Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ಬಿಜೆಪಿಗೆ ಜಯನಗರ ಭೀತಿ

Thursday, 21.06.2018, 3:04 AM       No Comments

| ರಮೇಶ ದೊಡ್ಡಪುರ

ಬೆಂಗಳೂರು: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೆಲವೇ ಸೀಟುಗಳ ಅಂತರದಿಂದ ಅಧಿಕಾರ ತಪ್ಪಿಸಿಕೊಂಡಿದ್ದ ಬಿಜೆಪಿಗೆ ಈಗ ’ಜಯನಗರ ಮಾದರಿ’ ಆತಂಕ ಎದುರಾಗಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್-ಬಿಎಸ್​ಪಿ ಮಹಾಮೈತ್ರಿ ರಚಿಸಿಕೊಂಡು, ಜಯನಗರ ಕ್ಷೇತ್ರದ ಚುನಾವಣೆ ಮಾದರಿಯಲ್ಲೇ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಬಿಜೆಪಿ ಅನೇಕ ಕ್ಷೇತ್ರಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಗುಂಪುಗಾರಿಕೆ, ಆಂತರಿಕ ಕಚ್ಚಾಟಗಳನ್ನು ಬಿಟ್ಟು ಈಗಿಂದಲೇ ಒಗ್ಗಟ್ಟಾಗಿ ತಂತ್ರಗಾರಿಕೆ ರೂಪಿಸದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭಾರಿ ಆಘಾತ ಎದುರಿಸುವ ಸಾಧ್ಯತೆಯಿದೆ.

ಮಿತ್ರಪಕ್ಷಗಳು 2014ರ ಚುನಾವಣೆಯಲ್ಲಿ ಪಡೆದ ಮತ ಪ್ರಮಾಣದಲ್ಲಿ ಶೇ. 10 ಹೆಚ್ಚಳ ಮಾಡಿಕೊಂಡರೂ, ಬಿಜೆಪಿ ಕೈಯಲ್ಲಿರುವ 17 ಲೋಕಸಭಾ ಸ್ಥಾನಗಳು 6ಕ್ಕೆ ಕುಸಿಯಲಿವೆ.

ಮೈಸೂರು, ದಾವಣಗೆರೆ ಕ್ಷೇತ್ರ ಕೈ ವಶ ಸುಲಭ: ಮೂರೂ ಪಕ್ಷಗಳು ಒಟ್ಟಾದಲ್ಲಿ ಬಿಜೆಪಿಗೆ ನೇರ ಅಪಾಯವಿರುವುದು ಮೈಸೂರು ಹಾಗೂ ದಾವಣಗೆರೆ ಕ್ಷೇತ್ರಕ್ಕೆ. ಈ ಎರಡೂ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳು 2014ರಲ್ಲಿ ಪಡೆದಷ್ಟು ಮತ ಪಡೆದರೂ ಬಿಜೆಪಿಗೆ ಹಿನ್ನಡೆ ಆಗಲಿದೆ.

ಕಾಂಗ್ರೆಸ್​ಗೆ ಹೆಚ್ಚು ಲಾಭ: ರಾಜ್ಯದಲ್ಲಿ ಮಹಾಮೈತ್ರಿಯಿಂದ ಕಾಂಗ್ರೆಸ್​ಗೆ ಲಾಭವಾಗಲಿದೆ. ಈ ಹಿಂದೆ ಜೆಡಿಎಸ್​ನ ಎಚ್.ಡಿ. ಕುಮಾರಸ್ವಾಮಿ ಪ್ರತಿನಿಧಿಸಿದ್ದ ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಡಿ.ಕೆ. ಸುರೇಶ್​ಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿರುವುದರಿಂದ ಜೆಡಿಎಸ್​ನಿಂದ ಈ ಕ್ಷೇತ್ರ ಕೈತಪು್ಪತ್ತದೆ. ಬಿಜೆಪಿ ಜಯಿಸಿರುವ 17 ಕ್ಷೇತ್ರಗಳಲ್ಲಿ ಮೈಸೂರು ಮತ್ತು ಶಿವಮೊಗ್ಗದಲ್ಲಿ ಮಾತ್ರ ಜೆಡಿಎಸ್ ಶೇ. 10ಕ್ಕಿಂತ ಹೆಚ್ಚಿನ ಮತ ಪಡೆದಿದೆ. ಈ ಎರಡೂ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಪಡೆದರೆ ಗೆಲುವಿಗೆ ಪೈಪೋಟಿ ನೀಡಬಹುದು. ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಮಹಾಮೈತ್ರಿ ಸರ್ಕಾರ ರೂಪುಗೊಂಡರೆ ಆಗುವ ಲಾಭ ಹೊರತುಪಡಿಸಿ, ರಾಜ್ಯದ ಮಟ್ಟಿಗಂತೂ ಜೆಡಿಎಸ್​ಗೆ ಆಗುವ ಲಾಭ ಅಷ್ಟಕ್ಕಷ್ಟೇ.

ಜಯನಗರ ಮಾದರಿ: ಜಯನಗರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಸಲಾಯಿತು. ಬಿಜೆಪಿಯ ಆರು ಕಾರ್ಪೆರೇಟರ್​ಗಳಲ್ಲಿ ಒಬ್ಬ ಕಾಂಗ್ರೆಸ್ ಪರ ಪ್ರಚಾರ ಮಾಡಿದರು. ಎರಡು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿಜೆಪಿ ಅಭ್ಯರ್ಥಿ ನಿಧನರಾದ ಹಿನ್ನೆಲೆಯಲ್ಲಿ ಅನುಕಂಪದ ಅಲೆ ಹೊರತಾಗಿಯೂ ಬಿಜೆಪಿ ಸೋತು, ಕಾಂಗ್ರೆಸ್ ಜಯಿಸಿತು.

ಎಚ್ಚರ ತಪ್ಪಿದರೆ ಸಂಕಷ್ಟ ಖಚಿತ

2014ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಸ್ಥಾನ ಗಳಿಸಿದ್ದವು. 2009ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಶೇ. 1.74 ಹಾಗೂ ಕಾಂಗ್ರೆಸ್ ಶೇ. 3.5 ಮತ ಪ್ರಮಾಣ ಹೆಚ್ಚಿಸಿಕೊಂಡಿವೆ. ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಅತ್ಯಧಿಕ ಹೆಚ್ಚಳವಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ 2009ರಲ್ಲಿ ಶೇ. 17.48 ಮತ ಪಡೆದು ಸೋಲುಂಡಿದ್ದ ಕಾಂಗ್ರೆಸ್ 2014ರಲ್ಲಿ ಶೇ. 44.84 ಅಂದರೆ ಶೇ. 27.36 ಹೆಚ್ಚು ಮತ ಪಡೆಯಿತು. ಅದೇ ರೀತಿ ತುಮಕೂರಿನಲ್ಲಿ ಕಾಂಗ್ರೆಸ್ ಮತ ಪ್ರಮಾಣದಲ್ಲಿ ಶೇ. 19.26, ಚಿತ್ರದುರ್ಗದಲ್ಲಿ ಶೇ. 14.44 ಹೆಚ್ಚಳ ಆಗಿತ್ತು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಎಸ್​ಪಿ ಒಟ್ಟಾಗಿ ಕನಿಷ್ಠ ಶೇ.10 ಮತ ಪ್ರಮಾಣ ಹೆಚ್ಚಳವಾದರೂ ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಲಿದೆ. ಜಯನಗರ ಕ್ಷೇತ್ರದಲ್ಲಾದಂತೆ ಸ್ವಲ್ಪ ಎಚ್ಚರ ತಪ್ಪಿದರೂ, ದಕ್ಷಿಣ ಭಾರತದಲ್ಲಿ ಭದ್ರ ನೆಲೆ ಹೊಂದಿದೆ ಎಂಬ ಹೆಗ್ಗಳಿಕೆ ಅಳಿಸಿ ಹೋಗಲಿದೆ ಎಂಬುದು ಹಿಂದಿನ ಚುನಾವಣೆಯ ಅಂಕಿ-ಅಂಶಗಳಿಂದ ತಿಳಿದು ಬರುತ್ತದೆ.

ಲೋಕಸಭೆಯಲ್ಲಿ ಜೆಡಿಎಸ್ ಸಪ್ಪೆ

2004-2014ರವರೆಗಿನ 3 ಸಂಸತ್ ಚುನಾವಣೆಯಲ್ಲಿ ಜೆಡಿಎಸ್ ಕ್ರಮವಾಗಿ ಶೇ. 20.45, ಶೇ. 13.57, ಶೇ. 11.07 ಮತ ಪಡೆಯುತ್ತ ಕೆಳಮುಖವಾಗಿ ಸಾಗಿದೆ.

Leave a Reply

Your email address will not be published. Required fields are marked *

Back To Top