Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಸ್ವಾತಂತ್ರ್ಯ ಯೋಧನ ತಲೆಬುರುಡೆ ಭಾರತಕ್ಕೆ ಹಿಂತಿರುಗಿಸಿ

Sunday, 15.04.2018, 9:20 PM       No Comments
ಹವಾಲ್ದಾರ್ ಅಲಂ ಭೇಗ್​ನ ತಲೆಬುರುಡೆ

ಲಂಡನ್: ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಸಿಡಿದೆದ್ದ ಸೈನಿಕರು 1857ರಲ್ಲಿ ನಡೆಸಿದ ಸಿಪಾಯಿ ದಂಗೆ ಸಂದರ್ಭದಲ್ಲಿ ಗಲ್ಲಿಗೇರಿಸಲಾದ ಬಂಡಾಯದ ನಾಯಕ ಹವಾಲ್ದಾರ್ ಅಲಂ ಭೇಗ್​ನ ತಲೆಬುರುಡೆಯನ್ನು ಭಾರತಕ್ಕೆ ಹಿಂದಿರುಗಿಸಬೇಕು ಎಂದು ಬ್ರಿಟನ್​ನ ಇತಿಹಾಸ ತಜ್ಞ ಡಾ. ಕಿಮ್ ವ್ಯಾಗ್ನರ್ ಆಗ್ರಹಿಸಿದ್ದಾರೆ.

ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ (ಸಿಪಾಯಿ ದಂಗೆ) ಕಾರಣಕರ್ತನಾದ ಬೇಗ್ ಹುತಾತ್ಮನಾಗಿ 160 ವರ್ಷಗಳಾಗಿದ್ದು, ಅವನ ತಲೆ ಬುರುಡೆಯನ್ನು ತಾಯ್ನಾಡಿಗೆ ಹಿಂದಿರುಗಿಸಲು ಇದು ಸಕಾಲ. ಈ ಮೂಲಕ ಆತನ ಆತ್ಮಕ್ಕೆ ಚಿರಶಾಂತಿ ದೊರೆಯುವಂತಾಗಬೇಕು ಎಂದು ಲಂಡನ್​ನ ಕ್ವೀನ್ ಮೇರಿ ಕಾಲೇಜಿನ ಬ್ರಿಟಿಷ್ ಚಕ್ರಾಧಿಪತ್ಯ ಇತಿಹಾಸ ವಿಭಾಗದ ಹಿರಿಯ ಉಪನ್ಯಾಸಕರೂ ಆಗಿರುವ ವ್ಯಾಗ್ನರ್ ಹೇಳಿದ್ದಾರೆ.

ಬೇಗ್ ಸಿಪಾಯಿ ಆಗಿದ್ದ ರೆಜಿಮೆಂಟ್ ಕಾನ್ಪುರ್​ದಲ್ಲಿ ಕೇಂದ್ರ ಸ್ಥಾನ ಹೊಂದಿತ್ತು. ಆದರೆ, ಭೇಗ್​ನ ತೆಲೆಬುರುಡೆಯನ್ನು ಭಾರತ ಮತ್ತು ಪಾಕ್ ಗಡಿಯ ರಾವಿ ನದಿ ತೀರದಲ್ಲಿ ಸಮಾಧಿ ಮಾಡಬೇಕು. ಏಕೆಂದರೆ, ಈ ಪ್ರದೇಶದಲ್ಲಿ ನಡೆದ ತ್ರಿಮ್ಮು ಘಾಟ್ ಯುದ್ಧದಲ್ಲಿ ಬೇಗ್ ಬ್ರಿಟಿಷ್​ರ ಪರವಾಗಿ ಹೋರಾಡಿದ್ದ ಧೀರ ಯೋಧ ಎಂದು‘ದಿ ಸ್ಕಲ್ ಆಫ್ ಅಲಂ ಭೇಗ್: ದಿ ಲೈಫ್ ಆಂಡ್ ಡೆತ್ ಆಫ್ ರೆಬೆಲ್ ಆಫ್ 1857’ ಪುಸ್ತಕದಲ್ಲಿ ವ್ಯಾಗ್ನರ್ ಹೇಳಿದ್ದಾರೆ.

ರೆಜಿಮೆಂಟ್ ಹುಕ್ಕುಂ ವಿರುದ್ಧ ಸಿಡಿದೆದ್ದ ಭೇಗ್​ನನ್ನು ನೇಣಿಗೆ ಹಾಕಲಾಯಿತು. ಆತನ ತಲೆಯನ್ನು ಕ್ಯಾಪ್ಟನ್ ಎ.ಆರ್.ಕ್ಯಾಸ್ಟೆಲ್ಲೊ ಕಡಿದು ಇಂಗ್ಲೆಂಡ್​ಗೆ ತಂದಿದ್ದ. ಈ ತಲೆಯನ್ನು ಕೆಂಟ್ ಪ್ರಾಂತ್ಯದ ಕರಾವಳಿ ವಾಲ್ಮರ್ ಪಟ್ಟಣದ ಪಬ್​ವೊಂದರಲ್ಲಿ ಇರಿಸಲಾಗಿತ್ತು ಎಂದು ವ್ಯಾಗ್ನರ್ ತಿಳಿಸಿದ್ದಾರೆ. -ಪಿಟಿಐ

Leave a Reply

Your email address will not be published. Required fields are marked *

Back To Top