Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

ಯಾತ್ರಿಗಳ ದಾಳಿಗೆ ಸೇಡು ತೀರಿಸಿಕೊಂಡ ಸೇನೆ: ಮೂವರು ಉಗ್ರರ ಬಲಿ

Wednesday, 12.07.2017, 8:05 AM       No Comments

ನವದೆಹಲಿ: ಅಮರನಾಥ್​ ಯಾತ್ರಿಗಳನ್ನು ಟಾರ್ಗೆಟ್​ ಮಾಡಿ ದಾಳಿ ಮಾಡಿದ್ದ ಉಗ್ರರನ್ನು ಸೆದೆಬಡೆಯಲು ಭಾರತೀಯ ಸೇನೆ ಟೊಂಕ ಕಟ್ಟಿ ನಿಂತಿದೆ. ಇಂದು ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ನಮ್ಮ ಸೈನಿಕರು ಹೊಡೆದುರುಳಿಸಿದ್ದಾರೆ.

ಕಾಶ್ಮೀರದ ಬದ್ಗಾಮ್​ ಜಿಲ್ಲೆಯಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಹಿಜ್ಬುಲ್​ ಉಗ್ರರಾದ ಅಖಿಬ್​, ದಾವೂದ್​, ಜಾವೇದ್​ ಎಂಬುವವರನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ. ಉಗ್ರರು ಅಡಗಿರುವ ಮಾಹಿತಿಯನ್ನು ಅರಿತ ಭಾರತೀಯ ಸೈನಿಕರು ನಿನ್ನೆ ಸಂಜೆಯಿಂದಲೇ ಕಾರ್ಯಾಚರಣೆಯನ್ನು ಕೈಗೊಂಡಿದ್ದರು.

ಇಂದು ಬೆಳ್ಳಂಬೆಳಗ್ಗೆ ನಡೆದ ಸೇನಾ ಕಾರ್ಯಾಚರಣೆಯಲ್ಲಿ ನಮ್ಮ ಸೈನಿಕರು ಮೂವರು ಉಗ್ರರನ್ನು ಬಲಿ ತೆಗೆದುಕೊಂಡಿದ್ದಾರೆ, ಅಲ್ಲದೆ ಒಂದು ಎಕೆ-47 ಪಿಸ್ತೂಲ್​ನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಹಿಜ್ಬುಲ್​ ಕಮಾಂಡರ್​ ಜಾಕೀರ್​ ಮುಸಾ ಹಾಗೂ ಮತ್ತಷ್ಟು ಉಗ್ರರಿಗಾಗಿ ಸೇನಾ ಕಾರ್ಯಾಚರಣೆಯನ್ನು ಮುಂದುವರೆಸಿದೆ.

ಸೋಮವಾರ ರಾತ್ರಿ ಅಮರನಾಥ್​ ಯಾತ್ರಿಗಳನ್ನು ಗುರಿಯಾಗಿರಿಸಿಕೊಂಡು ಉಗ್ರರು ನಡೆಸಿದ ದಾಳಿಯಿಂದ 7 ಮಂದಿ ಯಾತ್ರಿಗಳು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಈ ಘಟನೆ ಕುರಿತು ವಿಶ್ವದಾದ್ಯಂತ ವ್ಯಾಪಕ ಖಂಡನೆಯೂ ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಯಾಗಿ ಉಗ್ರರನ್ನು ಹೊಡೆದುರುಳಿಸಿರುವುದು ಸೇಡು ತೀರಿಸಿಕೊಂಡಂತಿದೆ. ಇನ್ನು ಅಮರನಾಥ್​ ಯಾತ್ರಿಗಳ ಮೇಲಿನ ದಾಳಿ ನಂತರ ಜಮ್ಮುಕಾಶ್ಮೀರದ ಅನಂತನಾಗ್​ನಲ್ಲಿ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ.(ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top