Tuesday, 22nd August 2017  

Vijayavani

1. MLC ವೀಣಾ ಅಚ್ಚಯ್ಯ ಜತೆ ಅನುಚಿತ ವರ್ತನೆ- ಕಾಂಗ್ರೆಸ್ ಸದಸ್ಯತ್ವಕ್ಕೆ ಟಿ.ಪಿ.ರಮೇಶ್ ರಾಜೀನಾಮೆ- ಕ್ರಮಕ್ಕೂ ಮೊದಲೇ ಎಚ್ಚೆತ್ತ ಕೈ ಮುಖಂಡ 2. ಬಾಲಕೃಷ್ಣಗೆ ಟಿಕೆಟ್​ ನೀಡಿದ್ರೆ, ನಾವ್​ ವೋಟ್ ಹಾಕಲ್ಲ- ಅವರಿಗೆ ಸೀಟ್ ಸಿಕ್ರೆ ಖಂಡಿತಾ ಗೆಲ್ಲಲ್ಲ- ನೆಲಮಂಗಲದ ಕಾಂಗ್ರೆಸ್ ಸಭೆಯಲ್ಲಿ ಗದ್ದಲ 3. ಪಿಎಸ್ಐನಿಂದಲೇ ಪತ್ನಿ ಮೇಲೆ ಹಲ್ಲೆ- ಬ್ಲೇಡ್​ನಿಂದ ಕೈ ಕುಯ್ದ ಸಿರುಗುಪ್ಪ ಪಿಎಸ್​ಐ- ಕೇಸ್​ ವಾಪಾಸ್​ ಪಡೆಯುವಂತೆ ಕಿರುಕುಳ 4. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ- ನಾಳೆ ಬೆಂಗಳೂರಿನಲ್ಲಿ ಮಹತ್ವದ ಸಭೆ- 500 ಕ್ಕೂ ಹೆಚ್ಚು ಮಠಾಧೀಶರು ಭಾಗಿ ಸಾಧ್ಯತೆ 5. ತಲಾಖ್​​​ ನಿಷೇಧ ತೀರ್ಪಿಗೆ ಪ್ರಧಾನಿ ಸ್ವಾಗತ- ಮಹಿಳಾ ಸಬಲೀಕರಣಕ್ಕೆ ಇದು ಪೂರಕ- ಟ್ವಿಟರ್​​​​​ನಲ್ಲಿ ಮೋದಿ ಪ್ರತಿಕ್ರಿಯೆ
Breaking News :

ಪಕ್ಷದಲ್ಲಿ ಗೊಂದಲ ಸೃಷ್ಟಿಸದಂತೆ ಈಶ್ವರಪ್ಪಗೆ ಅಮಿತ್​ ಷಾ ವಾರ್ನಿಂಗ್​

Sunday, 13.08.2017, 12:38 PM       No Comments

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಪಕ್ಷದ ಎಲ್ಲಾ ನಾಯಕರು ಕೆಲಸ ಮಾಡಬೇಕು. ಬಿಎಸ್​ ಯಡ್ಡಿಯೂರಪ್ಪ ಅವರಿಗೆ ಅಗತ್ಯ ಬೆಂಬಲ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಸೂಚಿಸಿದ್ದಾರೆ.

ಭಾನುವಾರ ಬೆಳಗ್ಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ರಾಜಕೀಯ ವ್ಯವಹಾರಗಳ ಸಮಿತ ಸಭೆಯಲ್ಲಿ ಅಮಿತ್​ ಷಾ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಬಿಎಸ್​ವೈ ಅವರೊಂದಿಗೆ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.

ಒದೇ ಸದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಕೆ.ಎಸ್​. ಈಶ್ವರಪ್ಪ ಅವರಿಗೆ ನಿಮ್ಮಿಂದ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಅನಗತ್ಯ ಗೊಂದಲ ಸೃಷ್ಟಿಸಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top