Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಬ್ಲೂವೇಲ್​ ಆನ್​ಲೈನ್​ ಗೇಮ್​ ಸನ್ನಿಗೆ ಪಶ್ಚಿಮ ಬಂಗಾಳದ ಬಾಲಕ ಬಲಿ

Sunday, 13.08.2017, 11:53 AM       No Comments

ಕೋಲ್ಕತ: ಡೆಡ್ಲಿ ಬ್ಲೂ ವೇಲ್​ ಆನ್​ ಲೈನ್​ ಗೇಮ್​ ವಿರುದ್ಧ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಆದರೂ ಗೇಮ್​ ಆಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಅದರ ದುಷ್ಪರಿಣಾಮಗಳಿಗೆ ತುತ್ತಾಗುವವರೂ ಹೆಚ್ಚುತ್ತಿದ್ದಾರೆ. ಈಗ ಪಶ್ಚಿಮ ಬಂಗಾಳದ ಬಾಲಕನೊಬ್ಬ ಬ್ಲೂವೇಲ್​ ಗೇಮ್​ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾನೆ.

ಪಶ್ಚಿಮ ಬಂಗಾಳ ಜಿಲ್ಲೆಯ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಆನಂದ್​ಪುರ ಪಟ್ಟಣದಲ್ಲಿ ಅಂಕನ್​ ಡೇ ಎಂಬ ಬಾಲಕ ಬ್ಲೂ ವೇಲ್​ ಗೇಮ್​ನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಂಕನ್​ ಡೇ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಶನಿವಾರ ಸಂಜೆ ಆತ ಶಾಲೆಯಿಂದ ಬಂದ ನಂತರ ಹಲವು ಗಂಟೆಗಳ ಕಾಲ ತನ್ನ ಕಂಪ್ಯೂಟರ್​ ಮುಂಭಾಗದಲ್ಲಿ ಕುಳಿತಿದ್ದ. ಆನಂತರ ಆತ ಸ್ನಾನಕ್ಕೆ ತೆರಳಿ, ಕುಸಿದು ಬಿದ್ದಿದ್ದ. ಇದನ್ನು ಗಮನಿಸಿದ ಆತ ಪೋಷಕರು ಅಂಕನ್​ ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆತ ಮೃತಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಅಂಕನ್​ ಬ್ಲೂವೇಲ್​ ಗೇಮ್​ ಆಡುತ್ತಿದ್ದ ಎಂದು ಆತ ಸ್ನೇಹಿತರು ತಿಳಿಸಿದ್ದಾರೆ ಎಂದು ಆನಂದಪುರದ ಎಸ್​ಪಿ ಭಾರತಿ ಘೋಷ್​ ತಿಳಿಸಿದ್ದಾರೆ.

ತಪ್ಪಿದ ಅನಾಹುತ:

ಮತ್ತೊಂದು ಪ್ರಕರಣದಲ್ಲಿ ಡೆಹ್ರಾಡೂನ್​ನಲ್ಲಿ ಶಾಲೆಯ ಆಡಳಿತದ ಮುಂಜಾಗ್ರತಾ ಕ್ರಮಗಳಿಂದಾಗಿ ಓರ್ವ ಬಾಲಕ ಪ್ರಾಣ ಕಳೆದುಕೊಳ್ಳುವುದು ಸ್ವಲ್ಪದರಲ್ಲಿ ತಪ್ಪಿದೆ. ಡೆಹ್ರಾಡೂನ್​ ಪ್ರಸಿದ್ಧ ಶಾಲೆಯಲ್ಲಿ 5 ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಇತ್ತೀಚೆಗೆ ಏಕಾಂಗಿಯಾಗಿರುತ್ತಿದ್ದ. ಜತೆಗೆ ಖಿನ್ನತೆಯಿಂದ ಬಳಲುತ್ತಿದ್ದ.

ಇದನ್ನು ಗಮನಿಸಿದ ಶಾಲೆಯ ಸಿಬ್ಬಂದಿ ಬಾಲಕನನ್ನು ವಿಚಾರಿಸಿದಾಗ ಆತ ಬ್ಲೂ ವೇಲ್​ ಗೇಮ್​ ಆಡುತ್ತಿದ್ದ ಎಂಬುದನ್ನು ಒಪ್ಪಿಕೊಂಡಿರುವುದಾಗಿ ಶಾಲೆಯ ಆಡಳಿತ ತಿಳಿಸಿದೆ.

ಇನ್ನು ಗುರುವಾರವಷ್ಟೇ ಇಂದೋರ್​ನ ಬಾಲಕನೊಬ್ಬ ಶಾಲೆಯ ಮೂರನೇ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top