Saturday, 16th December 2017  

Vijayavani

1. ಭಯೋತ್ಪಾದನೆಗೆ ಒತ್ತಡ ಆರೋಪ ವಿಚಾರ- ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರ- ಬಾಗಲಕೋಟೆ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ 2. ಎಐಸಿಸಿ ಅಧ್ಯಕ್ಷರಾಗಿ ಇಂದು ರಾಹುಲ್​​​ ಅಧಿಕಾರ- ದೆಹಲಿ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ- ರಾಹುಲ್​​​​ ಮುಂದಿದೆ ನೂರಾರು ಸವಾಲು 3. ಸುನಿಲ್​​ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪ್ರಕರಣ- ಇಂದು ಬೆಳಗೆರೆ ಜಾಮೀನು ಅರ್ಜಿ ವಿಚಾರಣೆ- ಇತ್ತ ಜಯದೇವದಲ್ಲಿ ಮುಂದುವರಿದ ಚಿಕಿತ್ಸೆ 4. ಕಲಬುರಗಿಯತ್ತ ಸಾಗಿದ ಸಿಎಂ ಸಾಧನ ಸಂಭ್ರಮ- ಜೇವರ್ಗಿಯಲ್ಲಿ ಹಲವು ಕಾಮಗಾರಿಗೆ ಚಾಲನೆ- ಸಿಎಂಗೆ ಹಲವು ಸಚಿವರಿಂದ ಸಾಥ್​​​ 5. ಸನ್ನಿ ನೈಟ್​​ಗೆ ಸರ್ಕಾರದ ಬ್ರೇಕ್​- ನಿರ್ಧಾರದ ವಿರುದ್ಧ ಪರ-ವಿರುದ್ಧ ಚರ್ಚೆ- ಸಚಿವರ ಕ್ರಮಕ್ಕೆ ಕೆಂಡಕಾರಿದ ಅಭಿಮಾನಿಗಳು
Breaking News :

ದಲಿತರಿಗೆ ಬಿಎಸ್​ ಯಡಿಯೂರಪ್ಪ ನಿವಾಸದಲ್ಲಿ ಆತಿಥ್ಯ

Friday, 25.08.2017, 12:33 PM       No Comments

ಬೆಂಗಳೂರು: ಕಳೆದ ಮೇನಲ್ಲಿ ರಾಜ್ಯ ಪ್ರವಾಸ ನಡೆಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಅವರು ದಲಿತರ ಮನೆಗಳಲ್ಲಿ ಭೋಜನ ಮಾಡಿದ್ದರು. ಈಗ ಯಡಿಯೂರಪ್ಪ ಅವರು ತಮ್ಮ ನಿವಾಸಕ್ಕೆ ಕರೆಸಿ ಸತ್ಕರಿಸಲು ತೀರ್ಮಾನಿಸಿದ್ದಾರೆ.

ಆಗಸ್ಟ್​ 28 ರಂದು ಯಡಿಯೂರಪ್ಪ ಅವರು ಡಾಲರ್ಸ್​ ಕಾಲೋನಿಯ ತಮ್ಮ ನಿವಾಸದಲ್ಲಿ ಭೋಜನ ಕಾರ್ಯಕ್ರಮ ಆಯೋಜಿಸಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 60 ಕ್ಕೂ ಹೆಚ್ಚು ದಲಿತ ಕುಟುಂಬಗಳು ಭಾಗವಹಿಸಲಿದ್ಧಾರೆ. ಅವರಿಗೆ ಯಡಿಯೂರಪ್ಪ ಅವರು ವಿಶೇಷ ಆತಿಥ್ಯ ನೀಡಲಿದ್ದಾರೆ.

ಮೇ. 18 ರಿಂದ 29 ರವರೆಗೆ ಜನ ಸಂಪರ್ಕ ಅಭಿಯಾನದ ಅಡಿ ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಅವರು ದಲಿತರ ಮನೆಗಳಲ್ಲಿ ಉಪಾಹಾರ ಸೇವಿಸಿದ್ದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top