Monday, 11th December 2017  

Vijayavani

1. ಜೈಲಿನ ಆಸ್ಪತ್ರೆಯಲ್ಲಿ ಬೆಳಗೆರೆಗೆ ಚಿಕಿತ್ಸೆ – ಚೇತರಿಸಿಕೊಂಡ್ರೆ ಬ್ಯಾರಕ್‌ಗೆ ರವಾನೆ – ನೆಲದ ಮೇಲೆ ಕೂರಲು ರವಿ ಪರದಾಟ 2. ಕೊತ ಕೊತ ಕುದಿಯುತ್ತಿದೆ ಕುಮಟಾ – ಉಗ್ರ ಸ್ವರೂಪ ಪಡೆದ ಹಿಂದೂ ಸಂಘಟನೆಗಳ ಪ್ರತಿಭಟನೆ – ಆಕ್ರೋಶಕ್ಕೆ ಹೊತ್ತಿ ಉರಿದ ಐಜಿಪಿ ಕಾರು 3. ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ – ಪ್ರತಿಸ್ಪರ್ಧಿ ಇಲ್ಲದ್ದಕ್ಕೆ ಯುವರಾಜನಿಗೆ ಸಾರಥ್ಯ – ದೆಹಲಿಯಲ್ಲಿ ಕಾರ್ಯಕರ್ತರ ಸಂಭ್ರಾಮಾಚರಣೆ 4. ಮಂಡ್ಯದ ಸಂತೆಬಾಚಹಳ್ಳಿ ಕ್ರಾಸ್‌ ಬಳಿ ಭೀಕರ ಅಪಘಾತ – ಟ್ಯಾಂಕರ್ ಹರಿದು ಬೈಕ್ ಸವಾರರು ಸಾವು – ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪ್ರಕರಣ 5. ಸ್ಟೀಲ್‌ ಬ್ರಿಡ್ಜ್ ಹೋಯ್ತು ಮೆಟ್ರೋ ಬಂತು – ಏರ್‌ಪೋರ್ಟ್‌ಗೆ ರೈಲು ಬಿಡಲು ಸರ್ಕಾರದ ಒಪ್ಪಿಗೆ – ಮಹತ್ವದ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಅಸ್ತು
Breaking News :

ಒಕ್ಕಲಿಗರ ಮತದ ಮೇಲೆ ಚಾಣಕ್ಯನ ಕಣ್ಣು: ಇಂದು ಆದಿಚುಂಚನಗಿರಿ ಮಠಕ್ಕೆ ಭೇಟಿ

Sunday, 13.08.2017, 9:19 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಭಾನುವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ:

1. ವರ್ಷದ ಹಿಂದೆ ಹುತಾತ್ಮ ಸ್ಮಾರಕಕ್ಕೆ ಅಡಿಗಲ್ಲು- ಮಾತಾಗಿಯೇ ಉಳೀತು ಕೊಟ್ಟ ಭರವಸೆ- ಚಾಣಕ್ಯನ ಹಾದಿ ಕಾಯ್ತಿರುವ ಬೀದರ್‌ ಜನತೆ

2. 70ನೇ ಸ್ವಾತಂತ್ರ್ಯೋತ್ಸವಕ್ಕೆ ಬೆಂಗಳೂರು ಸಜ್ಜು- ಮಾಣಿಕ್ ಷಾ ಗ್ರೌಂಡ್‌, ಲಾಲ್‌ಬಾಗ್‌ಗೆ ಬಿಗಿ ಭದ್ರತೆ- ಸಿದ್ಧತೆ ಬಗ್ಗೆ ಪೊಲೀಸ್‌ ಆಯುಕ್ತರ ಸುದ್ದಿಗೋಷ್ಠಿ

3. ಎಣ್ಣೆ ಹೊಡೆದು ಪೊಲೀಸರ ಮೇಲೇ ಹಲ್ಲೆ- ವಿವೇಕನಗರದಲ್ಲಿ ನಾಲ್ವರು ಕುಡುಕರ ಕಿತಾಪತಿ- ಖಾಕಿ ಮೇಲೆ ಕೈಇಟ್ಟೋರಿಗೆ ಠಾಣೆಯಲ್ಲಿ ಫುಲ್ ರುಬ್ಬಿಂಗ್​

4. ತೆರೆ ಮರೆಗೆ ಸರಿದ ಶರವೇಗದ ಸರದಾರ- ವಿದಾಯದ ಓಟದಲ್ಲಿ ಗಾಯಗೊಂಡ ಬೋಲ್ಟ್- ಕೊನೆ ಸ್ಪರ್ಧೆಯಲ್ಲಿ ಕೋಲ್ಮಿಂಚಿಗೆ ಸೋಲು

5. ಆದಿಚುಂಚನಗಿರಿ ಮಠದಲ್ಲೇ ಅರ್ಧ ದಿನ- ಒಕ್ಕಲಿಗರ ಮತದ ಮೇಲೆ ಚಾಣಕ್ಯನ ಕಣ್ಣು- ಇತ್ತ ಷಾ ಭೇಟಿಗೆ ಬಂದ ಕೇಂದ್ರ ಸಚಿವರಿಗೆ ಅಡ್ಡಿ

ಬೆಂಗಳೂರು: ರಾಜ್ಯ ಪ್ರವಾಸದಲ್ಲಿರುವ ಅಮಿತ್ ಷಾ ಅವರು ತಮ್ಮ ಎರಡನೇ ದಿನದ ಸಮಯವನ್ನು ಧಾರ್ಮಿಕ ಮುಖಂಡರನ್ನು ಭೇಟಿ ಮಾಡಲು ನಿಗದಿಪಡಿಸಿದ್ದಾರೆ.

ಕುಮಾರಕೃಪಾ ಗೆಸ್ಟ್ ಹೌಸ್​ನಲ್ಲಿ ವಾಸ್ತವ್ಯ ಹೂಡಿರುವ ಅಮಿತ್ ಷಾ ಬೆಳಿಗ್ಗೆ ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ತೆರಳಿದ್ದಾರೆ. ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಸಿ. ಬಳಿಕ ಆದಿಚುಂಚನಗಿರಿ ಮಠಕ್ಕೆ ತೆರಳಲಿರುವ ಅಮಿತ್ ಷಾ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.

ಎರಡನೇ ದಿನದ ಅರ್ಧ ದಿನ ಪೂರ್ತಿ ಆದಿಚುಂಚನಗಿರಿ ಮಠದಲ್ಲಿ ಸಮಯ ಕಳೆಯಲಿರುವ ಅಮಿತ್ ಷಾ ನಿರ್ಧಾರ ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಬಳಿಕ ಶ್ರೀ ಶ್ರೀ ರವಿಶಂಕರ ಗುರೂಜಿ ಅವರನ್ನು ಭೇಟಿ ಮಾಡಲಿರುವ ಷಾ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಪೊಲೀಸರ ಮೇಲೆ ಡಿವಿಎಸ್​ ಗರಂ 

ಬಿಜೆಪಿ ಕಚೇರಿಯಲ್ಲಿ ಅಮಿತ್​ ಷಾ ರಾಜಕೀಯ ವ್ಯವಹಾರಗಳ ಸಮಿತಿ ಸಭೆಗೆ ಹಾಜರಾಗಲು ಬಿಜೆಪಿ ಕಚೇರಿಗೆ ಆಗಮಿಸಿದ ಕೇಂದ್ರ ಸಚಿವ ಸದಾನಂದ ಗೌಡರಿಗೆ ಇರಿಸುಮುರಿಸು ಉಂಟಾದ ಸನ್ನಿವೇಶ ಜರುಗಿತು.

ಸಭೆಗೆ ಹಾಜರಾಗುವ ವೇಳೆ ಕೇಂದ್ರ ಸಚಿವ ಸದಾನಂದಗೌಡರ ವಾಹನ ಪೊಲೀಸರು ತಡೆದಿದ್ದಾರೆ. ಅಮಿತ್​ ಷಾಗೆ ಝಡ್​ಪ್ಲಸ್ ಸೆಕ್ಯೂರಿಟಿ ಹಿನ್ನೆಲೆಯಲ್ಲಿ ಡಿವಿಎಸ್‌ ವಾಹನಕ್ಕೆ ತಡೆ ನೀಡಲಾಯಿತು. ಬಿಜೆಪಿ ಕಚೇರಿ ಬಳಿ ವಾಹನ ತಡೆದ ನಿಲ್ಲಿಸಿದ ಪೊಲೀಸರು. ಈ ವೇಳೆ 200 ಮೀಟರ್ ನಡೆದುಕೊಂಡೇ ಬಂದ ಡಿವಿಎಸ್. ಇದರಿಂದ ಸಿಟ್ಟಾದ ಡಿವಿಎಸ್​ ಎಸಿಪಿ ಬಡಿಗೇರ ಅವರನ್ನು ತರಾಟೆ ತೆಗೆದುಕೊಂಡರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top