Thursday, 22nd February 2018  

Vijayavani

ಗೃಹ ಸಚಿವ ಹೆಸ್ರಲ್ಲಿ ಬೇನಾಮಿ ಆಸ್ತಿ ವಿಚಾರ- ವಿಧಾಸಭೆಯಲ್ಲಿ ಪ್ರತಿಧ್ವನಿಸಿದ ದಿಗ್ವಿಜಯ ನ್ಯೂಸ್‌ ವರದಿ- ರಾಮಲಿಂಗಾರೆಡ್ಡಿ ರಾಜೀನಾಮೆಗೆ ಶೆಟ್ಟರ್‌ ಆಗ್ರಹ        ಗೃಹ ಸಚಿವರ ವಿರುದ್ಧ ಬೇನಾಮಿ ಆಸ್ತಿ ವಿಚಾರ- ಪ್ರಶ್ನೋತ್ತರ ಬಳಿಕ ಚರ್ಚೆಗೆ ಅವಕಾಶ- ರಾಮಲಿಂಗಾರೆಡ್ಡಿಗೆ ಕಂಟಕವಾಗುತ್ತಾ ಪ್ರಕರಣ        ಬಟ್ಟೆ ಬಿಚ್ಚಿಸಿ ರೌಡಿಗಳನ್ನ ಮೆರವಣಿಗೆ ಮಾಡಿಸ್ತೀನಿ- ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ತಿನಿ- ಮೊದಲು ಅಬ್ಬರಿಸಿ ತಣ್ಣಗಾದ ಶಾಸಕ ಸೋಮಶೇಖರ್‌        ಕಾಂಗ್ರೆಸ್ ಗೂಂಡಾಗಳಿಂದ ಪಕ್ಷಕ್ಕೆ ಡ್ಯಾಮೇಜ್- ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್- ಘಟನೆ ಮಾಹಿತಿ ಪಡೆದ ಸೋನಿಯಾ, ರಾಹುಲ್        ಪುಟ್ಟಣ್ಣಯ್ಯ ಅಂತಿಮಯಾತ್ರೆಗೆ ಸಿದ್ದತೆ- ಮಾಜಿ ಪ್ರಧಾನಿ ಎಚ್‌ಡಿಡಿಯಿಂದ ಅಂತಿಮ ದರ್ಶನ- ರೈತ ನಾಯಕನ ಅಂತ್ಯಸಂಸ್ಕಾರಕ್ಕೆ 30 ಜಿಲ್ಲೆಗಳಿಂದ ಮಣ್ಣು       
Breaking News

ಜಹೀರ್​ ಖಾನ್​ – ಸಾಗರಿಕಾ ನಿಖಾ ದಿನಾಂಕ ಫಿಕ್ಸ್​ ಆಯ್ತು

Thursday, 14.09.2017, 4:46 PM       No Comments

ನವದೆಹಲಿ: ಚಕ್​ ದೆ ಇಂಡಿಯಾ ಖ್ಯಾತಿಯ ನಟಿ ಸಾಗರಿಕಾ ಘಾಟ್ಗೆ ಹಾಗೂ ಖ್ಯಾತ ಕ್ರಿಕೆಟಿಗ ಜಹೀರ್​ ಖಾನ್​ ನಡುವೆ ಲವ್ವಿಡವ್ವಿ ಇರುವುದು ನಿಮಗೆಲ್ಲಾ ಗೊತ್ತು. ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಹಳೆಯ ಸುದ್ದಿಯೇ ಈಗ್ಯಾಕೆ ಅವರ ವಿಷಯ ಅಂತೀರಾ ವಿಷಯ ಅದಲ್ಲಾ ಮುಂದೆ ಓದಿ…

ವಿಷಯ ಏನಂದ್ರೆ ಜಹೀರ್​ ಖಾನ್​ ಹಾಗೂ ಸಾಗರಿಕ ಘಾಟ್ಗೆ ಅವರ ಮದುವೆ ದಿನ ನಿಶ್ಚಯವಾಗಿದೆ. ಮುಂದಿನ ನವೆಂಬರ್​ 27 ರಂದು ಈ ನವಜೋಡಿಗಳು ಹಸಮಣೆ ಏರಲಿದ್ದಾರೆ.

ಇದೇ ವರ್ಷದ ಮೇ ತಿಂಗಳಲ್ಲಿ ಜಹೀರ್​ ಖಾನ್​​​ ಅವರು ಸಾಗರಿಕರಿಗೆ ತಮ್ಮ ಪ್ರೇಮ ನಿವೇದನೆಯನ್ನು ಮಾಡಿದ್ದರು. ಈಗ ತಮ್ಮ ಪ್ರೀತಿಯನ್ನು ಅಧಿಕೃತಗೊಳಿಸಲು ಈ ಜೋಡಿಗಳು ನಿರ್ಧರಿಸಿದ್ದಾರೆ.

ಇನ್ನು ಇವರಿಬ್ಬರ ನಿಶ್ಚಿತಾರ್ಥದ ಸಮಯದಲ್ಲಿ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಇವರಿಬ್ಬರ ನಡುವೆ ಬ್ರೇಕ್​ ಅಪ್​ ಆಗುತ್ತದೆ ಎಂಬ ಊಹಾಪೋಹಗಳನ್ನು ಹಬ್ಬಿಸಿದರು. ಈ ಎಲ್ಲಾ ಗಾಸಿಪ್​ಗಳಿಗೀಗ ಸಾಗರಿಕ ಅವರು ಪುಲ್​ಸ್ಟಾಫ್​ ಇಟ್ಟಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top