Saturday, 20th October 2018  

Vijayavani

ಚೀಪ್ ಮೆಂಟಾಲಿಟಿ ನನಗಿಲ್ಲ - ಇದರ ಹಿಂದೆ ಕೈವಾಡ ಇರಬಹುದು - ನಟಿ ಶ್ರುತಿ ಹರಿಹರನ್ ಆರೋಪ ತಳ್ಳಿಹಾಕಿದ ಅರ್ಜುನ್ ಸರ್ಜಾ        ಸ್ಯಾಂಡಲ್​ವುಡ್​​ನಲ್ಲಿ ಮೀ ಟೂ - ನಾಳೆ ಸುದ್ದಿಗೋಷ್ಠಿಯಲ್ಲಿ ಶ್ರುತಿ ಹಾಕ್ತಾರಾ ಬಾಂಬ್ - ನಟಿ ವಿರುದ್ಧ ಗುಡುಗಿದ ಅರ್ಜುನ್ ಸರ್ಜಾ ಅತ್ತೆ        ಧರ್ಮ ವಿಚಾರದಲ್ಲಿ ಡಿಕೆಶಿ ಕ್ಷಮೆಯಾಚನೆಗೆ ಸಿದ್ದು ಸಿಟ್ಟು - ಒಂದೇ ವೇದಿಯಲ್ಲಿದ್ರೂ ಮುಖ ಮುಖ ನೋಡಲಿಲ್ಲ - ಜಂಟಿ ಸುದ್ದಿಗೋಷ್ಠಿಯಲ್ಲಿ ನಾಯಕರ ಮಹಾ ಮುನಿಸು        ಜೆಡಿಎಸ್‌, ಕಾಂಗ್ರೆಸ್‌ನ ಸುದ್ದಿಗೋಷ್ಠಿ - ಕಾಂಗ್ರೆಸ್‌, ಜೆಡಿಎಸ್‌ ಜಂಟಿ ಸಮರಕ್ಕೆ ಬಿಜೆಪಿ ವ್ಯಂಗ್ಯ- ಟ್ವೀಟ್‌ ಮೂಲಕ ಟಾಂಗ್‌        ಒಂದೇ ಮನಸ್ಸು ಎರಡು ದೇಹ ಅಂದ್ರು ಸಿಎಂ - ಈ ಜನ್ಮದಲ್ಲಿ ಗೌಡ್ರು-ಸಿದ್ದು ಒಂದಾಗಲ್ಲ ಅಂದ್ರು ಕಾರಜೋಳ - ದೋಸ್ತಿಗಳಿಗೆ ಬಿಜೆಪಿ ನಾಯಕರ ಟಕ್ಕರ್        ಗದಗಿನ ತೋಂಟದಾರ್ಯ ಶ್ರೀಗಳು ಲಿಂಗೈಕ್ಯ - ಹೃದಯಾಘಾತದಿಂದ ಗದಗ್‌ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶ - ನಾಳೆ ಗದಗದಲ್ಲಿ ಅಂತ್ಯಕ್ರಿಯೆ       
Breaking News

ಆಟೋ ಡ್ರೈವರ್​​ ವರನನ್ನು ಬಿಟ್ಟು ಟಿಟಿ ಡ್ರೈವರ್ ಜೊತೆ ವಧು ಪರಾರಿ

Sunday, 12.11.2017, 1:19 PM       No Comments

>> ವಧು ರಮ್ಯಾ ಈ ರೀತಿ ಓಡಿ ಹೋಗಿರುವುದು ಇದು ಎರಡನೇ ಬಾರಿ

ತುಮಕೂರು : ಮದುವೆ ಹಿಂದಿನ ರಾತ್ರಿಯೇ ಮದುವೆ ಮಂಟಪದಿಂದ ವಧು ಪರಾರಿಯಾಗಿರುವ ಘಟನೆ ತುಮಕೂರಿನ ಕುಣಿಗಲ್‌ನಲ್ಲಿ ನಡೆದಿದೆ.
ಕುಣಿಗಲ್‌ನ ಯಡಿಯೂರು ದೇವಸ್ಥಾನದಲ್ಲಿ ಮದುವೆ ನಡೆಯುತ್ತಿತ್ತು. ಭಾನುವಾರ ಬೆಳಗ್ಗೆ 9-30ಕ್ಕೆ ಮುಹೂರ್ತ ಇತ್ತು. ಆದರೆ, ಶನಿವಾರ ಸಂಜೆ ಆರತಕ್ಷತೆಯಲ್ಲಿ ಖುಷಿಯಿದಂಲೇ ಇದ್ದ ವಧು ರಾತ್ರೋ ರಾತ್ರಿ ಪರಾರಿಯಾಗಿದ್ದಾಳೆ.

ಬೆಳಗ್ಗೆ ಎದ್ದು ನೋಡಿದಾಗ ವಧು ಕಾಣಿಸಲಿಲ್ಲ. ಆಟೋ ಡ್ರೈವರ್ ಆಗಿದ್ದ ರಾಮಕೃಷ್ಣರ ಜೊತೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ನಿವಾಸಿ ರಮ್ಯಾ ಜತೆ ಮದುವೆ ನಿಶ್ಚಯವಾಗಿತ್ತು. ವಧು ಪರಾರಿಯಾದ ಹಿನ್ನೆಲೆಯಲ್ಲಿ ಮದುವೆ ಅರ್ಧಕ್ಕೆ ಮುರಿದು ಬಿದ್ದಿದ್ದು, ವರನ ಕಡೆಯವರು ಕಂಗಾಲಾಗಿದ್ದಾರೆ.

ವಧು ರಮ್ಯಾ ಈ ರೀತಿ ಮದುವೆ ಬಿಟ್ಟು ಓಡಿ ಹೋಗಿರುವುದು ಇದು ಎರಡನೇ ಬಾರಿ. ವರ್ಷದ ಹಿಂದೆ ಇನ್ನೊಂದು ಹುಡುಗನ ಜೊತೆ ವಿವಾಹ ನಿಶ್ಚಯವಾಗಿದ್ದ ಸಮಯದಲ್ಲಿ ಕೂಡ ಮದುವೆ ಕಾರ್ಡ್​ ಪ್ರಿಂಟ್ ಮಾಡುವ ಮೊದಲೇ ಯುವತಿ ಪರಾರಿಯಾಗಿದ್ದಳು.

ಹೀಗೆ ಓಡಿ ಹೋಗಿದ್ದ ರಮ್ಯಾಳನ್ನು ಮತ್ತೆ ಕರೆತಂದಿದ್ದ ಅವಳ ತಾಯಿ ವರ್ಷದ ಬಳಿಕ ಯಡಿಯೂರು ಮೂಲದ ಆಟೋ ಡ್ರೈವರ್ ರಾಮಕೃಷ್ಣ ಜೊತೆ ವಿವಾಹ ನಿಶ್ಚಯ ಮಾಡಿದ್ದರು. ಆದರೆ ರಾತ್ರಿ ಆರತಕ್ಷತೆ ಮುಗಿಸಿಕೊಂಡು ಟಿಟಿ ಚಾಲಕ ಶಶಿ ಎನ್ನುವವನ ಜೊತೆ ರಮ್ಯಾ ಮತ್ತೆ ಪರಾರಿಯಾಗಿದ್ದಾಳೆ. ವರನ ಕಡೆಯವರು ವಧುವಿನ ಮನೆಯವರನ್ನು ಕೂಡಿ ಹಾಕಿ ಮದುವೆಗೆ ಖರ್ಚಾಗಿರುವ ನಷ್ಟ ತುಂಬಿ ಕೊಡುವಂತೆ ಒತ್ತಾಯಿಸಿದ್ದಾರೆ. (ದಿಗ್ವಿಜಯ ನ್ಯೂಸ್)

 

Leave a Reply

Your email address will not be published. Required fields are marked *

Back To Top