Saturday, 26th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ಎನ್​ಡಿಎ ಅಭ್ಯರ್ಥಿ ರಾಮನಾಥ ಕೋವಿಂದ ಗೆಲುವು ಖಚಿತ

Monday, 17.07.2017, 12:36 PM       No Comments

ನವದೆಹಲಿ: ದೇಶದ 14 ನೇ ರಾಷ್ಟ್ರಪತಿ ಸ್ಥಾನಕ್ಕೆ ನಡೆದಿರುವ ಚುನಾವಣೆಯಲ್ಲಿ ಹೆಚ್ಚಿನ ಬೆಂಬಲ ಪಡೆದಿರುವ ಎನ್​ಡಿಎ ಅಭ್ಯರ್ಥಿ ರಾಮನಾಥ ಕೋವಿಂದ ಅವರು ತಮ್ಮ ಪ್ರತಿಸ್ಪರ್ಧಿ ಮೀರಾ ಕುಮಾರ್​ ಅವರು ವಿರುದ್ಧ ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಸಂಸತ್​ ಭವನದಲ್ಲಿ ಸೋಮವಾರ ಬೆಳಗ್ಗೆ ಮೊದಲಿಗರಾಗಿ ಮತ ಚಲಾಯಿಸಿದ್ದೆ ಅಲ್ಲದೆ ಕೋವಿಂದ ಅವರಿಗೆ ಅದಾಗಲೇ ಶುಭಾಶಯವನ್ನೂ ಹೇಳಿದರು. ಅಷ್ಟರಮಟ್ಟಿಗೆ 71 ವರ್ಷದ ಕೋವಿಂದ ಅವರ ಗೆಲುವು ಖಚಿತವಾಗಿದೆ. ಜುಲೈ 20 ಗುರುವಾರ ಮತ ಎಣಿಕೆ ನಡೆಯಲಿದ್ದು, ಜುಲೈ 25 ರಂದು ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬಿಜೆಪಿ ನೇತೃತ್ವದ ಎನ್​ಡಿಎ ಅಭ್ಯರ್ಥಿಗೆ ತಮಿಳುನಾಡಿನ ಎಐಎಡಿಎಂಕೆ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಬೆಂಬಲ ಸೂಚಿಸಿವೆ. ಈ ಹಿನ್ನೆಲೆಯಲ್ಲಿ ಶೇ. 70ರಷ್ಟು ಮತಗಳು ರಾಮನಾಥ್​ ಅವರಿಗೆ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಕೋವಿಂದ ಅವರ ಗೆಲುವು ಸುಲಭವಾಗಲಿದೆ.
ನರೇಂದ್ರ ಮೋದಿ ದಲಿತ ಸಮುದಾಯದ ಕೋವಿಂದ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮೂಲಕ ಪ್ರಬಲವಾದ ದಾಳ ಉರುಳಿಸಿದ್ದರು. ಇದು ವಿರೋಧ ಪಕ್ಷದಲ್ಲಿ ಬಿರುಕನ್ನು ಉಂಟು ಮಾಡಿತ್ತು.

ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​ ನೇತೃತ್ವದ ಜೆಡಿ (ಯು) ಬಿಹಾರ ರಾಜ್ಯಪಾಲರಾಗಿದ್ದ ಕೋವಿಂದ್​ ಅವರಿಗೆ ಬೆಂಬಲ ಸೂಚಿಸಿದೆ. ಜತೆಗೆ ಕಳೆದ 2 ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮ ಮೈತ್ರಿಕೂಟದ ವಿರುದ್ಧ ಮತ ಚಲಾಯಿಸಿದ್ದ ಶಿವಸೇನೆ ಸಹ ಈ ಸಲ ಎನ್​ಡಿಎಗೆ ಬೆಂಬಲ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕೋವಿಂದ ಅವರಿಗೆ ಹೆಚ್ಚಿನ ಮತ ಲಭ್ಯವಾಗುವ ಅಂದಾಜಿದೆ.

ರಾಷ್ಟ್ರಪತಿ ಚುನಾವಣೆ ಮತ್ತು ಮುಂಗಾರು ಅಧಿವೇಶನದ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸೋಮವಾರ ಬೆಳಗ್ಗೆ ಸಭೆ ನಡೆಸಿದವು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್​ ಆಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಆತ್ಮಸಾಕ್ಷಿಗೆ ಕರೆಗೆ ಓಗೊಟ್ಟು ಮತ ಚಲಾಯಿಸುವಂತೆ ಕೋರಿದರು.

ಜತೆಗೆ ವಿರೋಧ ಪಕ್ಷಗಳಿಗೆ ಗೆಲುವಿಗೆ ಅಗತ್ಯವಿರುವಷ್ಟು ಮತಗಳ ಬೆಂಬಲವಿಲ್ಲ. ಆದರೂ ನಾವು ಹೋರಾಟವನ್ನು ಮುಂದುವರೆಸಬೇಕಿದೆ. ಭಾರತವನ್ನು ಸಂಕುಚಿತ ಮನಸ್ಸಿನ, ವಿಭಜನೆಯನ್ನು ಬಯಸುವ ಮತ್ತು ಕೋಮುವಾದಿ ದೃಷ್ಟಿಕೋನ ಹೊಂದಿರುವವರ ಒತ್ತೆಯಾಳಾಗಲು ನಾವು ಬಿಡುವುದಿಲ್ಲ ಎಂದು ಸೋನಿಯಾ ತಿಳಿಸಿದರು.

(ಏಜೆನ್ಸೀಸ್​)

ರಾಷ್ಟ್ರಪತಿ ಪಟ್ಟ ಯಾರಿಗೆ?

Leave a Reply

Your email address will not be published. Required fields are marked *

Back To Top