Friday, 19th October 2018  

Vijayavani

 ಹಾಲು, ತುಪ್ಪ ಮಾರೋ ನೆಪದಲ್ಲಿ ಬರ್ತಾನೆ -ಒಂಟಿ ಮನೆಗಳಲ್ಲಿ ಚಿನ್ನ ಎಗರಿಸ್ತಾನೆ - ಸಿಕ್ಕಿಬಿದ್ದ ಚೋರ ಈಗ ಕಂಬಿ ಎಣಿಸ್ತಾನೆ         ಗೃಹಿಣಿ ಜತೆ ಅಂಕಲ್ ಸ್ನೇಹ ‘ಸಂಬಂಧ’ -ಬೇಡ ಅಂದಿದ್ದಕ್ಕೆ 18 ಬಾರಿ ಇರಿದ -ಚಾಕು ಹಿಡಿದೇ ಪೊಲೀಸರಿಗೆ ಶರಣಾದ        ಬಸ್ಸಲ್ಲಿ ಹೋಗೋ ಮಹಿಳೆಯರೇ ಹುಷಾರು -ನಿಮ್ಮ ಕೂದಲನ್ನೇ ಕತ್ತರಿಸ್ತಾರೆ ಚೋರರು - ಖದೀಮನಿಗೆ ಗ್ರಹಚಾರ ಬಿಡಿಸಿದ ಜನರು         ಸರ್ಕಾರಿ ವೈದ್ಯರ ಅಟೆಂಡೆನ್ಸ್ ಮೇಲೆ ಕಣ್ಣು -ಹಾಜರಾತಿಗೆ ಆಧಾರ್ ಕಡ್ಡಾಯ- ರೂಲ್ಸ್ ತರಲು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಧಾರ        ರಾಜಧಾನಿಯಲ್ಲಿ ಆಯುಧ ಪೂಜೆ ಸಡಗರ -ಮಾರುಕಟ್ಟೆಗಳಲ್ಲಿ ಜೋರಾಯ್ತು ಹೂವು, ಹಣ್ಣು ವ್ಯಾಪಾರ -ಪೊಲೀಸ್ ಠಾಣೆಗಳಲ್ಲೂ ಪೂಜೆ       
Breaking News

ಬಿಎಸ್ಸೆನ್ನೆಲ್​ನಿಂದ ಡೇಟಾ ಸುನಾಮಿ ಆಫರ್​: ಜಿಯೋ, ಏರ್​ಟೆಲ್​ಗೆ ಸೆಡ್ಡು

Friday, 18.05.2018, 6:11 PM       No Comments

ನವದೆಹಲಿ: ಭಾರತ ಸಂಚಾರ ನಿಗಮ್​ ಲಿಮಿಟೆಡ್​ (ಬಿಎಸ್​ಎನ್​ಎಲ್​) ಖಾಸಗಿ ಕಂಪನಿಗಳಾದ ಜಿಯೋ, ಏರ್​ಟೆಲ್​ಗೆ ತೀವ್ರ ಸ್ಪರ್ಧೆ ನೀಡುತ್ತಿದ್ದು, ಮತ್ತೊಂದು ನೂತನ ಡೇಟಾ ಪ್ಯಾಕ್​ನಿಂದ ಎರಡೂ ಟೆಲಿಕಾಂ ಸಂಸ್ಥೆಗಳಿಗೆ ಸೆಡ್ಡು ಹೊಡೆದಿದೆ.

98 ರೂ. ನೂತನ ಡೇಟಾ ಪ್ಯಾಕ್​ಅನ್ನು ಪರಿಚಯಿಸಿದ್ದು, 26 ದಿನಗಳ ಕಾಲ ದಿನಕ್ಕೆ 1.5 ಜಿಬಿ ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

ಬಿಎಸ್​ಎನ್​ಎಲ್​ ನೀಡುತ್ತಿರುವ ಈ ನೂತನ ಪ್ಲ್ಯಾನ್​ನಿಂದ ಅತೀ ಕಡಿಮೆ ದರದಲ್ಲಿ ಅಂದರೆ 2.51 ರೂಪಾಯಿಗೆ ಒಂದು ಜಿಬಿ ಡೇಟಾ ನೀಡಿದಂತಾಗುತ್ತದೆ. ಇದು ಜಿಯೋ ನೀಡುತ್ತಿರುವುದಕ್ಕಿಂತಲೂ ಕಮ್ಮಿ ಬೆಲೆಗೆ ಇಂಟರ್​ನೆಟ್​ ಸೌಲಭ್ಯ ನೀಡಿದಂತಾಗುತ್ತದೆ. ಸದ್ಯ ಜಿಯೋ 149 ರೂ. ಗೆ (28 ದಿನಕ್ಕೆ) ಪ್ರತಿ ದಿನ 1.5 ಜಿಬಿ ಡೇಟಾ ನೀಡುತ್ತಿದ್ದು ಪ್ರಸ್ತುತ ಪ್ರತಿ ಜಿಬಿಗೆ 3.5 ರೂ. ತೆಗೆದುಕೊಳ್ಳುತ್ತಿದೆ.

ಏರ್​ಟೆಲ್​ ಕೂಡ ಇದೇ ರೀತಿಯ ಆಫರ್​ ನೀಡುತ್ತಿದೆ. ಜಿಯೋ ಹಾಗೂ ಏರ್​ಟೆಲ್​ ಈ ಡೇಟಾಪ್ಯಾಕ್​ನಲ್ಲಿ ಡೇಟಾ ಜತೆ ಪ್ರತಿದಿನ 100 ಎಸ್​ಎಂಎಸ್​ಗಳನ್ನು ಉಚಿತವಾಗಿ ನೀಡುತ್ತಿದ್ದು, ಈ ಆಫರ್​ ಬಿಎಸ್​ಎನ್​ಎಲ್​ನ ಸುನಾಮಿ ಆಫರ್​ನಲ್ಲಿ ಇರುವುದಿಲ್ಲ.

ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಬಿಎಸ್​ಎನ್​ಎಲ್ ಕಡಿಮೆ ಬೆಲೆಯಲ್ಲಿ ಸೇವೆಗಳನ್ನು ಒದಗಿಸುತ್ತಿದೆ. ಈ ನೂತನ ಆಫರ್​ ಕೇವಲ ಡೇಟಾ ಸೇವೆ ಒದಗಿಸಲು ಹೊರತರಲಾಗುತ್ತಿದೆ ಎಂದು ಬಿಎಸ್​ಎನ್​ಎಲ್​ ನಿರ್ದೇಶಕ ಆರ್​ಕೆ ಮಿತ್ತಲ್​ ತಿಳಿಸಿದ್ದಾರೆ.

ಜಿಯೋ ಸಂಸ್ಥೆಯ 98 ರೂ. ಪ್ಯಾಕ್​ಗೆ ಸ್ಪರ್ಧೆ ನೀಡಲು ಬಿಎಸ್​ಎನ್​ಎಲ್​ ಈ ತಿಂಗಳ ಪ್ರಾರಂಭದಲ್ಲಿ ​ 118 ರೂ. ಪ್ಯಾಕ್​ ಆರಂಭಿಸಿದ್ದರು.

Leave a Reply

Your email address will not be published. Required fields are marked *

Back To Top