Monday, 19th February 2018  

Vijayavani

ಶ್ರವಣಬೆಳಗೊಳದ ಮಹಾಮಜ್ಜನದಲ್ಲಿ ಮೋದಿ - ಮೆಟ್ಟಿಲುಗಳ, ಬಾಹುಬಲಿ ಆಸ್ಪತ್ರೆ ಉದ್ಘಾಟನೆ - ಚಾವುಂಡರಾಯ ವೇದಿಕೆಯಲ್ಲಿ ಭಾಷಣ.        ಮೈಸೂರಿನಲ್ಲಿ ಪರಿವರ್ತನಾ ಯಾತ್ರೆಗೆ ಕ್ಷಣಗಣನೆ - ಸಿಎಂ ತವರಲ್ಲಿ ಅಬ್ಬರಿಸಲಿದ್ದಾರೆ ಮೋದಿ - ಸಿದ್ದರಾಮಯ್ಯಗೆ ಟಾಂಗ್ ಕೊಡ್ತಾರಾ ಪ್ರಧಾನಿ?        ಮೋದಿ ಯಾತ್ರೆಗೆ ಬೆದರಿದ್ರಾ ಸಿದ್ದರಾಮಯ್ಯ - ಪ್ರಧಾನಿ ಪ್ರವಾಸದ ವೇಳೆಯೇ ರೌಂಡ್ಸ್ - ಜನರ ಸಮಸ್ಯೆ ಆಲಿಸಿದ ಸಿಎಂ.        ದರ್ಪ ಮೆರೆದಿದ್ದ ಗೂಂಡಾ ಅರೆಸ್ಟ್ - ಮಹಮ್ಮದ್‌ ವಿರುದ್ಧ ಸೆಕ್ಷನ್ 307 ಕೇಸ್ ದಾಖಲು - ಠಾಣೆ ಎದುರು ಕಾರ್ಯಕರ್ತರ ಹೈಡ್ರಾಮಾ.        ಕೆ.ಆರ್‌.ಆಸ್ಪತ್ರೆಯಲ್ಲಿ ಕೆ.ಎಸ್‌. ಪುಟ್ಟಣ್ಣಯ್ಯ ಪಾರ್ಥಿವ ಶರೀರ - ವಿದೇಶದಿಂದ ಪುತ್ರಿ ಬಂದ ಬಳಿಕ ಬುಧವಾರ ಅಂತ್ಯಕ್ರಿಯೆ - ಗಣ್ಯರಿಂದ ಸಂತಾಪ.       
Breaking News

ರಾಹುಲ್‌ ಗಾಂಧಿ ಮಕ್ಕಳ ಆಟ ಆಡುವುದು ಬೇಡ: ಬಿ ಎಸ್‌ ಯಡಿಯೂರಪ್ಪ

Tuesday, 13.02.2018, 6:19 PM       No Comments

ಶಿವಮೊಗ್ಗ: ಮಾಂಸಾಹಾರ ಸೇವಿಸಿ ದೇಗುಲಕ್ಕೆ ರಾಹುಲ್‌ ಗಾಂಧಿ ಭೇಟಿ ಆರೋಪ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ರಾಹುಲ್‌ ಗಾಂಧಿ ಎಲ್ಲಿಗೆ ಬೇಕಾದರೂ ಹೋಗಲಿ, ಏನು ಬೇಕಾದರೂ ತಿನ್ನಲಿ. ಅವರ ಬಗ್ಗೆ ನಾನೇನು ಹೇಳಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.

ನಗರದ ಮ್ಯಾಕ್ಸ್‌ ಆಸ್ಪತ್ರೆಗೆ ಭೇಟಿ ನೀಡಿ, ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದವರ ಆರೋಗ್ಯ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ತೊಲಗಲಿದೆ ಎಂದರು.

ರಾಹುಲ್‌ ಗಾಂಧಿ ಎಲ್ಲಿಗೆ ಹೋದರು, ಏನನ್ನು ತಿಂದರೂ ತೊಂದರೆಯಿಲ್ಲ. ಆದರೆ, ಅವರು ಮಕ್ಕಳ ಆಟ ಆಡುವುದು ಬೇಡ. ರಾಹುಲ್‌ ಗಾಂಧಿ ಪ್ರಚಾರಕ್ಕೆ ಹೋದಲ್ಲೆಲ್ಲಾ ಕಾಂಗ್ರೆಸ್‌ ನೆಲಕಚ್ಚಿದೆ. ಭ್ರಷ್ಟ ಸಿಎಂ ಮತ್ತು ಹಗರಣಗಳ ಆರೋಪ ಹೊತ್ತಿರುವ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಬಿಜೆಪಿಯನ್ನು ಟೀಕೆ ಮಾಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ನೆಲಕಚ್ಚುವುದು ಖಂಡಿತ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್‌)

Leave a Reply

Your email address will not be published. Required fields are marked *

Back To Top