Friday, 17th August 2018  

Vijayavani

ಪಂಚಭೂತಗಳಲ್ಲಿ ಲೀನರಾದ ಅಜಾತಶತ್ರು - ವಾಜಪೇಯಿ ಚಿತೆಗೆ ಮಗಳಿಂದ ಅಗ್ನಿ ಸ್ಪರ್ಶ - ಅಟಲ್​ಜೀ ಇನ್ನು ನೆನಪು ಮಾತ್ರ        ವಾಜಪೇಯಿಗೆ ನಮನ ಸಲ್ಲಿಸಿದ ವಿಶ್ವ ನಾಯಕರು, ಸಾರ್ಕ್​ ಪ್ರತಿನಿಧಿಗಳು - ಅಂತಿಮ ಯಾತ್ರೆಯುದ್ದಕ್ಕೂ ಮೋದಿ ಕಾಲ್ನಡಿಗೆ        ದೇಶಕ್ಕೆ ಸುವರ್ಣ ಚತುಷ್ಪಥದ ಕೊಡುಗೆ - ಹಳ್ಳಿಗಳಿಗೆ ಗ್ರಾಮ ಸಡಕ್​ನ ಉಡುಗೊರೆ - ಸರ್ವರಿಗೂ ಶಿಕ್ಷಣ ಕೊಡಿಸಿದ ನಾಯಕ        ರಕ್ಕಸ ಮಳೆಗೆ ಕೊಚ್ಚಿಹೋಯ್ತು ಕೊಡಗು - ಆಶ್ಲೇಷ ಮಳೆ ಏಟಿಗೆ 6 ಸಾವು - ನಾಳೆಯಿಂದ ರಕ್ಷಣಾಕಾರ್ಯ, ಸಿಎಂ ಸಭೆ        ಕೇರಳದಲ್ಲಿ ಎಲ್ಲಿ ನೋಡಿದ್ರೂ ನೆರೆ ನೆರೆ - 300 ದಾಟಿದ ಮಳೆಗೆ ಬಲಿಯಾದವರ ಸಂಖ್ಯೆ - ನಿರಾಶ್ರಿತ ಕೇಂದ್ರಗಳಲ್ಲಿ 2 ಲಕ್ಷ ಸಂತ್ರಸ್ತರು        ನಾಳೆಯಿಂದ ಶುರು ಏಷ್ಯನ್​ ಗೇಮ್ಸ್​ - ಜತೆಗೆ ಆಂಗ್ಲೋ-ಇಂಡಿಯನ್​ 3ನೇ ಟೆಸ್ಟ್​​ - ಟ್ರೆಂಟ್​ಬ್ರಿಡ್ಜ್​​ನಲ್ಲಾದ್ರೂ ಪುಟಿದೇಳುತ್ತಾ ಕೊಹ್ಲಿ ಪಡೆ       
Breaking News

ಆಡುತ್ತಾ ಬಾವಿಗೆ ಬಿದ್ದಿದ್ದ ಕಂದಮ್ಮಗಳ ಮೃತದೇಹ ಹೊರಕ್ಕೆ

Thursday, 24.05.2018, 7:00 PM       No Comments

ಬೆಳಗಾವಿ: ಅಥಣಿ ತಾಲೂಕಿನ ಕೊಕಟನೂರು ಗ್ರಾಮದ ರಬಕವಿ ತೋಟದಲ್ಲಿ ಆಟವಾಡುತ್ತ ಹೋಗಿ ಬಾವಿಗೆ ಬಿದ್ದ ಬಾಲಕರ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ.

ಐದು ವರ್ಷದ ಬಾಲಕರಾದ ಆದರ್ಶ ಸುಭಾಷ್ ತಳವಾರ, ಅಭಿಷೇಕ್ ಬಸವರಾಜ್ ಮಡಿವಾಳ ಪಾಲಕರೊಂದಿಗೆ ಗದ್ದೆಗೆ ಹೋಗಿದ್ದಾಗ ಆಟ ಆಡುತ್ತ ಬಾವಿಗೆ ಬಿದ್ದಿದ್ದರು. ಕೂಡಲೇ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ 3 ಗಂಟೆ ಕಾರ್ಯಾಚರಣೆ ನಡೆಸಿ, ಬಾಲಕರ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.

ಮೃತದೇಹವನ್ನು ನೋಡುತ್ತಿದ್ದಂತೆ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಐಗಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back To Top