Saturday, 24th March 2018  

Vijayavani

Breaking News

ಬಿಎಮ್​ಟಿಸಿಯಿಂದ ಬಿಪಿಎಲ್​​ ಕಾರ್ಡ್​ದಾರರಿಗೆ ರಿಯಾಯಿತಿ ದರದಲ್ಲಿ ಬಸ್​ಪಾಸ್?

Wednesday, 15.11.2017, 1:52 PM       No Comments

>> ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬಿಎಂಟಿಸಿ ನಿಗಮ

ಬೆಂಗಳೂರು: ಬಿಎಂಟಿಸಿಯಿಂದ ಪ್ರಯಾಣಿಕರಿಗೊಂದು ಸಿಹಿ ಸುದ್ದಿ ಬಂದಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೊಸ ಯೋಜನೆಯೊಂದನ್ನು ತರಲು ಯೋಚಿಸುತ್ತಿದೆ.

ಬಿಪಿಎಲ್ ಕಾರ್ಡ್​ದಾರರಿಗೆ ಇನ್ನುಮುಂದೆ ರಿಯಾಯಿತಿ ದರದಲ್ಲಿ ಬಸ್​ಪಾಸ್ ಸಿಗಲಿದೆ. ದಿಗ್ವಿಜಯ ನ್ಯೂಸ್​ಗೆ ದೊರೆತಿರುವ ಉನ್ನತ ಮೂಲಗಳ ಮಾಹಿತಿಗಳ ಪ್ರಕಾರ ಇನ್ನುಮುಂದೆ ಬಿಪಿಎಲ್ ಕಾರ್ಡ್​ದಾರರಿಗೆ ರಿಯಾಯಿತಿ ದರದಲ್ಲಿ ಬಸ್​ಪಾಸ್ ನೀಡಲು ಬಿಎಂಟಿಸಿ ನಿರ್ಧರಿಸಿದೆ. ಈ ಕುರಿತು ಬಿಎಂಟಿಸಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ.

ಸದ್ಯ ಮಾಸಿಕ ಬಿಎಂಟಿಸಿ ಬಸ್​ ಪಾಸ್​ ದರ 1050 ರೂ.ಇದೆ. ಪ್ರಸ್ತಾವನೆಗೊಂಡ ಯೋಜನೆ ಜಾರಿಯಾದಲ್ಲಿ ಬಿಪಿಎಲ್ ಕಾರ್ಡ್​ದಾರರಿಗೆ 500 ರೂ.ಗೆ ಪಾಸ್​ ಸಿಗಲಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top