Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ದೇವರು ಮತ್ತೆ ಸಿಟ್ಟಿಗೆದ್ದಿದ್ದಾನೆ! ಮುಂಬೈನಲ್ಲಿ ಪ್ರಳಯವೇ ಆಗ್ತಿದೆ…

Wednesday, 20.09.2017, 1:15 PM       No Comments

ಮುಂಬೈ: ಭಾರತದ ಮಹಾನಗರದಲ್ಲಿ ಅಬ್ಬರಿಸುತ್ತಿರುವ ಮಳೆರಾಯನ ಆರ್ಭಟ ಕಂಡು ಘಟಾನುಘಟಿಗಳೇ ಬೆಚ್ಚಿಬಿದ್ದಿದ್ದಾರೆ. ಮಳೆರಾಯ ಸಾಕಪ್ಪಾ ನಿನ್ನ ಕೋಪಾ ತಾಪಾ. ಈಗಲಾದರೂ ತಣ್ಣಗಾಗು! ಎಂದು ದೇವರ ಮೊರೆ ಹೋಗಿದ್ದಾರೆ.

ಹೌದು, ಮುಂಬೈ ಮಹಾನಗರದಲ್ಲಿ ಕೆಲಕಾಲ ಬಿಡುವು ನೀಡಿ ನಿನ್ನೆ ಮಂಗಳವಾರ ರಾತ್ರಿ ಇದ್ದಕಿದ್ದಂತೆ ಅಬ್ಬರಿಸಿದ ವರುಣನಿಂದ ಮುಂಬೈ ನಗರ ಮುಳಗಿ ಹೋಗಿದೆ. ಗಾಯದ ಮೇಲೆ ಬರ ಎಳೆಯಲು ಬಂದ ಮಳೆರಾಯನ ಕಂಡು ಬಾಲಿವುಡ್​ ನಟ ಅಮಿತಾಬ್​ ಬಚ್ಚನ್ ಅವರು ದೇವರು ಮತ್ತೆ ನಮ್ಮ ಮೇಲೆ ಕೋಪಿಸಿಕೊಂಡಿದ್ದಾನೆ ಎಂದು ತಮ್ಮ ಟ್ಟಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

ನಮ್ಮ ಮೇಲೆ ಕೋಪಗೊಂಡಿರುವ ದೇವರು ಗುಡುಗು ಸಿಡಿಲು ಸಹಿತ ಪ್ರಳಯವನ್ನೇ ಸೃಷ್ಠಿ ಮಾಡಿದ್ದಾನೆ. ಎಲ್ಲರೂ ಮನೆಯಲ್ಲೇ ಉಳಿಯುವ ಮೂಲಕ ರಕ್ಷಿಸಿಕೊಳ್ಳಿ ಎಂದು ಗಣೇಶನ ಪಾದವನ್ನು ನಮಸ್ಕರಿಸಿ ಬೇಡುತ್ತಿರುವ ಪೋಟೋವೊಂದನ್ನು ಅಮಿತಾಬ್ ತಮ್ಮ​ ಟ್ವಿಟ್ಟರ್​ನಲ್ಲಿ ಷೇರ್​​ ಮಾಡಿದ್ದಾರೆ.​

ಇನ್ನೊಂದೆಡೆ ಬಾಲಿವುಡ್​ ನಿರ್ದೇಶಕ ಶಿರೀಷ್​ ಕುಂದರ್​ ಕೂಡ ಮಳೆಯ ಆರ್ಭಟಕ್ಕೆ ಬೆಚ್ಚಿದ್ದಾರೆ. ನನ್ನ ಪತ್ನಿ ಮಳೆ ನಿಲ್ಲುವಂತೆ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದರೆ, ನನ್ನ ಮಕ್ಕಳು ಮಳೆರಾಯನನ್ನು ಹೋಗು ನಾವು ಶಾಲೆಗೆ ಹೋಗಬೇಕೆಂದು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ.

ಅಂದಹಾಗೆ ನಿನ್ನೆ ಬೆಳಗ್ಗೆಯಿಂದ ಮುಂಬೈನಲ್ಲಿ ವರುಣರಾಯ ಅಬ್ಬರಿಸ್ತಿದ್ದು, ಈವರೆಗೆ 191 ಮಿಲಿ ಮೀಟರ್‌ನಷ್ಟು ಮಳೆಯಾಗಿದೆ. ನಗರದ ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗ್ತಿದೆ. ಅಲ್ಲದೇ ವಿಮಾನ ಹಾರಾಟ, ರೈಲ್ವೆ ಸಂಚಾರಕ್ಕೆ ಮಳೆ ಅಡ್ಡಿಯಾಗ್ತಿದೆ.

5 ರೈಲುಗಳ ಸಂಚಾರವನ್ನ ಕಡಿತಗೊಳಿಸಿದ್ದು, 56 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂದೂ ಕೂಡ ಮಳೆ ಅಬ್ಬರ ಮುಂದುವರಿಯುವ ಸಾಧ್ಯತೆಯಿದ್ದು, ಮುಂದಿನ 24 ಗಂಟೆಗಳಲ್ಲಿ ನಗರದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಅಂತಾ ಹವಾಮಾನ ಇಲಾಖೆ ಹೇಳಿದೆ.

ಮುಂಬೈನಲ್ಲಿ ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ವಾಣಿಜ್ಯನಗರಿಯ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top