Saturday, 18th August 2018  

Vijayavani

ಭಾರೀ ಮಳೆಗೆ ತತ್ತರಿಸಿದ ಕೇರಳದಲ್ಲಿ ಮೋದಿ ವೈಮಾನಿಕ ಸಮೀಕ್ಷೆ: ಐನೂರು ಕೋಟಿ ನೆರವು ಘೋಷಣೆ        ಕೊಡಗಿಗೆ ಮಳೆ ಸಂಕಷ್ಟ: ಹಾನಿ ಬಗ್ಗೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿಗೆ ಮುಖ್ಯಕಾರ್ಯದರ್ಶಿ ವರದಿ        ಕೊಡಗಿನ ಗೋಣಿಕೊಪ್ಪದಲ್ಲಿ ಮಳೆಯ ಅಬ್ಬರಕ್ಕೆ ಕುಸಿದ ಮನೆ: ನಾಲ್ಕು ಮಂದಿ ದುರ್ಮರಣ        ಚಾರ್ಮಾಡಿ ಘಾಟ್​​ನ ತಿರುವಿನಲ್ಲಿ ಕೆಟ್ಟು ನಿಂತ ವಾಹನ: ಧರ್ಮಸ್ಥಳ ಮಾರ್ಗದಲ್ಲಿ ವಿಪರೀತ ಟ್ರಾಫಿಕ್​ ಜಾಮ್        ಅರಕಲಗೂಡನಲ್ಲಿ 200 ಮನೆಗಳು ಜಲಾವೃತ: ದ್ವೀಪದಂತಾದ ರಾಮನಾಥಪುರ, ಮುಳುಗಿದ ನಿಮಿಷಾಂಭ ದೇಗುಲ       
Breaking News

ಪ್ರತ್ಯೇಕ ರಾಜ್ಯ ಹೋರಾಟವನ್ನು ನಾವು ಬೆಂಬಲಿಸುತ್ತೇವೆ ಎಂದ ಶ್ರೀರಾಮುಲು

Tuesday, 10.07.2018, 8:40 PM       No Comments

ವಿಧಾನಸಭೆ: ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕ ಶ್ರೀರಾಮುಲು ಅವರು ಪ್ರತ್ಯೇಕ ರಾಜ್ಯ ರಚನೆಯ ಮಾಡುವ ಮಾತುಗಳನ್ನಾಡಿದ್ದಾರೆ.
ವಿಧಾನ ಮಂಡಲದ ಬಜೆಟ್​ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಶ್ರೀರಾಮುಲು ಅವರು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆಗೆ ನಮ್ಮ ಬೆಂಬಲವಿದೆ. ಬಜೆಟ್​ನಲ್ಲಿ ಉತ್ತರ ಕರ್ನಾಟಕಕ್ಕೆ ನಿರ್ಲಕ್ಷ್ಯ ಮಾಡಿದ ಹಿನ್ನೆಲೆಯಲ್ಲಿ ನಾವು ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಬೆಂಬಲಿಸುತ್ತೇವೆ.
ಜೆಡಿಎಸ್​ ತಾನು ಪರಾಭವಗೊಂಡಿರುವ ಕ್ಷೇತ್ರಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ಆ ಕ್ಷೇತ್ರಗಳಿಗೆ ಸಮರ್ಪಕ ಯೋಜನೆ, ಅನುದಾನ ನೀಡದೆ ನಿರ್ಲಕ್ಷಿಸಿದೆ. ಸಿಎಂ ಧೋರಣೆಯಿಂದ ಬೇಸತ್ತು ನಾವು ಪ್ರತ್ಯೇಕ ರಾಜ್ಯದ ಹೋರಾಟವನ್ನು ಬೆಂಬಲಿಸುವ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Back To Top