Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ನನ್ಮಗ ತಪ್ಪು ಮಾಡಿಲ್ಲ ಅಷ್ಟೆ: ದಾಖಲೆ ಇದೆಯಾ? ಸೀದಾ ಕೋರ್ಟಿಗೆ ಹೋಗಿ

Friday, 13.10.2017, 4:36 PM       No Comments

ನವದೆಹಲಿ: ತಮ್ಮ ಪುತ್ರ ಜಯ್​ ಶಾ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು. ಆರೋಪ ಸಾಬೀತು ಪಡಿಸಲು ನಿಮ್ಮ ಬಳಿ ದಾಖಲೆ ಇದ್ದರೆ ಅದನ್ನು ಕೋರ್ಟಿಗೆ ಸಲ್ಲಿಸಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ತಮ್ಮ ಪುತ್ರನ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಯ್​ ಶಾ ಒಡೆತನ ಕಂಪನಿಯ ಆದಾಯ ಮತ್ತು ಲಾಭಾಂಶದಲ್ಲಿ ಭಾರೀ ಏರಿಕೆಯಾಗಿದೆ ಎಂಬ ವರದಿಗೆ ಅಮಿತ್​ ಶಾ ಇಂದು ಪ್ರತಿಕ್ರಿಯೆ ನೀಡಿದರು.

ಜಯ್​ ಶಾ ಕಂಪನಿಗೆ ಯಾವುದೇ ಆಧಾರವಿಲ್ಲದೆ ಸಾಲ ನೀಡಲಾಗಿಲ್ಲ. ಜಯ್​ ಶಾ ಲೈನ್​ ಆಫ್​ ಕ್ರೆಡಿಟ್​ನಲ್ಲಿ ಸಾಲ ಪಡೆದಿದ್ದಾರೆ. ಆದರೆ ವರದಿಗಾರ ಇದನ್ನು ತಪ್ಪಾಗಿ ಅಥೈಸಿಕೊಂಡು ವರದಿ ಸಿದ್ಧಪಡಿಸಿದ್ದಾರೆ ಎಂದು ಅಮಿತ್​ ಶಾ ತಿಳಿಸಿದರು.

ಜಯ್​ ಶಾ ವರದಿ ಪ್ರಕಟಿಸಿದ ವೆಬ್​ಸೈಟ್​ ವಿರುದ್ಧ ಈಗಾಗಲೇ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಇಲ್ಲಿ ಭ್ರಷ್ಟಾಚಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಾಂಗ್ರೆಸ್​ ವಿರುದ್ಧ ಹಲವು ಭ್ರಷ್ಟಾಚಾರ ಆರೋಪ ಮಾಡಲಾಗಿತ್ತು. ಅದರೆ ಅವರು ಎಂದೂ ಮಾನನಷ್ಟ ಮೊಕದ್ದಮೆ ದಾಖಲಿಸಲಿಲ್ಲ.

ಕಾಂಗ್ರೆಸ್​ಗೆ ಆ ಧೈರ್ಯವಿಲ್ಲ. ಜಯ್​ ಶಾ ಸುಳ್ಳು ವರದಿಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವ ಧೈರ್ಯ ತೋರಿದ್ದಾನೆ. ಈ ಮೂಲಕ ತನ್ನ ವಿರುದ್ಧ ತನಿಖೆ ನಡೆಸಲು ತಾನೇ ಅವಕಾಶ ಮಾಡಿಕೊಟ್ಟಿದ್ದಾನೆ ಎಂದು ಅಮಿತ್​ ಶಾ ತಿಳಿಸಿದ್ದಾರೆ.

ಯಾವುದೇ ಒಂದು ಕಂಪನಿ 1 ಕೋಟಿ ವಹಿವಾಟು ನಡೆಸಿದೆ ಅಂದ ಮಾತ್ರಕ್ಕೆ ಅದು 1 ಕೋಟಿ ರೂ. ಲಾಭ ಗಳಿಸಿದೆ ಎಂದಲ್ಲಾ. ಆದರೆ ವರದಿಯಲ್ಲಿ ಜಯ್​ ಶಾ ಕಂಪನಿಯ ಲಾಭಾಂಶ 16 ಸಾವಿರ ಪಟ್ಟು ಹೆಚ್ಚಾಗಿದೆ ಎಂದು ತಿಳಿಸಲಾಗಿದೆ. ಹಾಗಾದರೆ ಕಂಪನಿಯ ವಹಿವಾಟು ಸಾಕಷ್ಟು ಹೆಚ್ಚಿದೆ ಎಂದು ಬಿಂಬಿಸಲಾಗಿದೆ. ಆದರೆ ಇದು ಸತ್ಯವಲ್ಲ ಎಂದು ಶಾ ತಿಳಿಸಿದರು.

ಜಯ್​ ಶಾ ಕಂಪನಿ 80 ಕೋಟಿ ರೂ ವಹಿವಾಟು ನಡೆಸಿದಾಗ ಕಂಪನಿ ಒಟ್ಟು 1.5 ಕೋಟಿ ರೂ. ನಷ್ಟದಲ್ಲಿತ್ತು. ಎಲ್ಲಾ ಹಣಕಾಸು ವ್ಯವಹಾರ ಚೆಕ್​ ಮೂಲಕ ನಡೆದಿದೆ. ಇಲ್ಲಿ ಅಕ್ರಮ ಹಣ ವರ್ಗಾವಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಶಾ ತಮ್ಮ ಪುತ್ರನ ಕಂಪನಿಯ ಹಣಕಾಸು ವ್ಯವಹಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಆರ್​ಎಸ್​ಎಸ್​ ಸಹ ಜಯ್​ ಶಾ ವಿರುದ್ಧ ತನಿಖೆ ನಡೆಸಬೇಕಾದರೆ ಅಗತ್ಯ ದಾಖಲೆಗಳು ಲಭ್ಯವಿರಬೇಕು ಎಂದು ತಿಳಿಸಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top