Monday, 23rd October 2017  

Vijayavani

1. ಲಿಂಗಾಯತರು ಹಿಂದೂಗಳಲ್ಲ ಹೇಳಿಕೆ – ಜಾಮದಾರ್​ಗೆ ಕನೇರಿ ಮಠದ ಶ್ರೀ ತಿರುಗೇಟು – ಬಹಿರಂಗ ಚರ್ಚೆಗೆ ಕಾಡಸಿದ್ದೇಶ್ವರ ಸ್ವಾಮಿಗಳ ಆಹ್ವಾನ 2. ರಾಜ್ಯ ಕಾಂಗ್ರೆಸ್​ನಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯ – ಸಿದ್ದು, ಪರಂ, ಡಿಕೆಶಿ ದೂರ ದೂರ – ಹೈಕಮಾಂಡ್​ ಸಾಮೂಹಿಕ ಜಪ, ನಾಯಕರು ಸಪರೇಟ್​ ರೂಪ 3. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಜನರ ತೆರಿಗೆ ದುಡ್ಡಲ್ಲಿ ಕಾಂಗ್ರೆಸ್‌ ಪಕ್ಷಕ್ಕೂ ಪ್ರಚಾರ – ಬೆನ್ನುತಟ್ಟಿಕೊಳ್ಳೋ ಸಮಾವೇಶಕ್ಕೆ ಪಿಡಿಓಗಳೂ ದುರ್ಬಳಕೆ 4. ನಟ ವಿಜಯ್ ಬೆಂಬಲಕ್ಕೆ ನಿಂತ ತಲೈವಾ – ಮೆರ್ಸಲ್‌ ಸಿನಿಮಾದ ಬಗ್ಗೆ ಮೆಚ್ಚುಗೆಯ ಟ್ವೀಟ್ – ವಿವಾದಾತ್ಮಕ ವಿಷಯಗಳಿಗೂ ರಜನಿಕಾಂತ್ ಪರೋಕ್ಷ ಶ್ಲಾಘನೆ 5. ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಬಿಗ್​ ಶಾಕ್​ – ಬಿಜೆಪಿಗೆ ಸೇರಲು 1 ಕೋಟಿ ರೂ ಆಮೀಷ – ಹಾರ್ದಿಕ್​ ಪಟೇಲ್​ ಸಂಗಡಿಗನ ಗಂಭೀರ ಆರೋಪ
Breaking News :

ವಿದೇಶಿಯರೇ ನಮ್ಮ ಸಂಸ್ಕೃತಿಗೆ ಮಣೆ ಹಾಕುವಾಗ ಪ್ರಿಯಾಂಕಾದ್ದೇನು ರಗಳೆ?

Thursday, 17.08.2017, 12:57 PM       No Comments

ನವದೆಹಲಿ: ರಾಷ್ಟ್ರಪ್ರೇಮಕ್ಕೆ ಯಾವುದೇ ಹಂಗಿಲ್ಲ ನಿಜ. ಆದರೆ ಅದನ್ನು ವ್ಯಕ್ತಪಡಿಸುವ ಪರಿಯಲ್ಲಿ ಬದಲಾವಣೆಯಾದರೆ ಸಹಿಸುವುದು ಕಷ್ಟ. ಅದರಲ್ಲೂ ಉನ್ನತ ಸ್ಥಾನದಲ್ಲಿರುವವರು, ಸೆಲೆಬ್ರಿಟಿಗಳನ್ನು ಜನ ಸದಾ ಗಮನಿಸುತ್ತಲೇ ಇರುತ್ತಾರೆ. ಗಮನಿಸುವುದು ಮಾತ್ರವಲ್ಲ ಅವರ ಶೈಲಿಯನ್ನು ಅನುಸರಿಸುತ್ತಿರುತ್ತಾರೆ. ಹೀಗಿರುವಾಗ ಮಾದರಿಯಾಗಿರಬೇಕಿದ್ದವರೇ ಅಗೌರವ ತೋರುವಂತಾದರೆ?.

ಹಾದು, ಜನ ಇಂದು ಎಲ್ಲವನ್ನು ಮೌನವಾಗಿ ಒಪ್ಪಿಕೊಳ್ಳುವ ಜಮಾನದಲ್ಲಿಲ್ಲ. ಅದರಂತೆ ಬಾಲಿವುಡ್‌ನ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಕೂಡ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೊನ್ನೆಯಷ್ಟೇ ರಾಷ್ಟ್ರಾದ್ಯಂತ 71ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿತ್ತು. ಈ ಬೆನ್ನಲ್ಲೇ ಪ್ರಿಯಾಂಕ ಚೋಪ್ರಾ ಕೂಡ ಸ್ವಾತಂತ್ರ್ಯೋತ್ವವಕ್ಕೆ ಟ್ವಿಟ್ಟರ್‌ನಲ್ಲಿ ಶುಭಕೋರಿದ್ದರು. ಇದಿಷ್ಟೇ ಆಗಿದ್ದರೆ ಬಹುಶಃ ಇದು ಸುದ್ದಿಯಾಗುತ್ತಿರಲಿಲ್ಲ.

ವಿದೇಶಿಯರೇ ಭಾರತೀಯ ಸಂಸ್ಕೃತಿಗೆ ಮನಸೋತು ಇಲ್ಲಿನ ಉಡುಗೆ ತೊಟ್ಟು ಸಂಭ್ರಮಿಸುವ ಹೊತ್ತಿದು. ಇದಕ್ಕೆ ಉದಾಹರಣೆ ಎಂಬಂತೆ ದೆಹಲಿಯಲ್ಲಿರುವ ಅಮೆರಿಕಾದ ರಾಯಭಾರಿ ಮೇರಿ ಕೆ ಕಾರ್ಲಸನ್‌ ಟ್ವಿಟ್ಟರ್‌ ಮೂಲಕ ಸೀರೆ ಹುಡುಕಾಟದ ಅಭಿಯಾನ ನಡೆಸಿ, ಅದರಲ್ಲಿ ಆಯ್ಕೆಯಾದ ಕಾಂಜೀವರಂ ಸೀರೆಯನ್ನು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಉಟ್ಟು ಸಂಭ್ರಮಿಸಿ ಭಾರತದ ಸ್ವಾತಂತ್ರ್ಯೋತ್ಸವಕ್ಕೆ ಅಮೆರಿಕ ಸೂಚಿಸುವ ಗೌರವವನ್ನು ಎತ್ತಿತೋರಿದ್ದರು. ಹೀಗಿರುವಾಗ ಭಾರತದವರೇ ಆಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವವಂತವರೇ ರಾಷ್ಟ್ರೀಯ ದಿನಾಚರಣೆ ವೇಳೆಯಲ್ಲಾದರೂ ಗೌರವ ಸೂಚಕವಾಗಿ ನಡೆದುಕೊಳ್ಳಬೇಕಲ್ಲವೇ?.


ಸ್ವಾತಂತ್ರ್ಯ ದಿನ ಆಚರಣೆಯಂದು ಅಮೆರಿಕದಲ್ಲಿದ್ದ ಬಾಲಿವುಡ್ ಬೆಡಗಿ ಪ್ರಿಯಾಂಕಾ ಟೀ ಶರ್ಟ್ ಮೇಲೆ ತ್ರಿವರ್ಣ ಧ್ವಜ ಬಣ್ಣದ ಶಾಲು ಹಾಕಿ, ಮೈ ಹಾರ್ಟ್‌ ಬಿಲಾಂಗ್ಸ್‌ ಟು ಇಂಡಿಯಾ ಎಂದು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿ ಟ್ವೀಟ್‌ ಮಾಡಿದ್ದರು. ಇದೇ ಈಗ ಆಕೆಯ ಇನ್ಸ್‌ಸ್ಟಾಗ್ರಾಮ್‌ ಅಭಿಮಾನಿಗಳನ್ನು ಕೆರಳುವಂತೆ ಮಾಡಿದೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದ ಪ್ರಿಯಾಂಕ ಚೋಪ್ರಾ, ಮೊಣಕಾಲುದ್ದ ಬಟ್ಟೆ ಧರಿಸಿದ್ದರು. ಇದು ಪ್ರಧಾನಿಗೆ ಅಗೌರವ ಸೂಚಿಸಿದಂತೆ ಎಂದು ಜನರಿಂದ ಬೈಯಿಸಿಕೊಂಡಿದ್ದರು. ಅದೇ ರೀತಿ ಈಗಲೂ ಪ್ರಿಯಾಂಕ ಎಡವಟ್ಟು ಮಾಡಿಕೊಂಡಿದ್ದಾರೆ.
ದಯಮಾಡಿ ಭಾರತಕ್ಕೆ ಮರಳಬೇಡ, ನಿನ್ನಲ್ಲಿ ಸೀರೆ ಇಲ್ಲವೇ? ಸಲ್ವಾರ್‌ ಚೂಡಿದಾರ್‌ ಇರಲಿಲ್ಲವೇ? ತ್ರಿವರ್ಣ ನಿನ್ನ ದುಪ್ಪಟ್ಟ ಅಲ್ಲ ಎನ್ನುವ ಜ್ಞಾನವಿಲ್ಲವೇ? ಎನ್ನುವ ಆಕ್ರೋಶದ ಕಮೆಂಟುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಿಯಾಂಕಾಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕನಿಷ್ಠ ಪಕ್ಷ ಸ್ವಾತಂತ್ರ್ಯ ದಿನಾಚರಣೆಯಂತಹ ಸಂದರ್ಭದಲ್ಲಾದರೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತಹ ಉಡುಗೆ ತೊಟ್ಟು ಶುಭ ಕೋರಬಹುದಿತ್ತು. ಟೀ ಷರ್ಟ್‌ ಮೇಲೆ ತ್ರಿವರ್ಣ ಧ್ವಜ ಬಣ್ಣದ ಶಾಲು ಹೊದ್ದಿರುವುದು ರಾಷ್ಟ್ರಧ್ವಜಕ್ಕೆ ತೋರುವ ಅಗೌರವ. ಭಾರತಕ್ಕೆ ಬರದೆಯೇ ಎಲ್ಲೋ ಇದ್ಕೊಂಡು ಈ ರೀತಿ ಮಾಡಿರುವುದರಿಂದ ಆಕೆಯ ಅಭಿಮಾನಿಗಳು ಕೋಪಗೊಂಡಿದ್ದಾರೆ. (ಏಜೆನ್ಸೀಸ್‌)

Leave a Reply

Your email address will not be published. Required fields are marked *

Back To Top