Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಮುಗುಳ್ನಕ್ಕ ಭಾರತ! ಸಾವಿರಾರು ಕೋಟಿ ದಾವೂದ್​ ಆಸ್ತಿ ಜಫ್ತಿ

Wednesday, 13.09.2017, 1:24 PM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಬುಧವಾರ ಮಧ್ಯಾಹ್ನ ಮುಖ್ಯಾಂಶಗಳು ಹೀಗಿವೆ:

1. ಕಾಂಗ್ರೆಸ್‌ಗೇ ವಿಷವಾದ ಲಿಂಗಾಯತ ಧರ್ಮ ವಿಚಾರ- ಕ್ಯಾಬಿನೆಟ್‌ನಲ್ಲೂ ಪಾಟೀಲ್ ಹೇಳಿಕೆ ಬಗ್ಗೆ ಬೇಸರ- ಸಿದ್ದಗಂಗಾ ಶ್ರೀ ಹೆಸರೇಳಿದ್ದಕ್ಕೆ ಬಿಜೆಪಿ ಗರಂ

2. ಭಾರತ ಪ್ರವಾಸದಲ್ಲಿ ಜಪಾನ್ ಪ್ರಧಾನಿ ಅಬೆ- ಮೋದಿ ತವರು ರಾಜ್ಯದಲ್ಲಿ ಬಿಡುವಿಲ್ಲದ ಪ್ರವಾಸ- ಬುಲೆಟ್‌ ಟ್ರೈನ್​​​​​​​​​​​ಗೆ ನಾಳೆ ಅಡಿಗಲ್ಲು

3. ಕೊಡಗಿನಲ್ಲಿ ತಮಿಳುನಾಡು ರಾಜಕೀಯ- ತೊಂಡೂರಿನ ರೆಸಾರ್ಟ್‌ಗೆ ಪೊಲೀಸರ ಭೇಟಿ- ಸಂಜೆ ತವರಿಗೆ ಮರಳುವ ಸಾಧ್ಯತೆ

4. ಪೊಲೀಸ್ ಠಾಣೆಯಲ್ಲಿ ಮಹಿಳೆಯ ಪವರ್- ಖಾಕಿಗೆ ನಡುಬೀದಿಯಲ್ಲಿ ಕಪಾಳಮೋಕ್ಷ- ನ್ಯಾಯ ಕೊಡಿಸದ್ದಕ್ಕೆ ರಣಚಂಡಿ ಅವತಾರ


5. ಮುಗುಳ್ನಕ್ಕ ಭಾರತ! ಸಾವಿರಾರು ಕೋಟಿ ದಾವೂದ್​ ಆಸ್ತಿ ಜಫ್ತಿ

ನವದೆಹಲಿ: ಭೂಗತ ಪಾತಕಿ ದಾವೂದ್​ ಇಬ್ರಾಹಿಂಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಲಂಡನ್​ನಲ್ಲಿ ದಾವೂದ್​​ಗೆ ಸೇರಿದ 600 ಕೋಟಿ ರೂಪಾಯಿ ಆಸ್ತಿಯನ್ನು ಜಫ್ತಿ ಮಾಡಲಾಗಿದೆ. ಇದರಿಂದ ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ಲಭಿಸಿದಂತಾಗಿದೆ.

ಬ್ರಿಟನ್ ಸರಕಾರ ಸಿದ್ಧಪಡಿಸಿರುವ ಹಣಕಾಸು ನಿಷೇಧಗಳ ಪಟ್ಟಿಯಲ್ಲಿ ದಾವೂದ್​​ ಇಬ್ರಾಹಿಂ ಸುಮಾರು 21ಕ್ಕೂ ಹೆಚ್ಚು ಅಲಿಯಾಸ್ ಹೆಸರುಗಳು ಹೊಂದಿದ್ದಾನೆ ಎನ್ನಲಾಗಿದೆ. 2015ರಲ್ಲಿ ಬ್ರಿಟನ್​ ಸರಕಾರಕ್ಕೆ ಭಾರತ ದಾವೂದ್ ​ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಮನವಿ ಮಾಡಿತ್ತು.

ದಾವೂದ್​ ಇಬ್ರಾಹಿಂ 16 ದೇಶಗಳಲ್ಲಿ ಭಾರಿ ಪ್ರಮಾಣದ ಆಸ್ತಿ ಹೊಂದಿದ್ದಾನೆ. ನಕಲಿ ನೋಟು, ಗ್ಯಾಂಬ್ಲಿಂಗ್, ಕ್ರಿಕೆಟ್ ಬೆಟ್ಟಿಂಗ್, ಮಾದಕ ದ್ರವ್ಯ ಕಳ್ಳ ಸಾಗಣೆ, ಪೈರಸಿ ಹೀಗೆ ಹಲವು ಅಕ್ರಮ ವ್ಯವಹಾರಗಳನ್ನು ಆತ ಹೊಂದಿದ್ದು, ಮೋಸ್ಟ್ ವಾಂಟೆಡ್ ಆಗಿದ್ದಾನೆ. ಮುಂಬಯಿ ಸರಣಿ ಬಾಂಬ್ ಸ್ಫೋಟ ಪ್ರಕರಣದ ಮುಖ್ಯ ಆರೋಪಿಯಾಗಿರೋ ದಾವೂದ್​ 1993ರಿಂದ ತಲೆಮರೆಸಿಕೊಂಡಿದ್ದಾನೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top