Tuesday, 16th January 2018  

Vijayavani

ಮಹದಾಯಿ ಉಳಿಸಿಕೊಳ್ಳಲು ಏನು ಬೇಕಾದ್ರೂ ಮಾಡ್ತೀವಿ - ಮತ್ತೆ ಕ್ಯಾತೆ ತೆಗೆದ ಪಾಲ್ಯೇಕರ್​ - ಇತ್ತ ಗೋವಾ ಸಚಿವನ ವಿರುದ್ಧ ಪಾಟೀಲ್ ಕಿಡಿ        ನನ್ನ ವಿರುದ್ಧ ಸುಳ್ಳು ಕೇಸ್​ ದಾಖಲಿಸಲು ಯತ್ನ - ಕೇಂದ್ರ ಸರ್ಕಾರದ ವಿರುದ್ಧ ತೊಗಾಡಿಯಾ ಕಿಡಿ - ಕಣ್ಣೀರಿಟ್ಟು ಅಚ್ಚರಿ ಮೂಡಿಸಿದ ಫೈರ್ ಬ್ರ್ಯಾಂಡ್​        ಆನೆಗಳ ಹಿಂಡಿನಿಂದ ತಪ್ಪಿಸಿಕೊಂಡು ಬಾವಿಗೆ ಬಿದ್ದ ಮರಿ ಆನೆ - ಮರಿ ಮೇಲೆತ್ತಲು ಅರಣ್ಯ ಇಲಾಖೆ ಹರ ಸಾಹಸ - ತಮಿಳುನಾಡಿನ ರಾಯಕೋಟೆ ಬಳಿ ಘಟನೆ        ಭಾರತ ಪ್ರವಾಸದಲ್ಲಿ ಇಸ್ರೇಲ್​ ಪ್ರಧಾನಿ - ಮುಂಬೈಗೆ ಬಂದಿಳಿದ ಮುಂಬೈ ದಾಳಿ ಸಂತ್ರಸ್ತ ಮೋಶೆ - ಭಾರತಕ್ಕೆ ಬಂದಿದ್ದು ಖುಷಿ ತಂದಿದೆ ಎಂದ ಬಾಲಕ        ತಮಿಳುನಾಡಿನಲ್ಲಿ ಮುಂದುವರಿದ ಪೊಂಗಲ್ ಸಡಗರ - ಅಳಂಗನಲ್ಲೂರಿನಲ್ಲಿ ಜಲ್ಲಿಕಟ್ಟು ಕಿಕ್​ - ಸಿಎಂ, ಡಿಸಿಎಂ ರಿಂದ ಕ್ರೀಡೆ ಉದ್ಘಾಟನೆ       
Breaking News :

ಅವರು ಹಿಂದುತ್ವದ ಉಗ್ರವಾದಿಗಳು ಎಂದು ಮಾತಿನ ಮಗ್ಗಲು ಬದಲಿಸಿದ ಸಿಎಂ

Thursday, 11.01.2018, 1:53 PM       No Comments

ಚಾಮರಾಜನಗರ: ಬಿಜೆಪಿ, ಆರ್​ಎಸ್​ಎಸ್​ ಹಾಗೂ ಬಜರಂಗದಳದವರು ಉಗ್ರಗಾಮಿಗಳು ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ತುಸು ಮಾತಿನ ಧಾಟಿ ಬದಲಿಸಿ ಅವರು ಹಿಂದುತ್ವದ ಉಗ್ರವಾದಿಗಳು ಎಂದಿದ್ದಾರೆ.

ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಅದೇ ಹೇಳಿಕೆಯನ್ನು ಪುನರುಚ್ಛರಿಸಿದ ಅವರು, ನಾನು ಅವರನ್ನು ಹಿಂದುತ್ವದ ಉಗ್ರವಾದಿಗಳೆಂದು ಹೇಳಿದ್ದೇನೆ ಎಂದಿದ್ದಾರೆ. ನಾನೂ ಕೂಡ ಹಿಂದುನೇ. ಆದರೆ, ಇವರು ಮುನಷ್ಯತ್ವವಿಲ್ಲದ ಹಿಂದುಗಳು ಎಂದು ಟೀಕಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗ್ಗೆ 8.30ರಲ್ಲಿ ಮಾದಪ್ಪನ ದರ್ಶನ ಪಡೆದು ಸುದ್ದಿಗೋಷ್ಠಿ ನಡೆಸಿ ವಿವಾದಿತ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದರು.

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಗೆದ್ದರೆ ರಾಜಕೀಯ ನಿವೃತ್ತಿ ಎಂಬ ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ವಿ. ಸೋಮಣ್ಣ ರಾಜಕೀಯದಲ್ಲಿ ಇರಲಿ. ಆದರೆ, ಚುನಾವಣೆಯಲ್ಲಿ ಗೆಲ್ಲುವುದು ನಾವೇ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top