Sunday, 23rd September 2018  

Vijayavani

ಯಾರಿಂದಲೂ ದಬ್ಬಿಸಿಕೊಂಡು ಹೋಗಲ್ಲ - ಕೆಲಸ ಮಾಡದಿದ್ರೆ ಗೌರಯುತ ನಿರ್ಗಮನ - ಎಚ್‌ಡಿಕೆಯಿಂದ ರಾಜಕೀಯ ನಿವೃತ್ತಿ ಮಾತು        ಅಕ್ಟೋಬರ್‌ 10 ರೊಳಗೆ ಸಂಪುಟ ವಿಸ್ತರಣೆ - ಅತೃಪ್ತಿ ಶಮನಕ್ಕೆ ಶೀಘ್ರ ಕ್ರಮ - ಬ್ಲ್ಯಾಕ್‌ಮೇಲರ್‌ಗಳಿಗೆ ವೇಣುಗೋಪಾಲ್‌ ವಾರ್ನಿಂಗ್‌        ದುನಿಯಾ ವಿಜಿ ದಾದಾಗಿರಿ - ವಿಕ್ರಂ ಆಸ್ಪತ್ರೆಗೆ ಸಿಸಿಬಿ ಪೊಲೀಸರ ಭೇಟಿ - ಮಾರುತಿ ಬಳಿ ಹೇಳಿಕೆ ಪಡೆಯದೆ ಪೊಲೀಸರು ವಾಪಸ್‌        ಜಿಮ್ ಟ್ರೈನರ್ ಮೇಲೆ ಹಲ್ಲೆ, ಕಿಡ್ನಾಪ್ ಕೇಸ್ - ಫಿಲಂ ಚೇಂಬರ್​ನಿಂದ ನಾಳೆ ಮೀಟಿಂಗ್ - ದುನಿಯಾ ವಿಜಿ ವಿರುದ್ಧ ಕ್ರಮ ಸಾಧ್ಯತೆ        ಆಯುಷ್ಮಾನ್ ಭಾರತ್ ಯೋಜನೆ ಜಾರಿ - 50 ಕೋಟಿ ಜನರಿಗೆ ಲಾಭ, 5 ಲಕ್ಷವರೆಗೆ ವಿಮೆ - ರಾಂಚಿಯಲ್ಲಿ ಪ್ರಧಾನಿಯಿಂದ ಚಾಲನೆ        ಆಂಧ್ರದಲ್ಲಿ ಹಾಡಹಗಲೇ ನಕ್ಸಲರ ಅಟ್ಟಹಾಸ - ಶಾಸಕ, ಮಾಜಿ ಶಾಸಕನ ಭೀಕರ ಹತ್ಯೆ - 50ಕ್ಕೂ ಹೆಚ್ಚು ನಕ್ಸಲರಿಂದ ರಕ್ತದೋಕುಳಿ       
Breaking News

ಲೋಕಸಭೆ ಚುನಾವಣೆವರೆಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿಎಸ್​ವೈ ಮುಂದುವರಿಕೆ

Tuesday, 10.07.2018, 2:33 PM       No Comments

ಬೆಂಗಳೂರು: 2019ರ ಲೋಕಸಭೆ ಚುನಾವಣೆಯವರೆಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಮುಂದುವರೆಯಲಿದ್ದಾರೆ. ಬಿಎಸ್​ವೈ ಅವರ ಸಾರಥ್ಯದಲ್ಲೇ ರಾಜ್ಯದಲ್ಲಿ ಬಿಜೆಪಿ ಲೋಕಸಭೆ ಚುನಾವಣೆಯನ್ನು ಎದುರಿಸಲಿದೆ ಎಂದು ಅಧ್ಯಕ್ಷರ ಬದಲಾವಣೆ ಬಯಸಿದ್ದವರಿಗೆ ಹೈಕಮಾಂಡ್​ ಖಡಕ್​ ಸೂಚನೆ ನೀಡಿದೆ.

ಬಿಎಸ್​ವೈ ವಿಧಾನಸಭೆ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಎರಡೂ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಅವರ ವೇಗಕ್ಕೆ ಸಾಥ್​ ನೀಡುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್​ ತಾಕೀತು ಮಾಡಿದೆ.

ವಿಧಾನಸಭೆ ಅಧಿವೇಶನ ಮುಗಿದ ಬಳಿಕ ಬಿಎಸ್​ವೈ 28 ಲೋಕಸಭೆ ಕ್ಷೇತ್ರಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 25 ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು ಎಂದು ಬಿಜೆಪಿ ಹೈಕಮಾಂಡ್​ ಬಿಎಸ್​ವೈಗೆ ಗುರಿ ನೀಡಿದೆ ಎಂದು ತಿಳಿದು ಬಂದಿದೆ.

ಆಗಸ್ಟ್​ ಮೊದಲ ವಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರು ರಾಜ್ಯಕ್ಕೆ ಆಗಮಿಸಲಿದ್ದು, ಲೋಕಸಭೆ ಚುನಾವಣೆಗೆ ರಣತಂತ್ರ ರೂಪಿಸುವ ಸಂಬಂಧ ರಾಜ್ಯ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.

Leave a Reply

Your email address will not be published. Required fields are marked *

Back To Top