Wednesday, 20th June 2018  

Vijayavani

ಐಟಿ ದೂರಿನಲ್ಲಿದೆ ಸ್ಫೋಟಕ ಮಾಹಿತಿ - ಎಐಸಿಸಿಗೆ ಕೋಟಿ ಕೋಟಿ ಕೊಟ್ಟಿದ್ರಾ ಡಿಕೆಶಿ - ಹವಾಲಾ ವ್ಯವಹಾರದಲ್ಲಿ ಡಿಕೆಶಿ ಹೆಸರು        ಉಪ್ಪು-ಹುಳಿ, ಖಾರ ಇಲ್ಲದ ಊಟ - ನಾನ್​ ವೆಜ್​​ನಿಂದ ದೂರ ದೂರ - ಪ್ರಕೃತಿ ಚಿಕಿತ್ಸಾಲಯದಲ್ಲಿ ಸಿದ್ದು ಫುಲ್ ಸಸ್ಯಹಾರಿ        ಕಾಶ್ಮೀರದಲ್ಲಿ ಯೋಧನ ಕಿಡ್ನಾಪ್​​​, ಹತ್ಯೆ ಪ್ರಕರಣ - ಮೃತನ ಮನೆಗೆ ರಕ್ಷಣಾ ಸಚಿವ ಭೇಟಿ - ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಿರ್ಮಲಾ ಸೀತಾರಾಮನ್​​        ರೈತ ಎಂದರೆ, ರಕ್ತ, ಬೆವರು ಸುರಿಸುವ ಅನ್ನದಾತ - ದೇಶದ ಅಭಿವೃದ್ಧಿಗೆ ದೇಶದ ರೈತರ ಕೊಡುಗೆ ಆಪಾರ - ರೈತರ ಜತೆ ಪ್ರಧಾನಿ ಮೋದಿ ಸಂವಾದ        ಬಿಸಿಲು ಬರೋವರೆಗೂ ಬಯಲಲ್ಲೇ ಪಾಠ - ಕುಸಿಯುತ್ತಿರೋ ಶಾಲೆಯಲ್ಲೇ ವಿದ್ಯಾರ್ಥಿಗಳ ನರಳಾಟ - ದಾವಣಗೆರೆಯ ಸರ್ಕಾರಿ ಶಾಲೆಗೆ ಬೇಕಿದೆ ಕಾಯಕಲ್ಪ        ಕಣಿವೆ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಹಿನ್ನೆಲೆ - ಮೈತ್ರಿ ಮುರಿದ ಬೆನ್ನಲ್ಲೇ ರಾಜ್ಯಪಾಲರ ಆಡಳಿತ ಜಾರಿ- ಮಧ್ಯಾಹ್ನ 2:30ಕ್ಕೆ ಅಧಿಕಾರಿಗಳ ಸಭೆ ಕರೆದ ಗವರ್ನರ್       
Breaking News

ಮತಪಟ್ಟಿ ಕರ್ತವ್ಯ ಲೋಪ: 15 ಬಿಎಲ್​ಒಗಳು ಅಮಾನತು

Saturday, 13.01.2018, 3:49 PM       No Comments

ಧಾರವಾಡ: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ 15 ಜನ ಬೂತ್​ ಮಟ್ಟದ ಅಧಿಕಾರಿಗಳನ್ನು (ಬಿಎಲ್​ಒ) ಅಮಾನತುಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ ಎಸ್​. ಬಿ. ಬೊಮ್ಮನಹಳ್ಳಿ ಸೂಚಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ವೇಳೆಗೆ ಮತದಾರರಿಗೆ ಸಹಾಯ ಮಾಡಲು ಬಿಎಲ್​ಒಗಳನ್ನು ನೇಮಿಸಲಾಗಿತ್ತು. ಚುನಾವಣಾ ಅಧಿಕಾರಿಗಳಿಂದ ವರದಿ ಪಡೆದ ವೇಳೆ 15 ಬಿಎಲ್​ಒಗಳ ಕರ್ತವ್ಯ ಲೋಪ ಬಹಿರಂಗಗೊಂಡಿದೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿರುವ ಜಿಲ್ಲಾಧಿಕಾರಿಗಳು ಅಮಾನತಿಗೆ ಸೂಚಿಸಿದ್ದು, ಮಂಗಳವಾರದ ವೇಳೆಗೆ ಆದೇಶ ಹೊರಬೀಳಲಿದೆ.

ಎಲ್ಲ ರಾಜಕೀಯ ಪಕ್ಷಗಳ ಶಿಫಾರಸ್ಸಿನ ಮೇಲೆ ಇವರನ್ನು ನೇಮಕ ಮಾಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಸ್ಥಳೀಯವಾಗಿ ಸಹಾಯವಾಗಲೆಂದು ಚುನಾವಣಾ ಆಯೋಗ ಈ ಅವಕಾಶ ಮಾಡಿಕೊಟ್ಟಿದೆ. ಜಿಲ್ಲೆಯಲ್ಲಿ ಜ. 22ರ ವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶವಿದೆ.

Leave a Reply

Your email address will not be published. Required fields are marked *

Back To Top