಗಿದೆ. ವೇಗ ಆರ್ಥಿಕ ಪ್ರಗತಿಗೆ ಅನುಕೂಲವಾಗಲಿದೆ.
# ಬುಲೆಟ್ ಟ್ರೈನ್ ಉದ್ಯೋಗ, ಅಭಿವೃದ್ಧಿಗೆ ಸಹಕಾರಿ, ದೇಶದ ಅಭಿವೃದ್ಧಿಗೆ ಬುಲೆಟ್ ಟ್ರೈನ್ ಮಹತ್ವದ ಪಾತ್ರವಹಿಸಲಿದೆ.
# ನಾವು ಬೈಕ್ ಖರೀದಿಸಲೂ 10 ಬ್ಯಾಂಕ್‌ಗಳಿಗೆ ಅಲೆಯುತ್ತೇವೆ. ಒಂದೊಂದು ಬ್ಯಾಂಕ್‌ನಲ್ಲಿ ಒಂದೊಂದು ಬಡ್ಡಿ ದರ. ಆದರೆ ಅತಿ ಕಡಿಮೆ ಬಡ್ಡಿದರದಲ್ಲಿ ಜಪಾನ್ ಸಾಲ ನೀಡ್ತಿದೆ. ಜಪಾನ್ 50 ವರ್ಷಗಳವರೆಗೆ ಬಡ್ಡಿಯಿಲ್ಲದೆ ಸಾಲ ನೀಡುತ್ತಿದೆ. ಬುಲೆಟ್ ಟ್ರೈನ್‌ ಯೋಜನೆಗೆ ಸಾಲ ನೀಡುತ್ತಿದೆ. ಕೇವಲ 0.1 ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ ಎಂದು ಶ್ಲಾಘಿಸಿದರು.
# 2-3 ಗಂಟೆಗಳಲ್ಲಿ ಮುಂಬೈ-ಅಹಮದಾಬಾದ್‌ಗೆ ಬುಲೆಟ್​ ಟ್ರೈನ್​ನಲ್ಲಿ ಸಂಚರಿಸಬಹುದು. ಸಂಚಾರದ ಅವಧಿಯನ್ನು ಕಡಿತಗೊಳಿಸಲಿದೆ. ಹೊಸ ಆರ್ಥಿಕತೆ ಸೃಷ್ಟಿಮಾಡಲಿದೆ. ಬುಲೆಟ್ ಟ್ರೈನ್‌ನಿಂದ ಹೊಸ ಅರ್ಥಿಕ ಅಭಿವೃದ್ಧಿ ಸೃಷ್ಟಿ. ಇದರಿಂದ ದೇಶದ ಅಭಿವೃದ್ಧಿಯಾಗಲಿದೆ.

Leave a Reply

Your email address will not be published. Required fields are marked *

Back To Top