Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ಕಾರ್ಯಕರ್ತರ ಪ್ರೀತಿಗೆ ಬಿಎಸ್​ವೈ ಕನ್ನಡಕ ಚೂರು, ಕೆಂಪಾದ ಕಣ್ಣು   

Wednesday, 13.12.2017, 6:41 PM       No Comments

<< ಬೆಂಗಳೂರಿನಿಂದ ರಾಯಚೂರಿಗೆ ಹೆಲಿಕಾಪ್ಟರ್​​ನಲ್ಲಿ ಹೊಸ ಕನ್ನಡಕ >>

ರಾಯಚೂರು: ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಕನ್ನಡಕ ಹಾಳಾದ ಹಿನ್ನೆಲೆಯಲ್ಲಿ ಅವರ ಕಣ್ಣಿಗೆ ಸೋಂಕಾಗಿದ್ದು, ಯಾರನ್ನೂ ಭೇಟಿಯಾಗದೆ ಬುಧವಾರ ವಿಶ್ರಾಂತಿ ಪಡೆದುಕೊಂಡರು.

ಪ್ರತಿನಿತ್ಯ ಬೆಳಗ್ಗೆ ವಾಯು ವಿಹಾರಕ್ಕೆ ತೆರಳುತ್ತಿದ್ದ ಅವರು ಇಂದು ವಾಯು ವಿಹಾರಕ್ಕೂ ತೆರಳಿಲ್ಲ. ತಮ್ಮನ್ನು ಭೇಟಿಯಾಗಲು ಬಂದ ಗ್ರಾಮೀಣ ಶಾಸಕ ಸೇರಿದಂತೆ ಪಕ್ಷದ ನಾಯಕರನ್ನು ಭೇಟಿಯಾಗದೆ ವಿಶ್ರಾಂತಿ ಪಡೆಯುವುದಾಗಿ ತಿಳಿಸಿದರು.

ಬಿಎಸ್​ವೈ ಆಪ್ತ ಸಹಾಯಕ ಸಂತೋಷ್ ನಿನ್ನೆ ರಾತ್ರಿಯೇ ಬೆಂಗಳೂರಿಗೆ ತೆರಳಿದ್ದು, ಹೆಲಿಕಾಪ್ಟರ್ ಮೂಲಕ ಬೇರೆ ಕನ್ನಡಕ ತೆಗೆದುಕೊಂಡು ರಾಯಚೂರಿಗೆ ವಾಪಸು ಆದರು. ನಂತರವಷ್ಟೇ ಮಧ್ಯಾಹ್ನ 12 ಗಂಟೆಗೆ ಹೆಲಿಕಾಪ್ಟರ್​ನಲ್ಲಿ ಮಾಜಿ ಸಚಿವ ಸಿ.ಸಿ.ಪಾಟೀಲ್ ಕುಟುಂಬದವರ ಮದುವೆಯಲ್ಲಿ ಪಾಲ್ಗೊಳ್ಳಲು ಗದಗಕ್ಕೆ ತೆರಳಿದರು. ಡಿ.14ರಂದು ಮಾನ್ವಿ ಮತ್ತು ಲಿಂಗಸುಗೂರಿನಲ್ಲಿ ನಡೆಯುವ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಯಚೂರು ಜಿಲ್ಲೆ ದೇವದುರ್ಗ ಪಟ್ಟಣದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ರಾಯಚೂರಿಗೆ ಬಂದಾಗ ಕಾರ್ಯಕರ್ತರು ಹೂಮಾಲೆ ಹಾಕುವಾಗ ಬಿಎಸ್ ವೈ ಕನ್ನಡಕ ಕೆಳಗೆ ಬಿದ್ದಿದೆ. ಈ ಸಂದರ್ಭ ಧೂಳಿನಿಂದ ಅವರ ಕಣ್ಣಿಗೆ ಇನ್ಪೆಕ್ಷನ್ ಆಗಿದೆ.

 

 

Leave a Reply

Your email address will not be published. Required fields are marked *

Back To Top