Tuesday, 20th March 2018  

Vijayavani

ಮುಂಬಡ್ತಿ ಕೇಸ್​​ನಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ- ಕಾಲಾವಕಾಶ ನೀಡೋಕೆ ಸುಪ್ರೀಂ ನಕಾರ- ತೀರ್ಪು ಪಾಲಿಸೋಕೆ ಒಂದು ತಿಂಗಳು ಡೆಡ್​​ಲೈನ್​        ಐಸಿಸ್​ನಿಂದ 39 ಭಾರತೀಯರ ಹತ್ಯೆ- ಮಾಹಿತಿ ಬಿಚ್ಚಿಟ್ಟ ಸುಷ್ಮಾ ಸ್ವರಾಜ್​- ಸಾವಿನಲ್ಲೂ ರಾಜಕೀಯ ಅಂತಾ ವಿಪಕ್ಷಗಳಿಗೆ ಚಾಟಿ        ಜೆಡಿಎಸ್​ ರೆಬೆಲ್ಸ್​ ಅಡ್ಡಮತದಾನ ಪ್ರಕರಣ- ನಾಳೆಯೇ ತೀರ್ಪಿಗೆ ಹೈಕೋರ್ಟ್ ಸೂಚನೆ- ಎಜಿ ಕರೆಸಿ ವಿಚಾರಿಸಿದ ಸ್ಪೀಕರ್​        ಮೆಟ್ರೋ ನೌಕರರ ಮುಷ್ಕರ ಇಲ್ಲ- ಬೇಡಿಕೆ ಈಡೇರಿಕೆಗೆ ತಿಂಗಳ ಗಡುವು- ಸಂಧಾನ ಸೂತ್ರಕ್ಕೆ BMRCLಗೆ ಹೈಕೋರ್ಟ್ ಸಲಹೆ        ವೀರಶೈವ ಲಿಂಗಾಯತ ಎರಡೂ ಒಂದೇ- ಸರ್ಕಾರದ ಕ್ರಮ ಅನ್ಯಾಯದ ಪರಮಾವಧಿ- ಸಿಎಂ ವಿರುದ್ಧ ಶಾಮನೂರು ಶಿವಶಂಕರಪ್ಪ ಗರಂ       
Breaking News

ಬಿಜೆಪಿಗೆ ಪ್ರತಿಯಾಗಿ ದೆಹಲಿ ಚಲೋಗೆ ಕರೆ ನೀಡಿದ ಸಿಎಂ ಸಿದ್ದು!

Tuesday, 05.09.2017, 12:39 PM       No Comments

ಬೆಂಗಳೂರು: ಬಿಜೆಪಿ ಕೈಗೊಂಡಿರುವ ಮಂಗಳೂರು ಚಲೋ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು ಕಾನೂನನ್ನು ಕೆಗೆತ್ತಿಕೊಂಡರೆ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು BSY ನನ್ನ ವಿರುದ್ಧ ಏಕವಚನದಲ್ಲಿ ಮಾತಾಡಿರಬಹುದು. ಆದರೆ ನಾನು ಬಿಎಸ್‌ವೈ ಮಟ್ಟಕ್ಕೆ ಇಳಿಯುವುದಿಲ್ಲ. ಕಾನೂನನ್ನು ಕೈಗೆತ್ತಿಕೊಂಡು ಮಂಗಳೂರು ಚಲೋ ಮಾಡುವುದಕ್ಕಿಂತ ದೆಹಲಿ ಚಲೋ ಮಾಡಿದ್ದರೆ ನಾವೂ ಕೂಡ ಬೆಂಬಲ ಕೊಡುತ್ತೇವೆ ಎಂದಿದ್ದಾರೆ.

ಈ ಮೊದಲೇ ಬಿಜೆಪಿಗೆ ಬೈಕ್‌ Rally ಬೇಡ ಎಂದು ಹೇಳಿದ್ದೆವು. ಪಾದಯಾತ್ರೆ ಮಾಡಿದ್ರೆ ನಮ್ಮದೇನು ವಿರೋಧವಿಲ್ಲ. ಮಂಗಳೂರು ಚಲೋ ಬಿಟ್ಟು ಸಾಲ ಮನ್ನಾ ಮಾಡಿ ಅಂತ ದೆಹಲಿ ಚಲೋ ಮಾಡಲಿ. ಸಮಾಜದ ಶಾಂತಿಯನ್ನು ಕದಡುವ ಯಾವುದೇ ಕೆಲಸವನ್ನು ಸರ್ಕಾರ ಸಹಿಸಲ್ಲ ಅಂತ ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಬಿಜೆಪಿಯವರು ಬಿಡುಗಡೆ ಮಾಡಿರುವ ಬುಕ್ ಓದಿದ್ದೀರಾ? ಅಂತ ಪತ್ರಕರ್ತರನ್ನೇ ಪ್ರಶ್ನೆ ಮಾಡಿದ ಸಿಎಂ, ಅದರಲ್ಲಿ ಸಮಾಜವನ್ನು ಪ್ರಚೋದನೆ ಕೊಡುವ ರೀತಿ ಇದೆ. ಇವರು ಹಿಂದೂ ಪರ ಇಲ್ಲ. ಸಮಾಜ ಹಾಳು ಮಾಡುವವರ ಪರ ಇದ್ದಾರೆ ಎಂದು ತಿಳಿಸಿದ್ದಾರೆ.(ದಿಗ್ವಿಜಯ ನ್ಯೂಸ್‌)

Leave a Reply

Your email address will not be published. Required fields are marked *

Back To Top